ಮಸೀದಿಗಳಲ್ಲಿ ಮಹಿಳಾ ಪ್ರವೇಶ: ಕೇರಳ ಸಿಪಿಂ ಹೇಳಿಕೆ ಗಲಭೆ ಸೃಷ್ಟಿಯ ಯತ್ನ- ಕಾಂಗ್ರೆಸ್

ಕಣ್ಣೂರ್, ಅ.12: ಸುನ್ನಿ ಮಸೀದಿಗಳಿಗೆ ಮುಸ್ಲಿಮ್ ಮಹಿಳೆಯರನ್ನು ಹೋಗಲು ಬಿಡಬೇಕೆಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‍ರ ಹೇಳಿಕೆ ಮಲಬಾರ್ ಪ್ರಾಂತದಲ್ಲಿ ಗಲಭೆ ಸೃಷ್ಟಿಸುವ ಯತ್ನವಾಗಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರ ಹೇಳಿದ್ದಾರೆ.

ಕಾಂಗ್ರೆಸ್ ಎಲ್ಲ ಕಾಲದಲ್ಲಿಯೂ ವಿಶ್ವಾಸಿಗಳ ಜೊತೆಯಿದೆ. ಊರಿನ ಶಾಂತಿಯ ವಾತಾವರಣವನ್ನು ಕದಡಲು ಸಿಪಿಎಂ ಯತ್ನಿಸುತ್ತಿದೆ. ಶಬರಿಮಲೆಗೆ ಮಹಿಳಾ ಪ್ರವೇಶ ವಿಷಯದಲ್ಲಿ ಧ್ವಜ ಹಿಡಿದು ಪ್ರತಿಭಟನೆಗೆ ಕಾಂಗ್ರೆಸ್ಸಿಗೆ ಇಳಿಯುವುದಿಲ್ಲ ಎಂದು ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದರು.

ಕೇರಳದ ಅಖಿಲ ಭಾರತ ಹಿಂದೂ ಮಹಾಸಭಾ ಕೇರಳ ಹೈಕೋರ್ಟಿನಲ್ಲಿ ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅನುಮತಿಸಿಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅದು ತಿರಸ್ಕøತಗೊಂಡಿದೆ.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *