Breaking News
Home / ಲೇಖನಗಳು / ಧರ್ಮದ ಉತ್ಪತ್ತಿ

ಧರ್ಮದ ಉತ್ಪತ್ತಿ

ಕಾರ್ಲ್ ಮಾಕ್ರ್ಸ್ ಮನುಷ್ಯನೇ ಧರ್ಮವನ್ನು ಸೃಷ್ಟಿಸಿದನು, ಧರ್ಮವು ಮನುಷ್ಯನನ್ನು ಸೃಷ್ಟಿಸಿದ್ದಲ್ಲ ಎಂದು (ತನ್ನ ಎ ಕಂಟ್ರಿಬ್ಯೂಶನ್ ಟು ದ ಕ್ರಿಟಿಕ್ ಆಫ್ ಹೇಗಲ್ಸ್ ಫಿಲಾಸಫಿ ಆಫ್ ಲಾ ಎಂಬ ಪ್ರಬಂಧದಲ್ಲಿ) ವಾದಿಸಿದ್ದಾನೆ. ಇದೇ ಪ್ರಬಂಧದಲ್ಲಿ ಆತ ಧರ್ಮವನ್ನು ಅಫೀಮು (ಮಾದಕ ವಸ್ತು) ಎಂದು ಕೂಡ ಬಿಂಬಿಸುತ್ತಿದ್ದಾನೆ. ಅವನ ವಾದ ಪ್ರಕಾರ ಧರ್ಮಕ್ಕೆ ಪ್ರತಿಭಟನೆಯ ಸ್ವಭಾವ ಇರುವಂತೆ ಕಣ್ಣಾಮುಚ್ಚಾಲೆಯಾಟದ ಸ್ವಭಾವವೂ ಇದೆ. ಅಂದರೆ “ಧಾರ್ಮಿಕ ತಪಸ್ಸು ನೈಜ ತಪಸ್ಸಿನ ಒಂದು ಹೊರ ತೋರ್ಪಡಿಕೆಯಾಗಿದೆ, ಜೊತೆಗೆ ನೈಜ ತಪಸ್ಸಿನ ವಿರುದ್ಧವಾದ ಒಂದು ಪ್ರತಿಭಟನೆ ಕೂಡ ಆಗಿದೆ. ಧರ್ಮವು ದೌರ್ಜನ್ಯಕ್ಕೊಳಗಾದ ಮನುಷ್ಯನಿಗಿರುವ ಸಂತೈಕೆಯಾಗಿದೆ ಮತ್ತು ಹೃದಯ ಬರಡಾಗಿರುವ ಲೋಕದ ಹೃದಯವೂ ಆವೇಶರಹಿತ ಪರಿಸ್ಥಿತಿಗೆ ಆವೇಶವೂ ಮನುಷ್ಯನ ಮಾದಕ ವಸ್ತುವೂ ಧರ್ಮ ಆಗಿದೆ” ಎಂದು ಇದೇ ಕೃತಿಯಲ್ಲಿ ಮಾಕ್ರ್ಸ್ ಸಿದ್ಧಾಂತಿಸಿದನು.

ಧರ್ಮದ ಕುರಿತು ಮಾಕ್ರ್ಸ್ ನ ವಾದ ಏನೇ ಇರಲಿ, ಪ್ರಸಿದ್ಧ ಇಸ್ಲಾಮೀ ದಾರ್ಶನಿಕ ಅಲಿಝಾ ಇಝ್ಝತ್ ಬೊಗೊವಿಚ್ ಇಸ್ಲಾಮ್ ಧರ್ಮವನ್ನು ಮನುಷ್ಯನನ್ನು ಮನುಷ್ಯನನ್ನಾಗಿಸುವ ಬೋಧನೆಯೆಂದಿರುವರು ಅಥವಾ ಯಥಾರ್ಥ ಮನುಷ್ಯನ್ನು ಸೃಷ್ಟಿಸುವ ಪರಿಶ್ರಮ ಧರ್ಮ ಆಗಿದೆ. ಅವರು ಇಸ್ಲಾಮ್ ಧರ್ಮವನ್ನು ಆತ್ಮ ಮತ್ತು ಶರೀರ ಪರಸ್ಪರ ಸಮತೋಲನದಲ್ಲಿರುವ ಮನುಷ್ಯನನ್ನು ಸೃಷ್ಟಿಸುವ ಕರೆಯೋಲೆಯಾಗಿದೆ ಎಂದರು . (ಇಸ್ಲಾಂ ಬಿಟ್ವೀನ್ ಈಸ್ಟ್ ಆಂಡ್ ವೆಸ್ಟ್ ಕೃತಿಯನ್ನು ನೋಡಿರಿ).

ಯೇಸುಕ್ರಿಸ್ತರು ತನ್ನ ಅಪೊಸ್ತಲರಿಗೆ(ತಮ್ಮ ಶಿಷ್ಯರಿಗೆ) ನಿಮ್ಮನ್ನು ನಾನು ಮನುಷ್ಯರನ್ನು ಹಿಡಿಯುವವರನ್ನಾಗಿಸುವೆ(ನೈಜ ಮುನುಷ್ಯರನ್ನು ರೂಪಿಸುವವರನ್ನಾಗಿಸುವೆ) ಎಂದು ಬೋಧಿಸಿದ್ದಾರೆ.

