Breaking News
Home / ಲೇಖನಗಳು / ಇಸ್ಲಾಮಿನಲ್ಲಿ ಕುಟುಂಬ ಸಂಬಂಧಗಳ ಪ್ರಾಮುಖ್ಯತೆ

ಇಸ್ಲಾಮಿನಲ್ಲಿ ಕುಟುಂಬ ಸಂಬಂಧಗಳ ಪ್ರಾಮುಖ್ಯತೆ

ಯಾರು ಅಲ್ಲಾಹನು, ಅಂತ್ಯ ದಿನದಲ್ಲಿ ವಿಶ್ವಾಸ ಇರಿಸಿದ್ದಾನೋ ಅವನು ಕುಟುಂಬ ಸಂಬಂಧವನ್ನು ಅಸ್ತಿತ್ವದಲ್ಲಿರಿಸಿಕೊಳ್ಳಲಿ'(ಬುಖಾರಿ)

ಕುಟುಂಬ ಸಂಬಂಧ ಕಡಿದುಕೊಂಡವರು ಸ್ವರ್ಗ ಪ್ರವೇಶಿಸುವುದಿಲ್ಲ. ಇಸ್ಲಾಮಿನಲ್ಲಿ ಕುಟುಂಬ ಸಂಬಂಧಕ್ಕೆ ಎಂತಹ ಪ್ರಾಮುಖ್ಯತೆ ಇದೆ ಎನ್ನುವುದನ್ನು ಮೇಲಿನ ಹದೀಸ್(ಪ್ರವಾದಿ ವಚನ)ಗಳು ತಿಳಿಸಿಕೊಡುತ್ತಿವೆ.

ಒಮ್ಮೆ ಒಬ್ಬ ಯುವಕ ಎಂದಿನಂತೆ ಅಬೂ ಹುರೈರರ(ರ) ಹದೀಸ್ ತರಗತಿಗೆ ಹೋದರು. ಅಂದಿನ ತರಗತಿಯಲ್ಲಿ ಅಬೂ ಹುರೈರಾ(ರ) ಕುಟುಂಬ ಸಂಬಂಧ ಕಡಿದುಕೊಂಡ ಯಾರಾದರೂ ಈ ಸಭೆಯಲ್ಲಿದ್ದರೆ ಅವರು ಇಲ್ಲಿಂದ ಹೋಗಬೇಕು’ ಇದು ತರಗತಿಯಲ್ಲಿದ್ದ ಆ ಯುವಕನಿಗೆ ತುಂಬ ಅಸ್ವಸ್ಥಗೊಳಿಸಿತು.

ಅವನು ಕೂಡಲೇ ಅಲ್ಲಿಂದೆದ್ದು ಹೋದ. ನಗರದಲ್ಲಿ ವಾಸಿಸುತ್ತಿದ್ದ ತನ್ನ ತಾಯಿಯನ್ನು ಮನೆಗೆ ಕರೆದುಕೊಂಡು ಬರಲು. ತಾಯಿಯನ್ನು ಕ್ಷಮಿಸುವಂತೆ ಹೇಳಿದ. ಹಿಂದಿನ ತನ್ನ ವರ್ತನೆಗೆ ತಾಯಿಯಲ್ಲಿ ಕ್ಷಮೆ ಯಾಚಿಸಿದ.

ತನ್ನ ಮಗನ ಮನಪರಿವರ್ತನೆಗೆ ಕಾರಣವನ್ನು ಆ ತಾಯಿ ಕೇಳಿದರು. ಯುವಕ ಅಬೂ ಹುರೈರಾ(ರ) ಸಭೆಯಲ್ಲಿ ನಡೆದುದನ್ನು ತಾಯಿಗೆ ವಿವರಿಸಿದ. ಹೀಗೆ ತಾಯಿ ಮಗನ ಪಶ್ಚಾತ್ತಾಪ ಸ್ವೀಕರಿಸಿದರು. ನೀನು ಅಬೂ ಹುರೈರಾರಲ್ಲಿ ಹೋಗಿ ಕೇಳು, ರೂಢಿಗಿಂತ ಭಿನ್ನವಾಗಿ ಇಂದು ಕುಟುಂಬ ಸಂಬಂಧ ಕುರಿತು ಯಾಕೆ ಕ್ಲಾಸು ಮಾಡಿದ್ದೀರಿ.

