ಸಿರಿಯದ ಮಾನವ ಹತ್ಯೆಗೆ ರಹಸ್ಯ ಒಪ್ಪಂದವಿದೆ : ಕುವೈಟ್ ಪಾರ್ಲಿಮೆಂಟ್ ಸದಸ್ಯರು

ಕುವೈಟ್ ಸಿಟಿ: ಸಿರಿಯದಲ್ಲಿ ನಡೆಯುತ್ತಿರುವ ಮಾನವ ಹತ್ಯೆಗಳಿಗೆ ರಹಸ್ಯ ಒಪ್ಪಂದ ಸಿದ್ಧ ಪಡಿಸಲಾಗಿದೆ ಎಂದು ಕುವೈಟ್ ಸಂಸದರು ಮುನ್ನೆಚ್ಚರಿಕೆ ನೀಡಿದ್ದಾರೆ. ರವಿವಾರ ಕುವೈಟ್ ರಾಷ್ಟ್ರೀಯ ಅಸೆಂಬ್ಲಿ ಆಯೋಜಿಸಿದ ಸಮ್ಮೇಳನದಲ್ಲಿ ಹೊಸ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಗೂಥಾ ನಿರ್ಮೂಲನೆ ಎನ್ನುವ ವಿಷಯದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಗೂಥಾದಲ್ಲಿ ವಾಯು ದಾಳಿಯನ್ನು ಸಭೆ ಖಂಡಿಸಿದೆ. ಸಿರಿಯದಲ್ಲಿ ಕಡಿಮೆಯಾಗುತ್ತಿರುವ ಜನ ಸಂಖ್ಯೆಯನ್ನು ಸಮ್ಮೇಳನ ಬೆಟ್ಟು ಮಾಡಿದೆ. ಸಿರಿಯದ ಅಲೆಪ್ಪೊ, ಹೂಂಸ್‍ನಲ್ಲಿ ನಡೆದಿರುವ ಸಾಮೂಹಿಕ ನರಮೇಧ ಗೂಥಾದಲ್ಲಿಯೂ ಕಂಡು ಬಂದಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿ ಶೀಘ್ರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು. ಸಿರಿಯದಲ್ಲಿ ಕದನ ವಿರಾಮ ಜಾರಿಗೊಳಿಸಬೇಕು ಎಂದು ಸಮ್ಮೇಳನ ಆಗ್ರಹಿಸಿತು.

ಸಾವಿರಾರು ಮಂದಿ ಸಿರಿಯದಲ್ಲಿ ಸತ್ತು ಬೀಳುತ್ತಿದ್ದಾರೆ. ಸಿರಿಯದಲ್ಲಿ ಯುದ್ಧವಲ್ಲ ಅದೊಂದು ಸಾಮೂಹಿಕ ಕಗ್ಗೊಲೆ ನಡೆಯುತ್ತಿದೆ. ಅಲ್ಲಿ ಎಲ್ಲ ರೀತಿಯ ಮಾನವ ಹಕ್ಕು ಉಲ್ಲಂಘನೆಗೊಳ್ಳುತ್ತಿದೆ ಎಂದು ಸಂಸದ ಒಸಾಮ ಅಲ್ ಶಹೀನ್ ಹೇಳಿದರು. ಝಿಯೋನಿಸಂ ಅಸ್ತಿತ್ವವನ್ನು ಈ ರೀತಿ ಸಂರಕ್ಷಿಸಲಾಗುತ್ತಿದೆ ಎಂದು ಸಂಸದರು ಆರೋಪಿಸಿದರು.

Check Also

ಮಗಳಿಗೆ ಕೃತಕ ಕಾಲುಗಳನ್ನು ತಯಾರಿಸಿದ ಅಪ್ಪ: ಹೀಗೊಂದು ಸಿರಿಯದ ಅಪ್ಪ ಮಗಳ ಮನ ಮಿಡಿಯುವ ಕಥೆ

ದೊಡ್ಡವರ ಜಗಳದಲ್ಲಿ ಸಿಲುಕಿ ನರಳುತ್ತಿರುವ ಸಿರಿಯದ ನಿಷ್ಪಾಪಿ ಮಕ್ಕಳ ಬಗ್ಗೆ ಮೊದಲ ಬಾರಿ ಜಗತ್ತಿನ ಗಮನ ಸೆಳೆದವನು ಆಯ್ಲಾನ್ ಕುರ್ದಿ …

Leave a Reply

Your email address will not be published. Required fields are marked *