Breaking News
Home / ವಾರ್ತೆಗಳು / ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು ಎಕರೆ ಜಮೀನು ಹದಿನೈದು ಕಿಲೊಮೀಟರ್ ವ್ಯಾಪ್ತಿಯಲ್ಲಿ ನೀಡಬೇಕೆಂದು ಹೇಳಿತ್ತು. ಬಾಬರಿ ಮಸೀದಿ ಕಟ್ಟಡದ ಬಳಿ ಅಥವಾ ಹಳೆಯ ಅಯೋಧ್ಯೆ ಮುನ್ಸಿಪಲ್ ವ್ಯಾಪ್ತಿಯಲ್ಲಿ ಜಮೀನು ಕೊಡಲಾಗದು. ಸರಯೂ ನದಿಯ ಇನ್ನೊಂದು ಜನ ನಿಬಡತೆಯಿಲ್ಲದ ಪ್ರದೇಶದಲ್ಲಿ ಜಮೀನು ನೀಡುವ ತಯಾರಿ ನಡೆಯುತ್ತಿದೆ ಎಂಬ ಸೂಚನೆಯಿದೆ ಎಂದು ವರದಿಯಾಗಿದೆ.

ವಿವಾದ ಸ್ಥಳದ ಪಂಚಕೋಶ ಪರಿಧಿ ಅಥವಾ, ಎರಡು ಕಿಲೊ ಮೀಟರ್ ನೊಳಗೆ ಮಸೀದಿಗೆ ಸ್ಥಳಕೊಡುವುದಿಲ್ಲ ಎಂದು ರಾಮಮಂದಿರ ವಿಭಾಗ ಮೊದಲೇ ನಿಲುವು ತೆಗೆದಿತ್ತು. ಮುನ್ಸಿಪಲ್ ವ್ಯಾಪ್ತಿಯ ಇತರ ಕಡೆಯಲ್ಲಿಯೂ ಜನಸಾಂಧ್ರತೆ ಹೆಚ್ಚಾಗಿದೆ. ಅಲ್ಲೆಲ್ಲ ಐದು ಎಕರೆ ಖಾಲಿ ಜಾಗ ಸಿಗುವುದೂ ಕಷ್ಟ. ಅಯೋಧ್ಯೆಯ ಮುಖ್ಯ ಸ್ಥಳದಲ್ಲಿ ಜಮೀನು ನೀಡಬೇಕೆಂದು ಕೋರ್ಟು ಹೇಳಿದರೂ ಸ್ಥಳವನ್ನು ನಿರ್ಣಯಿಸಿಲ್ಲ. ಆದ್ದರಿಂದ ಅಯೋಧ್ಯೆ-ಪೈಝಾಬಾದ್ ರಸ್ತೆಯ ಪಂಚಕೋಶಿ ವ್ಯಾಪ್ತಿಯ ಹೊರತು ಮಸೀದಿಗೆ ಜಾಗ ಕೊಡುವ ಸಾಧ್ಯತೆ ಇದೆ ಎಂದು ಉನ್ನತ ಅಧಿಕಾರಿಗಳನ್ನು ಉದ್ಧರಿಸಿ ವರದಿಗಳು ತಿಳಿಸಿವೆ.

ಮಸೀದಿ ಕಟ್ಟಿಸಿದ ಬಾಬರನ ಕಮಾಂಡರ್ ಮೀರ್‍ಬಾಕಿಯ ಮೃತದೇಹ ದಫನ ಮಾಡಿದ ಸಜನ್‍ವ ಗ್ರಾಮದಲ್ಲಿ ಮಸೀದಿಗೆ ಸ್ಥಳ ಕೊಡಬೇಕೆಂಬ ನಿರ್ದೇಶವಿದ್ದರೂ ಹದಿನೈದು ಕಿಲೋಮೀಟರ್ ವ್ಯಾಪ್ತಿಯಲ್ಲಾದ್ದರಿಂದ ಅದು ಬೇಡ ಎಂದು ತೀರ್ಮಾನಿಸಲಾಗಿದೆ. ಜೊತೆಗೆ ಸುನ್ನಿ ವಕ್ಫ್ ಬೋರ್ಡುನೊಂದಿಗೆ ಸಹಕರಿಸಿ ಜಮೀನು ಕಂಡು ಹುಡುಕಬೇಕೆಂದು ಸ್ಥಳೀಯ ಮುಸ್ಲಿಮರು ಬಾಬರಿ ಮಸೀದಿಗೆ ಬದಲಾಗಿ ಬೇರೆ ಸ್ಥಳ ಬೇಡವೆಂದು ಮುಸ್ಲಿಮರಲ್ಲಿ ಸಾರ್ವತ್ರಿಕ ಭಾವನೆ ಇದೆ. ಬಾಬರಿ ಮಸೀದಿಯ ಬದಲು ನಮಗೆ ಎಲ್ಲಿಯೂ ಸ್ಥಳದ ಅಗತ್ಯವಿಲ್ಲ ಎನ್ನಲಾಗುತ್ತಿದೆ.

About editor

Check Also

ಕುರ್‍ಆನ್ ಪ್ರವಚನಕಾರ ಮುಹಮ್ಮದ್ ಕುಂಞಯವರಿಗೆ ಶ್ರೀ ರುದ್ರಾಕ್ಷಿ ಮಠದಿಂದ ‘ಸೇವಾರತ್ನ’ ಪ್ರಶಸ್ತಿ

ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠ ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ ‘ಸೇವಾರತ್ನ’ ಪ್ರಶಸ್ತಿಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ …

Leave a Reply

Your email address will not be published. Required fields are marked *