ಇದನ್ನು ಅಬೂ ಹುರೈರಾರಲ್ಲಿ ಯುವಕ ಕೇಳಿದಾಗ ಹೇಳಿದರು. ” ಪ್ರವಾದಿ ಪ್ರವಾದಿವರ್ಯರು(ಸ) ಹೇಳಿದ್ದನ್ನು ನಾನು ಕೇಳೀದ್ದೇನೆ.’ ಯಾರು ಕುಟುಂಬ ಸಂಬಂಧ ಮುರಿಯುವರೋ ಅವನ ಒಳಿತುಗಳನ್ನು ಅಲ್ಲಾಹನು ಸ್ವೀಕರಿಸುವುದಿಲ್ಲ” ಎಂದು ಅವರು(ಸ) ಹೇಳಿದ್ದಾರೆ. ಇದು ಕೇಳಿದ್ದರಿಂದ ಅಂತಹವರಲ್ಲಿ ಯಾರೂ ತನ್ನ ತರಗತಿಯಲ್ಲಿ ಇರಬಾರದೆಂದು ತೀರ್ಮಾನಿಸಿದೆ ಎಂದರು ಅಬೂ ಹುರೈರಾ(ರ).

ಇನ್ನೊಂದು ಹದೀಸಿನಲ್ಲಿ ಯಾರು ಕುಟುಂಬವನ್ನು ಮುರಿಯುವರೋ ಅವರಿಗೆ ಅಲ್ಲಾಹನ ಕರುಣೆ ವರ್ಷಿಸದು ಎಂದಿದೆ. ಈ ರೀತಿ ಕುಟುಂಬದೊಂದಿಗಿನ ಕರಾರು ಪಾಲಿಸುವುದು ಅದನ್ನು ಉಳಿಸಿಕೊಳ್ಳುವುದಕ್ಕೆ ಇಸ್ಲಾಮಿನಲ್ಲಿ ಅಸಾಧಾರಣೆ ಪ್ರಾಮುಖ್ಯತೆ. ಕುಟುಂಬ ಸಂಬಂಧ ಮುರಿಯುವುದು ಇಸ್ಲಾಮಿನ ದೊಡ್ಡ ಪಾಪಗಳಲ್ಲಿ ಒಂದು.

ಪವಿತ್ರ ಕುರ್‍ಆನ್‍ನಲ್ಲಿ ಎರಡು ಕಡೆಗಳಲ್ಲಿ ಈ ವಿಷಯದಲ್ಲಿ ವಿವರಣೆ ಬಂದಿದೆ.
” ಅಲ್ಲಾಹನೊಂದಿಗೆ ಬಲವಾದ ಕರಾರನ್ನು ಮಾಡಿಕೊಂಡ ಬಳಿಕ ಮುರಿದು ಬಿಡುವವರು, ಅಲ್ಲಾಹನು ಜೋಡಿಸಲು ಆಜ್ಞೆ ಕೊಟ್ಟಂತಹ ಸಂಬಂಧಗಳನ್ನು ಮುರಿಯುವವರು ಮತ್ತು ಭೂಮಿಯ ಮೇಲೆ ಗೊಂದಲ ಹಬ್ಬಿಸುತ್ತಿರುವವರು ಶಾಪಕ್ಕೆ ಅರ್ಹರು. ಅವರಿಗೆ ಪರಲೋಕದಲ್ಲಿ ಅತ್ಯಂತ ಕೆಟ್ಟ ನಿವಾಸವಿದೆ. (13: 25)

” ನೀವು ವಿಮುಖರಾಗಿ ಬಿಟ್ಟರೆ ಭೂಮಿಯಲ್ಲಿ ಪುನಃ ಕ್ಷೋಭೆಯನ್ನುಂಟು ಮಾಡುವ ಹಾಗೂ ಪರಸ್ಪರ ಕತ್ತು ಕೊಯ್ಯುವ ಹೊರತು ನಿಮ್ಮಿಂದ ಬೇರೇನನ್ನಾದರೂ ನಿರೀಕ್ಷಿಸಬಹುದೇ?. ಅಲ್ಲಾಹನು ಶಪಿಸಿರುವುದು ಹಾಗೂ ಕಿಡುಡರಾಗಿಯೂ ಕುರುಡರಾಗಿಯೂ ಮಾಡಿ ಬಿಟ್ಟಿರುವುದು ಇವರನ್ನೇ”( 47: 22-23)

ಆದ್ದರಿಂದ ಇಸ್ಲಾಮ್ ಕುಟುಂಬ ಸಂಬಂಧವನ್ನು ತುಂಬ ಗಂಭೀರವಾಗಿ ಪರಿಗಣಿಸುತ್ತದೆ. ಕುಟುಂಬ ಸಂಬಂಧವನ್ನು ಉಳಿಸಿಕೊಳ್ಳಲು ಮುಸ್ಲಿಮರು ಜಾಗರೂಕತೆ ವಹಿಸಬೇಕಾಗಿದೆ.

About editor

Check Also

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್ ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ …

Leave a Reply

Your email address will not be published. Required fields are marked *