ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಹಿಂದೂ ಮುಸ್ಲಿಮ್ ಎಂದು ಪ್ರತ್ಯೇಕಿಸಿ ಪಾಠ ; ದೂರು

ದೆಹಲಿಯ ವಝೀರಾ ಬಾದ್‍ನ ಪ್ರಾಥಮಿಕ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಲ್ಲಿ ಹಿಂದೂ ಮುಸ್ಲಿಮ್ ಎಂದು ಪ್ರತ್ಯೇಕಿಸಿ ವಿವಿಧ ಕ್ಲಾಸ್ ರೂಮ್‍ಗಳಲ್ಲಿ ಕಲಿಸುತ್ತಿರುವ ಕುರಿತು ದೂರು ದಾಖಲಾಗಿದೆ.

ಪ್ರತೀ ತರಗತಿಯಲ್ಲಿ ಎಷ್ಟು ಮುಸ್ಲಿಮರು ಎಷ್ಟು ಹಿಂದೂಗಳಿದ್ದಾರೆಂದು ಲೆಕ್ಕಹಾಕಿ ವಿವಿಧ ಡಿವಿಜನ್ ಮಾಡಿದ್ದಾರೆ. ಒಂದನೇಯ ತರಗತಿಯ ಎ ವಿಭಾಗದಲ್ಲಿ 36 ಹಿಂದೂ ವಿದ್ಯಾರ್ಥಿಗಳಿದ್ದರೆ, ಬಿ ವಿಭಾಗದಲ್ಲಿ 36 ಮುಸ್ಲಿಮ್ ವಿದ್ಯಾರ್ಥಿಗಳಿದ್ದಾರೆ. ಇದೇ ರೀತಿ ಇತರ ತರಗತಿಗಳಲ್ಲಿಯೂ ವಿಭಜನೆ ಮಾಡಲಾಗಿದೆ.

ಘಟನೆ ವಿವಾದವಾಗುವುದನ್ನು ಅರಿತ ಶಾಲಾ ಪ್ರಾಂಶುಪಾಲರಾದ ಸಿ.ಬಿ. ಸಿಂಗ್ ಶೆರಾವತ್ ಪ್ರತಿಕ್ರಿಯಿಸುತ್ತಾ “ವಿದ್ಯಾರ್ಥಿಗಳ ನಡುವೆ ಸಮಸ್ಯೆಗಳು ಬರಬಾರದೆಂದು ಈ ರೀತಿ ಮಾಡಿದ್ದೇವೆಯೇ ಹೊರತು ಮಕ್ಕಳ ಮಧ್ಯೆ ಬಿರುಕುಂಟು ಮಾಡಲು ಅಲ್ಲವೆಂದೂ, ಇದು ಆಡಳಿತ ಮಂಡಳಿಯ ನಿರ್ಧಾರವಾಗಿದ್ದು, ಶಿಸ್ತು, ಶಾಂತಿ, ಉತ್ತಮ ಕಲಿಕೆಗೆ ಅವಕಾಶ ಮಾಡಿಕೊಡಲು ಈ ರೀತಿ ಮಾಡಲಾಗಿದೆಯೆಂದೂ ಅವರು ಹೇಳಿದರು.

ಆದರೆ ಹಳೆಯ ಪ್ರಾಂಶುಪಾಲರು ಹೋದಾಗ ಹಂಗಾಮಿಯಾಗಿ ಅಧಿಕಾರ ವಹಿಸಿಕೊಂಡ ಅಧ್ಯಾಪಕರು ಈ ರೀತಿ ಮಾಡಿದ್ದಾರೆಂಬ ಆರೋಪವಿದೆ.

ಸಾಂದರ್ಭಿಕ ಚಿತ್ರ

Check Also

ಮಗನ ಕೊಲೆಗಾರನಿಗೆ ನ್ಯಾಯಾಲಯದಲ್ಲಿ ಜೀವದಾನ ನೀಡಿದ ತಾಯಿ -ತಾಯಿಯ ಮಾತು ಕೇಳಿ-ವಿಡಿಯೋ

Image : USA Today ಮಗನ ಕೊಲೆಗಾರನಿಗೆ ಗರಿಷ್ಟ ಶಿಕ್ಷೆ ಆಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಇಲ್ಲೊಬ್ಬರು ತಾಯಿ ತನ್ನ …

Leave a Reply

Your email address will not be published. Required fields are marked *