ಸೌದಿ ಅರೇಬಿಯ, ನ.9: 15 ಲಕ್ಷ ಫೆಲಸ್ತೀನಿಯರಿಗೆ ಹಜ್, ಉಮ್ರಾ ಯಾತ್ರೆಗೆ ನಿಷೇಧ

ರಿಯಾದ್: ಹದಿನೈದು ಲಕ್ಷ ಫೆಲಸ್ತೀನಿ ಪ್ರಜೆಗಳಿಗೆ ಸೌದಿ ಅರೇಬಿಯ ಹಜ್, ಉಮ್ರಾ ಯಾತ್ರೆಯನ್ನು ನಿಷೇಧಿಸಲಾಗುವುದು ಎಂದು ವರದಿಯಾಗಿದೆ.
ತಾತ್ಕಾಲಿಕ ಜೋರ್ಡಾನ್ ಪಾಸ್‍ಪೋರ್ಟ್ ಹೊಂದಿರುವವರಿಗೆ ಹಜ್, ಉಮ್ರಾ ಯಾತ್ರೆಯನ್ನು ಸೌದಿ ಅರೇಬಿಯ ನಿಷೇಧಿಸಿದೆ ಎಂದು ಮಿಡ್ಲೀಸ್ಟ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜೋರ್ಡಾನ್, ಲೆಬನಾನ್, ಪೂರ್ವ ಜೆರುಸಲೇಂ, ಇಸ್ರೇಲ್‍ನಲ್ಲಿ ವಾಸ್ತವ್ಯ ಹೊಂದಿರುವ ಫೆಲಸ್ತೀನಿಯರಿಗೆ ಸೌದಿ ಅರೇಬಿಯ ವೀಸಾ ನಿರಾಕರಿಸಲಿದೆ. ತಾತ್ಕಾಲಿಕ ಪ್ರಯಾಣ ದಾಖಲೆ ಹೊಂದಿದವರಿಗೆ ಹೊಸ ಕಾನೂನು ಪ್ರಕಾರ ವೀಸಾ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಮೇಲೆ ವಿವರಿಸಿದ ಸ್ಥಳಗಳಲ್ಲಿರುವವರಿಗೆ ಮತ್ತು ಜೋರ್ಡಾನ್ ಲೆಬನಾನ್‍ನಲ್ಲಿ ವಾಸವಿದ್ದು ತಾತ್ಕಾಲಿಕ ಪ್ರಯಾಣದ ದಾಖಲೆಯನ್ನು ಹೊಂದಿರುವವರಿಗೆ ಉಮ್ರಾ ಯಾತ್ರೆ ಮತ್ತು ಮಕ್ಕ ಸಂದರ್ಶನವನ್ನು ನಿರಾಕರಿಸಲಾಗುತ್ತಿದೆ.

ಹೊಸ ಕಾನೂನು ಸೆಪ್ಟಂಬರ್ 12ರಿಂದಲೇ ಜಾರಿಗೆ ಬಂದಿದೆ. 30 ಲಕ್ಷದಷ್ಟು ಫೆಲಸ್ತೀನಿಯರನ್ನು ಸೌದಿ ಹೊಸ ಕಾನೂನು ಹಜ್, ಉಮ್ರಾ ಯಾತ್ರೆಯಿಂದ ದೂರ ಇಡಲಿದೆ. ಇಂತಹ ದಾಖಲೆಗಳಲ್ಲದೆ ಇವರಲ್ಲಿ ಬೇರೆ ದಾಖಲೆಗಳಿಲ್ಲ. ಆದರೆ ಈ ದಾಖಲೆಗಳನ್ನಿಟ್ಟು ಫೆಲಸ್ತೀನಿಯರು ಹಜ್, ಉಮ್ರಾ ಯಾತ್ರೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸೌದಿ ಅರೇಬಿಯ ತಿಳಿಸಿದೆ. ಜೋರ್ಡಾನ್, ಲೆಬನಾನ್‍ಗಳಲ್ಲಿನ ಟ್ರಾವೆಲ್ ಏಜೆನ್ಸಿಯನ್ನು ಉದ್ಧರಿಸಿ ಮಿಡ್ಲೀಸ್ಟ್ ಐ ವರದಿ ಮಾಡಿದೆ.

Check Also

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು, ನ.15: ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ …

Leave a Reply

Your email address will not be published. Required fields are marked *