Breaking News
Home / ವಾರ್ತೆಗಳು / ಕುರ್‍ಆನ್ ಫಾರ್ ಆಂಡ್ರಾಯಿಡ್

ಕುರ್‍ಆನ್ ಫಾರ್ ಆಂಡ್ರಾಯಿಡ್

ವಿಕೆ ಅಬ್ದು

ಆಂಡ್ರಾಯಿಡ್ ಫೋನ್ ಉಪಯೋಗಿಸುವವರಿಗೆ ಈಗ ಪ್ಲೇ ಸ್ಟೋರಿನಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಈಗ ಇಪ್ಪತ್ತೆಂಟು ಲಕ್ಷ ಆಪ್‍ಗಳು ಲಭ್ಯವಿದ್ದು ಇದರಲ್ಲಿ ಪವಿತ್ರ ಕುರ್‍ಆನ್‍ಗೆ ಸಂಬಂಧಿಸಿದ ನೂರಾರು ಆಪ್‍ಗಳೂ ಸೇರಿವೆ. ಹೆಚ್ಚು ಜನಪ್ರಿಯ ಮತ್ತು ಜನಪ್ರಿಯವಲ್ಲದ್ದೂ ಇವೆ. ಪ್ರತಿಯೊಂದು ಆಪ್‍ನಲ್ಲಿ ಬೇರೆ ಬೇರೆ ರೀತಿಯ ಕಾರ್ಯ, ಮತ್ತು ಗುರಿಯಿರಬಹುದು. ಆದರೆ ಜಗತ್ತಿನಾದ್ಯಂತ ವಿವಿಧ ಭಾಷೆಗಳ ಪವಿತ್ರ ಕುರ್‍ಆನ್ ಅನುವಾದ ವ್ಯಾಖ್ಯಾನಗಳನ್ನು ಆಪ್ ಮೂಲಕ ನೋಡುವ ಸೌಕರ್ಯ ದೊರೆಯುತ್ತಿದೆ.

ಇವುಗಳಲ್ಲಿ ಕುರ್‍ಆನ್‍ ಡಾಟ್ ಕಾಂ ಅಭಿವೃದ್ಧಿ ಪಡಿಸಿದ ಕುರ್‍ಆನ್ ಫಾರ್ ಆಂಡ್ರಾಯಿಡ್ ಹೆಚ್ಚು ಜನಪ್ರಿಯತೆ ಪಡೆದಿರುವ ಆಪ್ ಆಗಿದೆ. ಸಾಧಾರಣ ಪವಿತ್ರ ಕುರ್‍ಆನ್ ಓದುವಿಕೆಗೆ ಉಪಯೋಗಿಸಲು ಹೆಚ್ಚು ಸರಳವಾದ ಆಪ್ ಎನ್ನುವ ವಿಶೇಷತೆಯನ್ನು ಇದು ಪಡೆದು ಕೊಂಡಿದೆ. ಈಗಾಗಲೇ ಈ ಆಪ್‍ಅನ್ನು ಒಂದು ಕೋಟಿಗೂ ಹೆಚ್ಚು ಡೌನ್ ಲೋಡ್ ಮಾಡಿಕೊಳ್ಳಲಾಗಿದೆ. ಸರಳ ಪುಟ, ಸ್ವತಂತ್ರ ಪೇಜ್ ಬುಕ್‍ಮಾರ್ಕ್‍ಗಳು, ಅಧ್ಯಾಯ ಬುಕ್‍ ಮಾರ್ಕ್‍ಗಳು ಇದರ ವಿಶೇಷತೆ.

ಅಧ್ಯಾಯ ಟ್ಯಾಗ್ ಮಾಡಲು, ಕಾಪಿ ಮಾಡಲು ಸಾಮಾಜಿಕ ಮಾಧ್ಯಮಗಳ ಮೂಲಕ ಶೇರ್ ಮಾಡಲು ಸೌಕರ್ಯವನ್ನು ಹೊಂದಿದೆ. ಪವಿತ್ರ ಕುರ್‍ಆನ್‍ನ ಸಚ್ ವ್ಯವಸ್ಥೆಯೂ ಇಲ್ಲಿ ವಿಶೇಷವೇ ಆಗಿದೆ.

ಮದೀನದ ಕಿಂಗ್ ಫಹದ್ ಕುರ್‍ಆನ್ ಫ್ರಿಂಟಿಂಗ್ ಕಾಂಪ್ಲೆಕ್ಸ್ ನ ಕುರ್‍ಆನ್ ಫಾಂಟನ್ನು ಇದರಲ್ಲಿ ಉಪಯೋಗಿಸಲಾಗಿದೆ. ಉರ್ದು, ಹಿಂದಿ, ಬಂಗಾಳಿ, ಮಲೆಯಾಲಮ್, ತಮಿಳು ಸಹಿತ ಭಾರತದ ಐವತ್ತರಷ್ಟು ಭಾಷೆಗಳಲ್ಲಿ ಇದರಲ್ಲಿ ಅನುವಾದ ಲಭ್ಯ. ಕುರ್‍ಆನ್ ವ್ಯಾಖ್ಯಾನ, ಅನುವಾದ ರಿಯಾದ್ ಕಿಂಗ್  ಸವೂದ ಯುನಿವರ್ಸಿಟಿಯ ಇಲಕ್ಟ್ರಾನಿಕ್ ಪ್ರಾಜೆಕ್ಟ್ ಅನ್ನು ಅವಲಂಬಿಸಿ ಮಾಡಲಾಗಿದೆ. ಕೆಲವು ಅನುವಾದಗಳಿಗೆ ತಂಝಿಲ್ ಡಾಟ್ ಕಾಮ್ ವೆಬ್‍ಸೈಟನ್ನು ಉಪಯೋಗಿಸಬಹುದಾಗಿತ್ತು. ಪ್ರಸಿದ್ಧ ನಾಲ್ವರು ಖಾರಿಗಳ ಕುರ್‍ಆನ್ ವಾಚನ ಇದರಲಿದೆ. ಅನುವಾದ , ವ್ಯಾಖ್ಯಾನ, ಪಾರಾಯಣಗಳನ್ನು ಅಗತ್ಯನುಸಾರ ಡೌನ್‍ಲೋಡ್ ಮಾಡಬಹುದಾಗಿದೆ.

About editor

Check Also

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು …

Leave a Reply

Your email address will not be published. Required fields are marked *