ಪ್ರತೀಕಾರ

ಪ್ರಶ್ನೆ: ಚಿಕ್ಕ ವಿಷಯಕ್ಕೂ ಪ್ರತೀಕಾರ ದಾಹಿಗಳಂತೆ ವರ್ತಿಸುವುದು ಸರಿಯೇ?

ಉತ್ತರ: ಸರಿಯಲ್ಲ. ಒಂದು ವೇಳೆ ನಿಮ್ಮನ್ನು ಒಬ್ಬ ಅಪಮಾನಿಸಿ ನಿಂದಿಸಿದರೆ ನೀವು ಸುಮ್ಮನಿರದೆ ಪ್ರತಿಕಾರಕ್ಕಾಗಿ ಸಂದರ್ಭವನ್ನು ಕಾಯುತ್ತಿದ್ದಿರಬಹುದು. ಇದಕ್ಕಿಂತ ಅಪಮಾನಿಸಿದ ನಿಂದಿಸಿದ ವ್ಯಕ್ತಿಯನ್ನು ಕ್ಷಮಿಸುವುದು ಬಲಾಢ್ಯ ವಿಶ್ವಾಸಿಯ ಗುಣಗಳಲ್ಲಿ ಸೇರಿದೆ.

ಪ್ರವಾದಿ ಮುಹಮ್ಮದರು(ಸ) ನಮಗೆ ಇಂತಹ ಸಂದರ್ಭದಲ್ಲಿ ಮಾದರಿಯಾಗಬೇಕಿದೆ. ತಮಗೆ ಕಿರುಕುಳ ನೀಡಿದ ಬಹುತೇಕ ಎಲ್ಲರಿಗೂ ಅವರು  ಕ್ಷಮೆ ನೀಡಿದರು. ಮಕ್ಕ ವಿಜಯದ ಸಂದರ್ಭದಲ್ಲಿ ಇದಕ್ಕೆ ಇತಿಹಾಸವೇ ಉದಾತ್ತ ಉದಾಹರಣೆಯನ್ನು ನೀಡಿದೆ. ಚಿಕ್ಕಪ್ಪ ಹಝ್ರತ್  ಹಂಝರ ಕೊಲೆ ಗಡುಕರನ್ನು ಪ್ರವಾದಿ(ಸ) ಕ್ಷಮಿಸಿ ಬಿಟ್ಟರು. ಹೀಗೆ ಹಲವು ಅಪರಾಧವೆಸಗಿದವರಿಗೆ ಕ್ಷಮೆ ನೀಡಿದರು.

ಉದಾಹರಣೆಗೆ ನಿಮಗೆ  ನಿಕಟ ಸಂಬಂಧಿಕರೊಬ್ಬರನ್ನು ಒಬ್ಬ ವ್ಯಕ್ತಿ ಕೊಲೆ ಮಾಡಿದರೆಂದು ಇಟ್ಟು ಕೊಳ್ಳೋಣ. ಆತನ ವಿರುದ್ಧ ಪ್ರತೀಕಾರಕ್ಕೆ ಅವಕಾಶವಿದ್ದರೂ ನಿಮ್ಮಲ್ಲಿ ಕಡಿಮೆ ಮಂದಿ ಮಾತ್ರವೇ ಕ್ಷಮಿಸಲು ಸಿದ್ಧರಿರುತ್ತಾರೆ. ಹೀಗೆ ಕ್ಷಮಿಸ ಬಲ್ಲವರು ಬಲಾಢ್ಯ ವಿಶ್ವಾಸಿಗಳು. ಇವರನ್ನು ಪ್ರವಾದಿಯವರ (ಸ) ಮಾದರಿಯನ್ನು ಬಹಳ ಗಟ್ಟಿಯಾಗಿ ಬಿಗಿ ಹಿಡಿದವರೆಂದೂ ಹೇಳಬಹುದು.

ಪವಿತ್ರ ಕುರ್‍ಆನ್ ಹೀಗೇ ಹೇಳುತ್ತದೆ- ನಿಶ್ಚಯವಾಗಿಯೂ  ಅಲ್ಲಾಹನ ಸಂದೇಶವಾಹಕರಲ್ಲಿ ನಿಮಗಾಗಿ ಒಂದು ಅತ್ಯುತ್ತಮ ಮಾದರಿ ಇತ್ತು(ಇದು) ಅಲ್ಲಾಹ್ ಹಾಗೂ ಅಂತಿಮ ದಿನವನ್ನು ನಿರೀಕ್ಷಿಸುವವನಿಗೆ ಮತ್ತು ಅಲ್ಲಾಹನನ್ನು ಬಹಳವಾಗಿ ಸ್ಮರಿಸುವವನಿಗೆ. (ಅಲ್‍ಅಹ್ಝಾಬ್-21)