ಪವಿತ್ರ ಕುರ್‍ಆನ್‍ನಲ್ಲಿ ಬರುವ ನಫ್ಸ್ ಮುತ್‍ಮಇನ್ನ್ ಮತ್ತು ಕಂಫ್ಯೂಚಿಯನ್(ಚೀನದ ಧರ್ಮ) ದರ್ಶನದ ಚುಂಟ್ಸುಎಂಬ ಪದ ಪ್ರಯೋಗಗಳು ಮನುಷ್ಯನ ಮನುಷ್ಯತ್ವದ ಪರಿಪೂರ್ಣತೆಯನ್ನು ಬಿಂಬಿಸುವ ಗುರುತುಗಳಾಗಿವೆ. ಯಥಾರ್ಥದಲ್ಲಿ ಧರ್ಮವು ಮನುಷ್ಯನು ತಾನೇ ತನ್ನಲ್ಲಿ ಯಥಾರ್ಥ ಮನುಷ್ಯನನ್ನು ಸೃಷ್ಟಿಸಬೇಕು ಅಥವಾ ರೂಪಿಸಬೇಕೆಂದು ಕಲಿಸಿ ಕೊಡುವುದು. ಮನುಷ್ಯ ಬರೇ ಒಂದು ಜೀವಿ ಎನ್ನುವುದರಿಂದ ( ಜೀವವಿರುವ ವ್ಯಕ್ತಿ ಅರ್ಥಾತ್ ಅಲಿ ಶರೀಅತ್ತಿ ಬಶರ್ ಎನ್ನುತ್ತಾರೆ) ಪ್ರತ್ಯೇಕಗೊಂಡು ಸಾಕ್ಷಾತ್ ಮನುಷ್ಯ (ಶರಿಅತ್ತಿ ಇನ್ಸಾನ್ ಎನ್ನುತ್ತಾರೆ) ಆಗುವುದು ಈ ತಳಹದಿಯಲ್ಲಿ. ಅಂದರೆ ಮನುಷ್ಯನಿಂದಲೇ ನೈಜ ಮನಷ್ಯ ರೂಪುಗೊಳ್ಳುತ್ತಾನೆ ಎಂದರ್ಥ. ಮನುಷ್ಯನನ್ನು ಧರ್ಮ ನೈಜ ಮನುಷ್ಯನಾಗಿಸುವುದು. ಅದು ಮನುಷ್ಯನಿಗೆ ಹೊಸ ಮತ್ತು ನೈಜ ರೂಪು ನೀಡುತ್ತದೆ. ವೇದಾಧ್ಯಯನ ಮುಗಿದ ಬ್ರಾಹ್ಮಣನನ್ನು ದ್ವಿಜ( ಮರು ಸೃಷ್ಟಿಗೊಂಡವನು) ಕರೆದಿದ್ದು ಈ ಸಂಕಲ್ಪದ ಆಧಾರದಲ್ಲಿ ಆಗಿರಬಹುದು. ನಾವು ಮನುಷ್ಯನನ್ನು ಮಾಕ್ರ್ಸ್ ನ ಸಿದ್ಧಾಂತದಲ್ಲಿ ನಿಂತು ಧರ್ಮವನ್ನು ವೀಕ್ಷಿಸುವುದಿದ್ದರೆ ಸ್ವಯಂ ತನ್ನನ್ನೆ ಗುರುತಿಸದ, ಗುರುತಿಸಿಯೂ ಸ್ವಯಂ ಕಳೆದು ಹೋದ ಮನುಷ್ಯನ ಆತ್ಮ ಪ್ರಜ್ಞೆ ಮತ್ತು ಸಂವೇದನೆಯಾಗಿದೆ. ( ಎ ಕಂಟ್ರಿಬ್ಯೂಶನ್ ಟುದ ಕ್ರಿಟಕಿಕ್ ಆಫ್ ಹೆಗೆಲ್ಸ್ ಫಿಲೊಸಫಿ ಆಫ್ ಲಾ)

ಆದರೆ, ಧರ್ಮ ನಿಜವಾಗಿ ಮನುಷ್ಯನ ಪಾಲಿಗೆ ಸ್ವಯಂ ಶೋಧಿಸಿಕೊಳ್ಳುವುದಕ್ಕಿರುವ ಒಂದು ಮಾರ್ಗದರ್ಶಿಯಾಗಿದೆ. ವೇದಗಳಲ್ಲಿ ಆತ್ಮಶೋಧನೆಗೆ ಪ್ರೇರೇಣೆಯಿರುವುದನ್ನು ಕಾಣುತ್ತೇವೆ. ವೇದೋಪನಿಷತ್ತುಗಳು ಸ್ವಯಂ ಅರಿತವನು ದೇವನನ್ನು ಅರಿತವನು ಆಗುವುದು ಸಾಧ್ಯ ಎನ್ನುತ್ತವೆ. ಇಸ್ಲಾಮಿನ ಶಿಕ್ಷಣವು ಮನ್ ಅರಫ ನಫ್ಸಹು ಪಖದ್ ಅರಫ ರಬ್ಬಹು (ಯಾರು ತನ್ನನ್ನು ಅರಿಯುವನೊ, ಅವನು ದೇವನನ್ನು ಅರಿಯುವನು) ಎಂದಾಗಿರುವುದು.

About editor

Check Also

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್ ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ …

Leave a Reply

Your email address will not be published. Required fields are marked *