ರಾಮ ಮಂದಿರ ನಾಶಗೈದವರು ಭಾರತೀಯ ಮುಸ್ಲಿಮರಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ಮುಂಬೈ, ಎ.16: “ಅಯೋಧ್ಯೆಯ ರಾಮ ಮಂದಿರವನ್ನು ‘ಹೊರಗಿನವರು’ ನಾಶಗೊಳಿಸಿದ್ದರೇ ವಿನಃ ಭಾರತೀಯ ಮುಸ್ಲಿಮರಲ್ಲ” ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.  ರಾಮ ಮಂದಿರ ಮೂಲತಃ ಎಲ್ಲಿತ್ತೋ ಅಲ್ಲಿಯೇ ಅದನ್ನು ಮರು ನಿರ್ಮಿಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ಎಂಬಲ್ಲಿ ನಡೆದ ವಿರಾಟ್ ಹಿಂದೂ ಸಮ್ಮಳೇನದಲ್ಲಿ ಮಾತನಾಡಿದ ಭಾಗವತ್ ಮೇಲಿನಂತೆ ಹೇಳಿದ್ದಾರೆ. “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದೇ ಇದ್ದಲ್ಲಿ ನಮ್ಮ ಸಂಸ್ಕೃತಿಯ ಬೇರು ತುಂಡಾಗುವುದು” ಎಂದು ತಿಳಿಸಿದರು.

“ಭಾರತದ ಮುಸ್ಲಿಂ ಸಮುದಾಯ ರಾಮ ಮಂದಿರವನ್ನು ನಾಶ ಪಡಿಸಿಲ್ಲ, ಭಾರತೀಯರು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ, ಇದು ಹೊರನಗಿನವರ ಕೃತ್ಯ. ಅದನ್ನು  ಮರು ನಿರ್ಮಿಸುವುದು ನಮ್ಮ ಜವಾಬ್ದಾರಿ” ಎಂದು ಹೇಳಿದ ಭಾಗವತ್, ಹಿಂದೂಗಳನ್ನು ಮತಾಂತರಗೊಳಿಸಲು ಕೆಲ ಧಾರ್ಮಿಕ ಗುಂಪುಗಳನ್ನು ಯತ್ನಿಸುತ್ತಿದೆ ಎಂದು ಆರೋಪಿಸಿದರು.

“ಎಲ್ಲಾ ಧರ್ಮಗಳ ಸಾರವೂ ಒಂದೇ ಎಂದು ಹೇಳುವಾಗ ಜನರನ್ನು ಮತಾಂತರಗೊಳ್ಳಲು ಹೇಳುತ್ತಿರುವುದೇಕೆ ?, ಧರ್ಮದ ವಿಚಾರ ಬಂದಾಗ ಹಿಂದೂಗಳು ಹೋರಾಟಕ್ಕೆ ಸಜ್ಜಾಗಬೇಕೆಂದು ನಾನು ಹೇಳುತ್ತೇನೆ. ಕೆಲವರ ಸಿಹಿ ಮಾತುಗಳ ಬಗ್ಗೆ ಹಿಂದೂಗಳು ಜಾಗೃತರಾಗಬೇಕು” ಎಂದು ಭಾಗವತ್ ಹೇಳಿದರು.

ಕೃಪೆ: ವಾರ್ತಾ ಭಾರತಿ

Check Also

ಫಿಫಾ ವಿಶ್ವಕಪ್ ಪಂದ್ಯಾವಳಿ ಗಳಿಕೆಯನ್ನು ಮಸೀದಿ ನಿರ್ಮಾಣಕ್ಕೆ ದಾನ ಮಾಡಲಿರುವ ಫ್ರಾನ್ಸ್ ತಂಡದ ಉಸ್ಮಾನ್ ದೆಂಬೆಲ್

ಪ್ಯಾರಿಸ್, ಜು.20: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಗೆದ್ದ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಉಸ್ಮಾನ್ ದೆಂಬೆಲ್ ಪಂದ್ಯಾವಳಿಯ ತಮ್ಮ …

Leave a Reply

Your email address will not be published. Required fields are marked *