ನಮ್ಮ ಗೆಳೆಯರು, ತಂದೆ-ತಾಯಿ ಸಂಗಾತಿಗಳೊಂದಿಗೆ ಕ್ಷಮಾಭಾವದಿಂದ ವರ್ತಿಸಬೇಕಿದೆ. ಅಂದರೆ ಹೆಚ್ಚಿನ ಜನರಿಗೆ ಇದು ಸಾಧ್ಯವಾಗುವುದಿಲ್ಲ. ನಮಗೆ ಇತರರು ಮಾಡಿದ ತಪ್ಪುಗಳನ್ನು ವರ್ಷಗಳ ಬಳಿಕವೂ ಮರೆತು ಬಿಡಲು ಕಷ್ಟ ಪಡುವವರು ನಮ್ಮಲ್ಲಿ ಹೆಚ್ಚು ಮಂದಿ ಇದ್ದಾರೆ. ಒಂದು ಕಡೆ ಇದನ್ನು ಸಮರ್ಥಿಸಲು ಕೆಲವರು ಶ್ರಮಿಸುವುದಿದೆ. ಆದರೆ ಪ್ರವಾದಿ ಜೀವನವನ್ನು ತೆಗೆದು ನೋಡಿದರೆ ಅಲ್ಲಿ  ನಮಗೆ ಕ್ಷಮೆಯ ಮಹಾಪೂರವೇ ಕಾಣ ಸಿಗುತ್ತದೆ.

ತಾಯಿಫ್ ನಿವಾಸಿಗಳು ಪ್ರವಾದಿಯವರಿಗೆ(ಸ) ಕಲ್ಲೆಸೆದು ಗಾಯಗೊಳಿಸಿ ಓಡಿಸಿದಾಗ ದೇವಚರನೇ ಬಂದು ನಾಶ ಪಡಿಸುವುದಕ್ಕೆ ಸಹಮತ ಕೇಳಿದ್ದಿದೆ. ಆದರೆ ಅಂತಹ ಒಂದು ಅವಕಾಶ ನೀಡದ ಪ್ರವಾದಿ ಆ ಅಜ್ಞಾನಿಗಳನ್ನು ಕ್ಷಮಿಸಿ ಅವರ ಜ್ಞಾನೋದಯಕ್ಕಾಗಿ ಪ್ರಾರ್ಥಿಸಿದರು.  ಇಂತಹ ಮಾದರಿ ಮುಖ್ಯವಾಗಿ ಮುಸ್ಲಿಮರು ಅಳವಡಿಸಿ ಕೊಳ್ಳಬೇಕಿದೆ. ಅಂದರೆ ಕ್ಷಮೆ ಬಲಾಢ್ಯ ಸತ್ಯ ವಿಶ್ವಾಸಿಯ ಗುಣಗಳಲ್ಲೊಂದು.

ಇನ್ನೊಬ್ಬನನ್ನು ಕ್ಷಮಿಸುವುದು ಎಂದರೆ ಆ ವ್ಯಕ್ತಿಯೊಂದಿಗೆ ನಿಮ್ಮ ಮನಸ್ಸಿನಲ್ಲಿರುವ ಪ್ರತೀಕಾರ ತೀರಿಸುವುದು ಎಂದು ಅರ್ಥವಲ್ಲ. ನಿಮಗೆ ಪ್ರತೀಕಾರ ತೀರಿಸುವ ಎಲ್ಲ ಅವಕಾಶ ಇದ್ದರೂ ಅದಕ್ಕೆ ಮುಂದಾಗದೆ ಕ್ಷಮಿಸುವುದು ಎಂದರ್ಥವಾಗಿದೆ. ಜೊತೆಗೆ ಅವನಿಗೆ ಶಾಪ ಹಾಕಿ  ಕ್ಷಮಿಸುವುದೂ ಅಲ್ಲ. ಬದಲಾಗಿ ಅವರ ಕಲ್ಯಾಣ, ಒಳ್ಳೆಯ ಮನಸ್ಸಿಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾಗಿದೆ.

ಇಂತಹ ಮಾದರಿಗಳನ್ನು  ಇಸ್ಲಾಮ್ ಪ್ರವಾದಿಯವರ(ಸ) ಮೂಲಕ ನಮಗೆ ಕಲಿಸಿ ಕೊಟ್ಟಿದೆ. ಆದ್ದರಿಂದ ಇಂದು ನಾವು ಹೆಚ್ಚು ಕ್ಷಮಿಸಲು ಮತ್ತು ಸಹನೆ ವಹಿಸಲು  ಕಲಿಯಬೇಕಾಗಿದೆ

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *