Breaking News
Home / ವಾರ್ತೆಗಳು / ಇನ್ನು ಕಾಶ್ಮೀರದ ಆಡಳಿತ ಭಾಷೆ ಉರ್ದುವಲ್ಲ, ಹಿಂದಿ

ಇನ್ನು ಕಾಶ್ಮೀರದ ಆಡಳಿತ ಭಾಷೆ ಉರ್ದುವಲ್ಲ, ಹಿಂದಿ

ಶ್ರೀನಗರ, ನ.1: ಇನ್ನು ಮುಂದೆ ಕಾಶ್ಮೀರದ ಆಡಳಿತ ಭಾಷೆ ಹಿಂದಿ ಆಗಲಿದೆ. ಈವರೆಗೂ ಅಲ್ಲಿ ಸರಕಾರಿ ವ್ಯವಹಾರಗಳೆಲ್ಲ ಉರ್ದು ಭಾಷೆಯಲ್ಲಿತ್ತು.

ಜಮ್ಮು-ಕಾಶ್ಮೀರ, ಲಡಾಕ್ ಎರಡು ಬೇರೆ ಬೇರೆ ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿದ್ದು ಕೇಂದ್ರ ಗೃಹ ಸಚಿವಾಲಯ ಈ ಕುರಿತು ಬುಧವಾರ ತಡರಾತ್ರೆ ಅಧಿಸೂಚನೆ ಹೊರಡಿಸಿತ್ತು.

ಇನ್ನು ಮುಂದೆ 28 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳು ದೇಶದಲ್ಲಿ ಇರಲಿವೆ. ಮೊತ್ತ ಮೊದಲ ಬಾರಿ ಒಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗುತ್ತಿದೆ.

ಇನ್ನು ಕೇಂದ್ರಾಡಳಿತ ಪ್ರದೇಶದಲ್ಲಿ ರಣಬೀರ್ ಕಾನೂನಿನ ಬದಲು ಭಾರತೀಯ ದಂಡ ಸಂಹಿತೆ ಐಪಿಸಿ ಮತ್ತು ಕ್ರಿಮಿನಲ್ ಪ್ರೊಸಿಜರ್ ಸಿಆರ್‍ಪಿಸಿ ಜಾರಿಗೆ ಬರಲಿವೆ. ಜಮ್ಮು ಕಾಶ್ಮೀರದ ಕಾನೂನು ವ್ಯವಸ್ಥೆ ಕೇಂದ್ರ ಸರಕಾರದ ಅಧೀನದಲ್ಲಿರಲಿದೆ. ಭೂ ವ್ಯವಹಾರದ ವ್ಯವಸ್ಥೆ ಚುನಾಯಿತ ಸರಕಾರದ ಬಳಿ ಇರಲಿದೆ. ಆಡಳಿತ ಭಾಷೆ ಉರ್ದುವಿಗೆ ಸ್ಥಾನಾಂತರಗೊಳ್ಳಲಿದೆ.

ಹೊಸ ಜಮ್ಮು ಕಾಶ್ಮೀರದಲ್ಲಿ 107 ಶಾಸಕರಿದ್ದರು. ಇನ್ನು ಅದು 114 ಆಗಬಹುದಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪಿಒಕೆಗಾಗಿ ಮೊದಲಿನಂತೆ 24 ಸ್ಥಾನಗಳನ್ನು ಮೀಸಲಿರಿಸಲಾಗುವುದು.

ಕಾಶ್ಮೀರ ವಿಶೇಷ ಸ್ಥಾನಮಾನ ಹೊಂದಿದ್ದ 72 ವರ್ಷಗಳ ಇತಿಹಾಸವನ್ನು ಬಿಜೆಪಿ ಸರಕಾರ ತೆರವುಗೊಳಿಸಿದೆ. ಸಂವಿಧಾನ 370, 35 ಎ ವಿಧಿಯನ್ನು ಸರಕಾರ ರದ್ದು ಪಡಿಸಿದೆ. ಜಮ್ಮುಕಾಶ್ಮೀರ ಪದುಚೇರಿಯಂತೆ ಶಾಸಕರು ಇರಲಿದ್ದಾರೆ. ಲಡಾಕ್‍ನಲ್ಲಿ ಶಾಸಕರು ಇರುವುದಿಲ್ಲ. ಚಂಡೀಗಡದಂತೆ ಆಗಲಿದೆ.

About editor

Check Also

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು …

Leave a Reply

Your email address will not be published. Required fields are marked *