ಭಯೋತ್ಪಾದಕರನ್ನು ಎದುರಿಸುವಲ್ಲಿ ಜಗತ್ತಿನಿಂದ ತಪ್ಪಾಗಿದೆ: ಟೋನಿ ಬ್ಲೇರ್

ಲಂಡನ್, ಸೆ.15: ಇಸ್ಲಾಮಿಕ್ ಭಯೋತ್ಪಾದಕರ ಕುರಿತು ನಿಲುವಿನಲ್ಲಿ ಜಗತ್ತಿನಿಂದ ತಪ್ಪಾಗಿದೆ ಎಂದು ಬ್ರಿಟನ್‍ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಹೇಳಿದ್ದಾರೆ.

ಭಯೋತ್ಪಾದನೆಯಿಂದ ವಿಶ್ವಕ್ಕೆ ಬೆದರಿಕೆಯಿದ್ದು ಇದನ್ನು ಎದುರಿಸಲು ಒಂದು ಒಟ್ಟಾದ ತಂತ್ರವು ಜಾಗತಿಕ ಮಟ್ಟದಲ್ಲಿ ರೂಪೀಕರಿಸುವ ಅಗತ್ಯವಿದೆ ಎಂದು ಹೇಳಿದರು. ಇಂತಹ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಅಂತಾರಾಷ್ಟ್ರೀಯ ವೈಫಲ್ಯವಾಗಿದೆ ಎಂದು ಬ್ಲೇರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಭಯೋತ್ಪಾದಕರ ಬೆದರಿಕೆಯನ್ನು ತಡೆಯಲು ಭದ್ರತೆ ವ್ಯವಸ್ಥೆ ಬಿಗಿಗೊಳಿಸಿದರೆ ಮಾತ್ರ ಸಾಲುವುದಿಲ್ಲ. ಅವರನ್ನು ಪ್ರತಿರೋಧಿಸಲು ಸರಕಾರ ಹೊಸ ನೀತಿಗಳನ್ನು ರೂಪೀಸಬೇಕಾಗಿದೆ.

ಜಗತ್ತಿಗೆ ಒಟ್ಟು 121 ಇಸ್ಲಾಮಿಸ್ಟ್ ಸಂಘಟನೆಗಳಿಂದ ಬೆದರಿಕೆ ಇದೆ. 2017ರಲ್ಲಿ 84000 ಮಂದಿಯ ಹತ್ಯೆಯ ಹೊಣೆಯನ್ನು ಭಯೋತ್ಪಾದಕರೇ ವಹಿಸಿಕೊಂಡಿದ್ದಾರೆ ಎಂದು ಬ್ಲೇರ್ ಭಯೋತ್ಪಾದನೆ ಭಯಾನಕತೆಯನ್ನು ಬೆಟ್ಟು ಮಾಡಿದರು.

Check Also

ಹರ್ಯಾಣ: ಮುಸ್ಲಿಮರು ಗಡ್ಡ ಬೆಳೆಸಬಾರದು, ನಮಾಝ್ ಮಾಡಬಾರದು- ಪಂಚಾಯತ್ ಆದೇಶ

ರೋಹಟಕ್, ಸೆ. 20: ಬಕ್ರೀನಂದು ಇಲ್ಲಿನ ಟಿಟೌಲಿ ಗ್ರಾಮದಲ್ಲಿ ಗೋ ಹತ್ಯೆಯಾಗಿದೆ ಎಂದು ಮುನಿಸಿಕೊಂಡಿರುವ ಪಂಚಾಯತ್ ಆದೇಶ ಜಾರಿ ಮಾಡಿದ್ದು …

Leave a Reply

Your email address will not be published. Required fields are marked *