ಇಸ್ರೇಲ್‍ನಿಂದ ಗಲ್ಫ್ ವಲಯಕ್ಕೆ ರೈಲು

ಟೆಲ್ ಅವೀವ್, ನ.9: ಇಸ್ರೇಲ್‍ನ ಹೈಫ ನಗರದಿಂದ ಗಲ್ಫ್ ಕ್ಷೇತ್ರಕ್ಕೆ ರೈಲು ಮಾರ್ಗ ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ. ಮೆಡಿಟೇರಿಯನಿಯನ್ ಸಮುದ್ರ ಮೂಲಕ ಇಸ್ರೇಲ್ ರೈಲು ಮಾರ್ಗ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ ಎಂದು ರಷ್ಯದ ಸುದ್ದಿ ಸಂಸ್ಥೆ ಆರ್‍ಟಿ ವರದಿ ಮಾಡಿದೆ.

ಇಸ್ರೇಲ್ ಸಾರಿಗೆ-ಇಂಟಲಿಜೆನ್ಸ್ ಸಚಿವ ಯಿಸ್ರೇಯೇಲ್ ಕಕಾಟ್ಸನ್‍ರನ್ನು ಉದ್ಧರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದ್ದು ಒಮನ್‍ನಲ್ಲಿ ನಡೆಯಲಿರುವ ಇಂಟರ್‍ನ್ಯಾಶನಲ್ ರೋಡ್ ಟ್ರಾನ್ಸ್‍ಪೋರ್ಟ್ ಯೂನಿಯನ್ ಸಭೆಯಲ್ಲಿ ಈ ಯೋಜನೆಯನ್ನು ಅವರು ಮುಂದಿರಿಸಿದ್ದರು.

ಸೌದಿ ಮೂಲಕ ರೈಲು ಮಾರ್ಗ ಹಾದು ಬರಲಿದೆ. ಈ ರೀತಿ ಅರಬ್ ದೇಶಗಳೊಂದಿಗೆ ಹೆಚ್ಚಿನ ಸಂಬಂಧ ಸ್ಥಾಪಿಸುವುದು ಇಸ್ರೇಲಿನ ಉದ್ದೇಶವಾಗಿದೆ ಎಂದು ವರದಿ ತಿಳಿಸಿದೆ.

ಮೆಡಿಟರೇನಿಯನ್ ಸಮುದ್ರದ ಮೂಲಕ ಜೋರ್ಡಾನ್ ರೈಲು ಸೇತುವೆ ನಿರ್ಮಿಸುವ ಕುರಿತು ಸಮಾಲೋಚನೆ ನಡೆದಿದ್ದು, ಇದಕ್ಕೆ ಸಂಬಂಧ ಪಟ್ಟು ಹೆಚ್ಚಿನ ವಿವರಗಳನ್ನು ಪ್ರಧಾನಿ ನೆತನ್ಯಾಹು ವಿವರಿಸಲಿದ್ದಾರೆ. ಇದೇ ವೇಳೆ, ಗಲ್ಫ್ ದೇಶಗಳು ಇಸ್ರೇಲಿನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲದ ಕಾರಣ ಯೋಜನೆಯನ್ನು ಹೇಗೆ ಜಾರಿಗೆ ತರುವುದು ಎಂಬ ಬಗ್ಗೆ ಸಂದೇಹ ವ್ಯಕ್ತವಾಗಿದೆ.

Check Also

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು, ನ.15: ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ …

Leave a Reply

Your email address will not be published. Required fields are marked *