ಲಿಂಗ ಭೇದವಿಲ್ಲದೆ ಸಂಗಾತಿ ಆಯ್ಕೆಗೆ ವಿರೋಧವಿಲ್ಲ; ಸುಪ್ರೀಂಕೋರ್ಟು

ಹೊಸದಿಲ್ಲಿ, ಜು.11: ಸಂಗಾತಿಯನ್ನು ಆಯ್ಕೆ ಮಾಡುವಾಗ ಲಿಂಗ ಭೇದ ತೋರಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟಿನ ಚೀಫ್ ಜಸ್ಟಿಸ್ ಅಧ್ಯಕ್ಷತೆಯ ಸಂವಿಧಾನ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಪೀಠವು ಸಲಿಂಗರತಿ ಕಾನೂನು ಬದ್ಧಗೊಳಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಲಿಂಗರತಿ ಕ್ರಿಮಿನಲ್ ಅಪರಾಧ ಎಂದು ತಿಳಿಸುವ ಭಾರತ ಶಿಕ್ಷಾ ನಿಯಮದ 277ನೆ ವಿಧಿಯನ್ನು ಸುಪ್ರೀಂಕೋರ್ಟು ಅನುಮೋದಿಸಿತ್ತು. ಆದರೆ ಇದರ ವಿರುದ್ಧ ಅರ್ಜಿ ಸಲ್ಲಿಸಲಾಗಿದ್ದು ಸಂವಿಧಾನ ಪೀಠ ಈ ಅರ್ಜಿಯಲ್ಲಿ ವಿಚಾರಣೆ ನಡೆಸುತ್ತಿದೆ.

ಓರ್ವ ತನ್ನಿಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸಂವಿಧಾನದ 21ನೆ ಪರಿಚ್ಛೇದದಡಿಯಲ್ಲಿ ಅದಕ್ಕೆ ಅನುಮತಿಯಿದೆ. ಸಂಗಾತಿ ಎನ್ನುವಾಗ ಎದುರು ಲಿಂಗದ ವ್ಯಕ್ತಿಯೆಂದು ಅರ್ಥವಲ್ಲ ಎಂದು ಜಸ್ಟಿಸ್ ಡಿ.ವೈ. ಚಂದ್ರಚೂಡ ಹೇಳಿದ್ದಾರೆ. ಪ್ರಕರಣದಲ್ಲಿ ಸಂವಿಧಾನದ 377ನೆ ವಿಧಿಯ ಸಾಧ್ಯತೆಯನ್ನು ಮಾತ್ರ ಪರಿಶೀಲಿಸಲಾಗುವುದು ಎಂದು ವಿಚಾರಣೆಯ ಆರಂಭದಲ್ಲಿಯೇ ಚೀಫ್ ಜಸ್ಟಿಸ್ ದೀಪಕ್ ಮಿಶ್ರ ಹೇಳಿದ್ದರು.

ಆದರೆ ಅರ್ಜಿದಾರರು ಲೈಂಗಿಕ ಅಲ್ಪಸಂಖ್ಯಾತರಿಗೆ ಬದುಕುವ ಹಕ್ಕು ಇರಬೇಕೆಂದು ವಾದಿಸಿದ್ದು ವೈಯಕ್ತಿಕ ಸ್ವಾತಂತ್ರ್ಯದ ವಿಷಯ ಇದಾದ್ದರಿಂದ ಹಳೆಯ ಕಾನೂನನ್ನು ಸಮಾಜದಲ್ಲಿ ನಡೆಯುವ ಬದಲಾವಣೆಯ ತಕ್ಕಂತೆ ಪರಿಷ್ಕರಿಸುವ ಅಗತ್ಯವಿದೆಯೆಂದು ದೂರುದಾರರ ಪರ ವಕೀಲರು ಕೋರ್ಟಿನ ಗಮನ ಸೆಳೆದಿದ್ದಾರೆ.

Check Also

ಪ್ರವಾದಿ ಮುಹಮ್ಮದ್ ರನ್ನು ಎಲ್ಲರೂ ಓದಬೇಕು: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ನ.18: ಶಾಂತಿಯ ಸಂದೇಶ ಸಾರಿದ ಮುಹಮ್ಮದ್ ಪೈಗಂಬರ್‌ರನ್ನು ಎಲ್ಲ ಭಾಷೆ ಹಾಗೂ ಧರ್ಮದ ಜನರು ಓದಬೇಕು. ಪೈಗಂಬರ್‌ರನ್ನು ಓದದೆ …

Leave a Reply

Your email address will not be published. Required fields are marked *