ಕಳೆದ ವರ್ಷ ಸಿರಿಯದಲ್ಲಿ 910 ಮಕ್ಕಳ ಕಗ್ಗೊಲೆ

ಜನೀವ, ಮಾ.14: ಕಳೆದ ವರ್ಷವೊಂದರಲ್ಲೇ ಸಿರಿಯದಲ್ಲಿ 910 ಮಕ್ಕಳ ಹತ್ಯೆ ನಡೆದಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸುತ್ತಿದೆ. 2016ರಲ್ಲಿ 652 ಮಕ್ಕಳ ಹತ್ಯೆ ನಡೆದಿತ್ತು. ಯುದ್ಧ ಪೀಡಿತ ಸಿರಿಯದಲ್ಲಿ ಸೇನೆಯ ದಾಳಿಗಳಲ್ಲಿ ಮಕ್ಕಳು ಹೆಚ್ಚು ಬಲಿಯಾಗುತ್ತಿದ್ದಾರೆ. ಜನರು ಹೆಚ್ಚಿರುವ ಪ್ರದೇಶಗಳಲ್ಲಿ ದಾಳಿ ನಡೆಯುತ್ತಿದೆ ಎಂದು ಯುನಿಸೆಫ್ ತಿಳಿಸಿದೆ.

ಮಂಗಳವಾರ ವಿಶ್ವಸಂಸ್ಥೆಯ ಮಕ್ಕಳ ಸಂಘಟನೆಯ ವರದಿ ಪ್ರಕಟವಾಗಿದ್ದು, 2015ರಲ್ಲಿ ನಡೆದ ಮಕ್ಕಳ ಹತ್ಯೆಗಿಂತ ಮೂರು ಪಟ್ಟು ಹೆಚ್ಚು ಮಕ್ಕಳ ಹತ್ಯೆ 2017ರಲ್ಲಿ ಸಂಭವಿಸಿದೆ. ಇವೆಲ್ಲವೂ ನಮಗೆ ಸಿಕ್ಕಿರುವ ದಾಖಲೆಯಿಂದ ಗೊತ್ತಾಗಿದೆ. ನಿಜವಾದ ಲೆಕ್ಕ ಇದಕ್ಕಿಂತಲೂ ಹೆಚ್ಚಾಗಿರಬಹುದು ಎಂದು ಯುನಿಸೆಫ್ ವಕ್ತಾರ ಮರಿಕ್ಸಿ ಮೆರ್ಕಾಡೊ ಜನೀವದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

5. 3 ಮಿಲಿಯನ್ ಮಕ್ಕಳಿಗೆ ಸಹಾಯದ ಅಗತ್ಯವಿದೆ.

2.8 ಮಿಲಿಯನ್ ಮಕ್ಕಳಿಗೆ ತುರ್ತು ಸಹಾಯ ಬೇಕಿದೆ.

2.6 ಮಿಲಿಯನ್ ಮಕ್ಕಳು ನಿರಾಶ್ರಿತರಾಗಿದ್ದಾರೆ.

1.7 ಮಿಲಿಯನ್ ಮಕ್ಕಳು ಶಾಲೆಗೆ ಹೋಗುವುದಿಲ್ಲ.

1.3 ಮಿಲಿಯನ್ ಮಕ್ಕಳು ಶಾಲೆಯನ್ನೆ ಬಿಟ್ಟು ಹೋಗಿದ್ದಾರೆ.

ಈ ರೀತಿ ಮಕ್ಕಳ ಲೆಕ್ಕವನ್ನು ಯುನಿಸೆಫ್ ಬಹಿರಂಗ ಪಡಿಸಿದೆ.

Check Also

ಮಗಳಿಗೆ ಕೃತಕ ಕಾಲುಗಳನ್ನು ತಯಾರಿಸಿದ ಅಪ್ಪ: ಹೀಗೊಂದು ಸಿರಿಯದ ಅಪ್ಪ ಮಗಳ ಮನ ಮಿಡಿಯುವ ಕಥೆ

ದೊಡ್ಡವರ ಜಗಳದಲ್ಲಿ ಸಿಲುಕಿ ನರಳುತ್ತಿರುವ ಸಿರಿಯದ ನಿಷ್ಪಾಪಿ ಮಕ್ಕಳ ಬಗ್ಗೆ ಮೊದಲ ಬಾರಿ ಜಗತ್ತಿನ ಗಮನ ಸೆಳೆದವನು ಆಯ್ಲಾನ್ ಕುರ್ದಿ …

Leave a Reply

Your email address will not be published. Required fields are marked *