ಸಿರಿಯ ಶಾಂತಿ ಚರ್ಚೆಯ 9ನೇ ಹಂತ ಪೂರ್ಣ

ಅಸ್ತಾನ, ಮೇ 17: ಸಿರಿಯದಲ್ಲಿ ಶಾಂತಿ ಸ್ಥಾಪನೆಗಾಗಿ ನಡೆಯುತ್ತಿರುವ ಮಧ್ಯಸ್ಥಿಕೆ ಚರ್ಚೆಯ 9ನೆ ಸುತ್ತು ಪೂರ್ತಿಯಾಗಿದೆ. ಇರಾನ್, ರಷ್ಯ, ಟರ್ಕಿಗಳ ಮೇಲ್ನೊಟದಲ್ಲಿ ಮಧ್ಯಸ್ಥಿಕೆ ಚರ್ಚೆ ನಡೆಯುತ್ತಿದೆ. ಕಝಕಿಸ್ಥಾನದ ರಾಜಧಾನಿ ಅಸ್ತಾನದಲ್ಲಿ ಎರಡು ದಿವಸಗಳಿಂದ 9ನೆ ಹಂತದ ಚರ್ಚೆಗಳು ನಡೆಯುತ್ತಿವೆ. ಪ್ರಧಾನ ತೀರ್ಮಾನಗಳನ್ನು ಚರ್ಚೆಯಲ್ಲಿ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಸಿರಿಯದ ಸ್ವಾತಂತ್ರ್ಯಕ್ಕಾಗಿ ಒಗ್ಗಟ್ಟಿಗಾಗಿ ಭೂವೈಜ್ಞಾನಿಕ ಸಂಯೋಜನೆಗಾಗಿ ಮತ್ತು ದೇಶವನ್ನು ಗೌರವಿಸಲು ಸಭೆಯಲ್ಲಿ ಒಮ್ಮತ ಮೂಡಿದೆ.

2017 ಜನವರಿಯಿಂದ ಮೂರು ದೇಶಗಳು ಸಿರಿಯನ್ ವಿಷಯದಲ್ಲಿ ತ್ರಿ ಪಕ್ಷೀಯ ಚರ್ಚೆಗಳನ್ನು ಆರಂಬಿಸಿದ್ದವು. ನಂತರ ಸಿರಿಯದಲ್ಲಿ ಒಂದು ತಿಂಗಳ ಕಾಲ ಕದನ ವಿರಾಮ ಘೋಷಣೆಯಾಗಿತ್ತು.

ಸಿರಿಯದಲ್ಲಿ ಶಾಂತಿ ಮರು ಸ್ಥಾಪನೆಗಾಗಿ ಮೂರು ದೇಶಗಳು ನಿರ್ಧಾರಕ್ಕೆ ಬಂದಿದ್ದವು. ಸಿರಿಯದಲ್ಲಿ ನಡೆಯುವ ದಾಳಿ, ಬಾಂಬಿಂಗ್ ಕಡಿಮೆ ಮಾಡಲು ಅಸ್ತಾನ ಶಾಂತಿ ಚರ್ಚೆಗೆ ಸಾಧ್ಯವಿದೆ ಎಂದು ಭಾವಿಸಲಾಗುತ್ತಿದೆ.

ಸಿರಿಯದ ಐಎಸ್, ಅಲ್‍ಕಾಯಿದ ಮೊದಲಾದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಹೋರಾಡಲು ಸಭೆಯಲ್ಲಿ ಮೂರು ದೇಶಗಳು ತೀರ್ಮಾನಿಸಿವೆ.

Check Also

ಯುಎಇ, ಸೌದಿ, ಬಹ್ರೈನ್‍ಗಳ ಇಫ್ತಾರ್ ಸಹಾಯವನ್ನು ಸ್ವೀಕರಿಸಲು ನಿರಾರಿಸಿದ ಫೆಲಸ್ತೀನ್

ಜೆರುಸಲೇಂ, ಮೇ 21: ಗಲ್ಫ್ ದೇಶಗಳಾದ ಯುಎಇ, ಸೌದಿ ಅರೇಬಿಯ ಮತ್ತು ಬಹ್ರೈನ್‍ಗಳು ಕಳುಹಿಸಿದ ಇಫ್ತಾರ್ ಆಹಾರ ವಸ್ತುಗಳನ್ನು ಫೆಲಸ್ತೀನ್ …

Leave a Reply

Your email address will not be published. Required fields are marked *