ಮದುವೆಯ ನಂತರ ಹೆಣ್ಣಿನ ವಾಸ ಸ್ಥಳ?

ಪ್ರಶ್ನೆ: ಹೆಣ್ಣಿಗೆ ಮದುವೆಯ ನಂತರ ತವರು ಮನೆ ಒಳ್ಳೆಯದೋ ಅಥವಾ ಗಂಡನ ಮನೆಯೋ? ಬಾಧ್ಯತೆಯ ದೃಷ್ಟಿಯಿಂದ ಯಾವುದು ಶ್ರೇಷ್ಠ ? ತಿಳಿಸಿ.

ಉತ್ತರ: ಮದುವೆಯಾದ ಹೆಣ್ಣು ಗಂಡನ ಮನೆಯಲ್ಲಿರುವುದೇ ಉತ್ತಮ. ಗಂಡನ ಮನೆಯಲ್ಲಿ ಆತನ ತಂದೆ-ತಾಯಿಯನ್ನು ತನ್ನ ಸ್ವಂತ ತಾಯಿ -ತಂದೆಯಂತೆಯೇ ಪ್ರೀತಿಸಿ ಗೌರವಿಸಿ ನಡೆದುಕೊಳ್ಳಬೇಕು. ಪತಿಯ ಅನುಸರಣೆ-ಒಳಿತಿನಲ್ಲಿ-ಆಕೆಯ ದೊಡ್ಡ ಬಾಧ್ಯತೆಯಾಗಿದೆ. ಅದೇ ರೀತಿ ಪತಿಯ ಸಹೋದರರು, ಸಹೋದರಿಯರೊಂದಿಗೂ ಅತ್ಯುತ್ತಮ ರೀತಿಯಲ್ಲಿ ವ್ಯವಹರಿಸಬೇಕು.

ಸಾಮಾನ್ಯವಾಗಿ ಮದುವೆಯಾಗುವ ಪುರುಷನು ಪ್ರತ್ಯೇಕ ಮನೆ ಮಾಡಿಕೊಂಡು ವಾಸಿಸುವುದು ಶರೀಅತ್‍ನ ಇಂಗಿತವಾಗಿದೆ. ಮುಹಮ್ಮದ್(ಸ) ಅವರು ತಮ್ಮ ಪುತ್ರಿ ಫಾತಿಮಾ(ರ) ಮತ್ತು ಅವರ ಪತಿ ಅಲಿ ಬಿನ್ ಅಬೂತಾಲಿಬ್‍ರನ್ನು ಪ್ರತ್ಯೇಕ ಮನೆಯಲ್ಲಿ ವಾಸಗೊಳಿಸಿರುವುದು ನಮಗೆ ತಿಳಿದ ವಿಷಯ.

ಪ್ರತ್ಯೇಕ ಮನೆಯಲ್ಲಾಗಲಿ, ಗಂಡನ ಮನೆಯಲ್ಲಾಗಲಿ ವಾಸಿಸುವುದರಿಂದ ತವರು ಮನೆಯ ಬಾಧ್ಯತೆಯೇನೂ ಕಡಿಮೆಯಾಗುವುದಿಲ್ಲ. ತಂದೆ-ತಾಯಿಯ ಯೋಗ ಕ್ಷೇಮವನ್ನು ಆಗಾಗ ವಿಚಾರಿಸುತ್ತಿರಬೇಕಾದುದು, ಅಗತ್ಯ ಬಿದ್ದಾಗ ಅವರ ಸೇವೆಗಾಗಿ ಧಾವಿಸಿ ಬರುವುದು ಮಗಳ ಕರ್ತವ್ಯವಾಗಿದೆ.

`ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂಬ ನೀತಿ ಇಸ್ಲಾಮಿನಲ್ಲಿಲ್ಲ. ಓರ್ವ ಹೆಣ್ಣಿನ ಮಟ್ಟಿಗೆ ಪತಿಯ ಮನೆಯೂ ತವರು ಮನೆಯೂ ಸಮಾನವಾಗಿದೆ. ಹೆಣ್ಣು ಮತ್ತು ಗಂಡಿನ ಕುಟುಂಬಗಳು ಬೇರೆ ಬೇರೆಯಾಗಿರುವುದರಿಂದ ಎರಡೂ ಕುಟುಂಬಗಳ ಮಧ್ಯೆ ಸೌಹಾರ್ದ ಸಂಬಂಧವನ್ನು ಬೆಳೆಸಬೇಕಾದುದೂ ಹೆಣ್ಣಿನ ಕರ್ತವ್ಯವಾಗಿದೆ.

ಆದ್ದರಿಂದ ಪತಿಯ ಮನೆಯ ವಿಷಯವನ್ನು ಗಂಡನ ಮನೆಯಲ್ಲೂ ಗಂಡನ ಮನೆಯ ವಿಷಯ ಪತಿಯ ಮನೆಯಲ್ಲೂ ಪ್ರಸ್ತಾಪಿಸದೆ ಗೌಪ್ಯವನ್ನು ಕಾಪಾಡಬೇಕು. ಅನ್ಯಥಾ ಪರಸ್ಪರ ಅನುಮಾನ, ಸಂದೇಹಗಳು ಮೂಡ ತೊಡಗಿದರೆ ಕುಟುಂಬಗಳು ನರಕ ಸದೃಶವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *