ರಮಝಾನ್ ಆಹಾರ ಸಾಮಗ್ರಿ ವಿತರಣೆ ವೇಳೆ ನೂಕು ನುಗ್ಗಲು: 11 ಸಾವು

ಬಾಂಗ್ಲಾದೇಶ, ಮೇ 17: ಬಾಂಗ್ಲಾದೇಶದ ಚಿತ್‍ಗಾಂವ್‍ನಲ್ಲಿ ರಮಝಾನ್ ಆಹಾರ ಸಾಮಗ್ರಿ ವಿತರಣೆ ವೇಳೆ ನೂಕುನುಗ್ಗಲು ನಡೆದು ಹಲವಾರು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿ.

ತೀವ್ರ ಸೆಕೆ ಇದ್ದುದರಿಂದ ಆಹಾರ ವಸ್ತು ಪಡೆಯಲು ಬಂದಿದ್ದ 20ಸಾವಿರಕ್ಕೂ ಹೆಚ್ಚು ಜನರಲ್ಲಿ ನೂಕು ನುಗ್ಗಲು ಆಗಿದೆ. ಕನಿಷ್ಠ ಹನ್ನೊಂದು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ದೊರಕಿದೆ.

ಈ ದುರ್ಘಟನೆಯ ಕುರಿತು ಜಿಲ್ಲಾಡಳಿತ ತನಿಖೆಗೆ ಐವರ ಸಮಿತಿಯನ್ನು ನೇಮಕಗೊಳಿಸಿದೆ. ಜೊತೆಗೆ ಮೃತರ ಕುಟುಂಬಕ್ಕೆ ಮೂರು ಲಕ್ಷ ಟಾಕ ನಷ್ಟ ಪರಿಹಾರ ಘೋಷಿಸಿದೆ.

ಪೊಲೀಸರು ತಿಳಿಸಿದ ಪ್ರಕಾರ ಚಿತ್‍ಗಾಂವ್ ತಾಲೂಕಿನ ಯೂನಿನ್ಸ್ ಗತಿಯಾದೆಂಗಾ ಪ್ರದೇಶದಲ್ಲಿ ರಮಝಾನ್ ಮೊದಲು ಇಫ್ತಾರಿನ ವಸ್ತುಗಳನ್ನು ಹಂಚಲಾಗುತ್ತಿತ್ತು. ಇದನ್ನು ಪಡೆಯಲು ಮದ್ರಸಾ ಪರಿಸರದಲ್ಲಿ ಜನಸಂದಣಿ ನೆರೆದಿತ್ತು.

ಕೆಎಸ್‍ಆರ್ ಎಂ ಸ್ಟೀಲ್ ಕಂಪೆನಿ ಸ್ಥಳೀಯ ಜನರಿಗೆ ಇಫ್ತಾರಿಗಾಗಿ ಸೇವಿಗೆ, ಸಕ್ಕರೆ, ಈರುಳ್ಳಿ ಸಹಿತ ಹಲವು ವಸ್ತುಗಳನ್ನು ಹಂಚಿತ್ತು. ಪೊಲೀಸ್ ಅಧೀಕ್ಷಕ ಇಮ್ರಾನ್ ಭುಯಿಯಾನ್ ಈ ದುರ್ಘಟನೆಯಲ್ಲಿ ಹನ್ನೊಂದು ಮಂದಿ ಮೃತಪಟ್ಟಿದ್ದು, ಇವರಲ್ಲಿ ಎಂಟು ಮಂದಿ ಮಹಿಳೆಯರು ಎಂದು ತಿಳಿಸಿದ್ದಾರೆ.

Check Also

ಮಕ್ಕದಲ್ಲಿ ನಡೆಯಲು ಕಷ್ಟಪಡುತ್ತಿದ್ದ ಮಹಿಳೆಗೆ ತನ್ನ ಶೂ ನೀಡಿದ ಪೊಲೀಸ್- ವೀಡಿಯೊ ವೈರಲ್

ಸೌದಿ ಅರೇಬಿಯ, ಆ.14: ಮಕ್ಕದಲ್ಲಿ ಭಾರೀ ಉಷ್ಟತೆಯಿದೆ. ಆದ್ದರಿಂದ ರಸ್ತೆಯಲ್ಲಿ ನಡೆಯಲು ಆಗದೆ ಕಷ್ಟ ಅನುಭವಿಸಿದ ಮಹಿಳಾ ಹಾಜಿಯೊಬ್ಬರಿಗೆ ಸೌದಿ …

Leave a Reply

Your email address will not be published. Required fields are marked *