ಇಸ್ರೇಲಿನಿಂದ ಮಿಸೈಲು ಖರೀದಿಸುತ್ತಿರುವ ಸೌದಿ ಅರೇಬಿಯ

ರಿಯಾದ್, ಸೆ.15: ಸೌದಿ ಅರೇಬಿಯವು ಇಸ್ರೇಲ್ ದೇಶದಿಂದ ಅತ್ಯಾಧುನಿಕ ಐಯೋನ್ ಡೋಂ ಮಿಸೈಲುಗಳನ್ನು ಖರೀದಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಒಪ್ಪಂದವು ಎರಡು ದೇಶಗಳ ನಡುವೆ ಆಗಿದೆ ಎಂದು ರಾಜತಾಂತ್ರಿಕ ವಿಭಾಗದ ಮೂಲಗಳನ್ನು ಉದ್ಧರಿಸಿ ಅಲ್ ಖಲೀಜ್ ಆನ್‍ಲೈನ್ ಪತ್ರಿಕೆ ವರದಿ ಮಾಡಿದ್ದು, ಇದಕ್ಕಾಗಿ ಎರಡು ದೇಶಗಳು ಪರಸ್ಪರ ಸಾಮರಸ್ಯದಲ್ಲಿದೆ ಎಂದು ತಿಳಿದು ಬಂದಿದೆ.

ಇಸ್ರೇಲಿನೊಂದಿಗೆ ರಾಜಕೀಯವಾಗಿ ಒಟ್ಟು ಸೇರವುದಷ್ಟೇ ಸೌದಿಯ ಉದ್ದೇಶವಾಗಿಲ್ಲ. ಯುಎಇಯಂತೆ ಅಲ್ಲಿಂದ ಆಯುಧಗಳನ್ನು ಖರೀದಿಸಿ ತಮ್ಮ ರಕ್ಷಣಾ ವ್ಯೂಹವನ್ನು ಬಲಪಡಿಸಲು ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈಗ ಇಸ್ರೇಲ್ ಮತ್ತು ಸೌದಿ ನಡುವಿನ ಸಂಬಂಧ ಹಿಂದೆಂದಿಗಿಂತ ಉತ್ತಮಗೊಂಡಿದೆ ಎಂದು ಇಸ್ರೇಲಿನ ಸೇನಾ ಮುಖ್ಯಸ್ಥ ಜನರಲ್ ಗಾದಿ ಎಸಿನ್‍ಕೋಟೆ ಹೇಳಿದರು.

ಇರಾನನ್ನು ಎದುರಿಸಲು ಸೌದಿ ಇಸ್ರೇಲಿನ ಮೊರೆ ಹೋಗಿದೆ ಎನ್ನಲಾಗಿದ್ದು, ಬೇಹುಗಾರಿಕೆ ವ್ಯವಸ್ಥೆಯನ್ನು ಪರಸ್ಪರ ಹಂಚಿಕೆ ನಡೆಸಲು ಈಗಾಗಲೇ ಎರಡು ದೇಶಗಳು ತೀರ್ಮಾನಿಸಿವೆ ಎಂದು ವರದಿಯಾಗಿತ್ತು.

Check Also

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು, ನ.15: ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ …

Leave a Reply

Your email address will not be published. Required fields are marked *