Breaking News
Home / ವಾರ್ತೆಗಳು / ಶಹೀದ್ ಅಶ್ಫಾಕುಲ್ಲಾಹ್ ಖಾನ್‍ರ 119 ಜನ್ಮ ದಿನ; ಬಲಿದಾನವನ್ನು ಮರೆಯಲಾದೀತೆ?

ಶಹೀದ್ ಅಶ್ಫಾಕುಲ್ಲಾಹ್ ಖಾನ್‍ರ 119 ಜನ್ಮ ದಿನ; ಬಲಿದಾನವನ್ನು ಮರೆಯಲಾದೀತೆ?

ಹೊಸದಿಲ್ಲಿ, ಅ. 23: ಉಪರಾಷ್ಟ್ರಪತಿ ವೆಂಕಯ್ಯನಾಯಿಡು ಮಂಗಳವಾರ ಶಹೀದ್ ಅಶ್ಫಾಕುಲ್ಲಾ ಖಾನ್‍ರ 119ನೇ ಜನ್ಮದಿನದ ಕುರಿತು ಟ್ವೀಟ್ ಮಾಡಿದ್ದು ” ಇಂದು ಅಶ್ಫಾಕುಲ್ಲಾರ ಜನ್ಮದಿನವಾಗಿದೆ. ಬಲಿದಾನದ ಪುಣ್ಯ ಸ್ಮತಿಗೆ ಪ್ರಣಾಮ ಮಾಡುವೆ. ದೇಶಕ್ಕಾಗಿ ಹುತಾತ್ಮರಾದ ರಾಷ್ಟ್ರದ ಚೇತನ ಅವರು ಎಂದು ಹೇಳಿದರು.

ಅಶ್ಫಾಕುಲ್ಲಾ ಉತ್ತರ ಪ್ರದೇಶ ಶಹಜಾನ್ ಪುರದವರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಮುಂಚೂಣಿಯ ಸದಸ್ಯನಾಗಿದ್ದರು. ಅಶ್ಫಾಕುಲ್ಲಾ ಅಕ್ಟೋಬರ್ 22, 1900ರಲ್ಲಿ ಉತ್ತರ ಪ್ರದೇಶದ ಶಾಜಹಾನ್ ಪುರದಲ್ಲಿ ಜನಿಸಿದರು.

ವೆಂಕಯ್ಯನಾಯಿಡು ಯುವಜನರು ಅಶ್ಫಾಕುಲ್ಲಾರಿಂದ ಪ್ರೇರಣೆ ಪಡೆಯಬೇಕು ಎಂದು ಕರೆ ನೀಡಿದ್ದಾರೆ. ಅಶ್ಫಾಕುಲ್ಲಾರ ದೇಶ ಪ್ರೇಮ ಇಂದಿನ ಮತ್ತು ಭವಿಷ್ಯದ ಪೀಳಿಗೆಗೆ ಶಾಶ್ವತ ಅನುಕರಣಾತ್ಮಕವಾದುದು ಎಂದು ವೆಂಕಯ್ಯನಾಯಿಡು ಹೇಳಿದ್ದಾರೆ ಎಂದು ಪ್ರಭಾ ಸಾಕ್ಷಿ ಪತ್ರಿಕೆ ವರದಿ ಮಾಡಿದೆ.

About editor

Check Also

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು …

Leave a Reply

Your email address will not be published. Required fields are marked *