ಸ್ವೀಡಿಸ್ ಬೆಂಬಲಿಗನಿಂದ ಐದು ಸಾವಿರ ಕಿಲೊಮೀಟರ್ ಕಾಲ್ನಡಿಗೆ ಯಾತ್ರೆ ಫೆಲಸ್ತೀನ್ ಚಲೊ

ಸ್ವೀಡನ್, ಫೆ. 24: ಇಸ್ರೇಲ್‍ನ ಅಕ್ರಮ ಅತಿಕ್ರಮಣದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಡಿಶ್ ಬೆಂಬಲಿಗನೊಬ್ಬ ಫೆಲೆಸ್ತೀನಿಗೆ ಐದು ಸಾವಿರ ಕಿಲೊ ಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲು ಹೊರಟಿದ್ದಾರೆ.

ಬೆಂಜಮಿನ್ ಲಾಡ್ರ ಸ್ವಿಟ್ಝರ್ಲೆಂಡ್ ಗೊಟೆಬೊರ್ಗ ನಗರದಿಂದ ಯಾತ್ರೆ ಆರಂಭಿಸಿದ್ದು ಜರ್ಮನಿ, ಆಸ್ಟ್ರಿಯ, ಸ್ಲೊವೆನಿಯ, ಟರ್ಕಿ ಮತ್ತು ಸೈಪ್ರಸ್ ದಾಟಿ ಫೆಲಸ್ತೀನಿಗೆ ಬರಲಿದ್ದಾರೆ. ಈ ಪ್ರಯಾಣದಲ್ಲಿ ಅವರು ತಮ್ಮ ಜೊತೆ ಬೆನ್ನಿಗೆ ಒಂದು ಫೆಲಸ್ತೀನಿ ಧ್ವಜವನ್ನು ಅಂಟಿಸಿರುತ್ತಾರೆ.

ಕಳೆದ ಎಪ್ರಿಲ್‍ನಲ್ಲಿ ಅವರು ಮೂರು ವಾರಗಳ ಫೆಲಸ್ತೀನ್ ಯಾತ್ರೆ ಹೊರಟಿದ್ದರು. ನಂತರ ಫೆಲಸ್ತೀನ್‍ನ ಸ್ಥಿತಿಯನ್ನು ಜಗತ್ತಿನ ಗಮನಕ್ಕೆ ತರುವ ನಿರ್ಧಾರವನ್ನು ಮಾಡಿದೆ ಎಂದು ಅವರು ಹೇಳುತ್ತಾರೆ. ರೆಡ್ ಕ್ರಾಸ್‍ಗಾಗಿ ಕೆಲಸ ಮಾಡುತ್ತಿರುವ ಲಾಡ್ರೂ ಒಂದು ವರ್ಷದಲ್ಲಿ ಫೆಲಸ್ತೀನಿಗೆ ನಡೆದು ತಲುಪಬಹುದೆನ್ನುವ ನಿರೀಕ್ಷೆಯನ್ನು ಹೊಂದಿದ್ದಾರೆ. ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡಾ ತನ್ನ ಯಾತ್ರೆ ಪ್ರಚಾರಕ್ಕಾಗಿ ಹ್ಯಾಶ್ ಟ್ಯಾಗ್ ವಾಲ್ಕ್‍ಟು ಫೆಲಸ್ಟೈನ್ ಬಳಸಲಿದ್ದಾರೆ.

ತನ್ನ ವಿದ್ಯಭ್ಯಾಸ ಮತ್ತು ಕೆಲಸ ತೊರೆದ ಬಳಿಕ ಅವರು ಆಗಸ್ಟ್ ಎಂಟಕ್ಕೆ ಗೊಟೆಬರ್ಗ್, ಸ್ವೀಡನ್‍ನಿಂದ ಫೆಲಸ್ತೀನಿಗೆ ಐದು ಸಾವಿರ ಕಿಲೊಮೀಟರ್ ದೂರದ ಯಾತ್ರೆಯನ್ನು ಆರಂಭಿಸಿದರು. ಲಾಡ್ರೂ ಯಾವಾಗಲು ತನ್ನ ಬೆನ್ನಲ್ಲಿ ಫೆಲಸ್ತೀನ್ ಧ್ವಜ ಅಂಟಿಸಿ ಕೊಂಡಿರುತ್ತಾರೆ. ಬೆಂಜಮಿನ್ ಲಾಡ್ರ್ರೂ ಯಾತ್ರೆಯನ್ನು ಕೆಲವೇ ಮಂದಿ ಬಿಟ್ಟರೆ ಬೇರೆಲ್ಲರೂ ಸ್ವಾಗತಿಸಿದ್ದಾರೆ.

ಪ್ರಾಗ್‍ನಲ್ಲಿ ಇಸ್ರಾಯಿಲಿ ದೂತವಾಸದ ಗಾರ್ಡ್‍ಗಳು ಅವರನ್ನು ಒಂದು ದಿವಸ ಬಂಧಿಸಿಟ್ಟಿದ್ದರು. ನಂತರ ಬಿಡುಗಡೆಗೊಳಿಸಿದ್ದಾರೆ.
ಈ ಪ್ರಯಾಣದಲ್ಲಿ ಬಲ್ಗೇರಿಯ, ಟರ್ಕಿ, ಸಿರಿಯ, ಲೆಬನಾನ್ ಮೂಲಕ ಪ್ರಯಾಣ ಮುಂದುವರಿಸುವೆ ಎಂದು ಲಾಡ್ರೂ ಹೇಳುತ್ತಿದ್ದಾರೆ.

Check Also

ಇತರರ ಗಮನ ಸೆಳೆಯಲು ಸಾಮಾಜಿಕ ಮಾಧ್ಯಮಗಳಲ್ಲಿ ಹದಿಹರೆಯದವರು ಕಠಿಣ ಪರಿಶ್ರಮ ನಡೆಸುತ್ತಿದ್ದಾರೆ: ಅಧ್ಯಯನ ವರದಿ

ಲಾಸ್ ಆಂಜಲಿಸ್, ಫೆ.20: ಸಾಮಾಜಿಕ ಮಾಧ್ಯಮಗಳಲ್ಲಿ ಇತರರ ಗಮನಕ್ಕೆ ಬೀಳಲು ಹದಿಹರೆಯದ ಜನಾಂಗ ಕಠಿಣ ಪರಿಶ್ರಮ ನಡೆಸುತ್ತಿದೆ ಎಂದು ಸಂಶೋಧಕರು …

Leave a Reply

Your email address will not be published. Required fields are marked *