ಕುರ್‍ಆನಿನಲ್ಲಿ ಇರುವೆಗಳ ಸಂವಹನ ಪ್ರಕ್ರಿಯೆ

– ಅಲ್ಲಾಹನ ನಿದರ್ಶನಗಳು – 

@ ಹಾರೂನ್ ಯಹ್ಯಾ

ಪ್ರವಾದಿ ಸುಲೈಮಾನ್ (ಅ) ರವರ ಜೀವನದ ಘಟನಾವಳಿಗಳನ್ನು ಉಲ್ಲೇಖಿಸಿರುವ ಪವಿತ್ರ ಕುರ್‍ಆನ್ ಇರುವೆಗಳು ಸಂಭಾಷಣೆ ನಡೆಸುವುದರ ಕುರಿತು ಈ ರೀತಿ ತಿಳಿಸಿದೆ.

“(ಒಮ್ಮೆ ಸುಲೈಮಾನರು ಈ ಸೇನೆಯ ಜೊತೆ ಪ್ರಯಾಣಿಸುತ್ತಾ) ಇವರೆಲ್ಲರೂ ಇರುವೆಗಳ ಕಣಿವೆಗೆ ತಲುಪಿದಾಗ ಒಂದು ಇರುವೆಯು, “ಇರುವೆಗಳೇ ನಿಮ್ಮ ಬಿಲಗಳೊಳಗೆ ನುಗ್ಗಿ ಕೊಳ್ಳಿರಿ. ಸುಲೈಮಾನರೂ ಅವರ ಸೇನೆಗಳೂ ಅರಿಯದೇ ನಿಮ್ಮನ್ನು ತುಳಿದು ಬಿಡುವಂತಾಗದಿರಲಿ” ಎಂದಿತು.” (ಪವಿತ್ರ ಕುರ್‍ಆನ್ 27:18)

ಅತೀ ಚಿಕ್ಕ ಜೀವಿಗಳಾದ ಇರುವೆಗಳೂ ಕೂಡ ಬಹಳ ವ್ಯವಸ್ಥಿತ ಸಾಮಾಜಿಕ ಜೀವನವನ್ನು ನಡೆಸುತ್ತವೆ. ಇದು ಒಂದು ಸಂಘಟನೆಯ ಕಾರ್ಯ ನಿರ್ವಹಣಾ ವೈಖರಿಯನ್ನು ಸೂಚಿಸುತ್ತದೆ. ಇರುವೆಗಳಲ್ಲಿ ಅತೀ ಸಂಕೀರ್ಣ ಸಂವಹನ ಸಂಪರ್ಕವನ್ನು ಹೊಂದಿವೆ ಎಂದು ವೈಜ್ಞಾನಿಕ ಸಂಶೋಧನೆಗಳು ಈಗಾಗಲೇ ವರದಿ ಮಾಡಿವೆ.

ನ್ಯಾಷನಲ್ ಜಿಯೋಗ್ರಾಫಿಕ್ ವರದಿಗಳ ಪ್ರಕಾರ “ಒಂದು ಇರುವೆಗಳ ಸಮೂಹದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಇರುವೆಗಳಿರುತ್ತವೆ ಆದರೆ ಅವುಗಳೆಲ್ಲ ಹೆಣ್ಣು ಇರುವೆಗಳಾಗಿರುತ್ತವೆ. ಇವುಗಳಲ್ಲಿನ ಅತಿ ದೊಡ್ಡ ಮತ್ತು ಸಣ್ಣ ಹೆಣ್ಣು ಇರುವೆಯೂ ಕೂಡ ತನ್ನ ತಲೆಯಲ್ಲಿ ಬಹುಮುಖ ಸಂವೇದನಾಶೀಲ ಅಂಗಗಳನ್ನು ಹೊಂದಿದ್ದು ರಸಾಯನಿಕಗಳನ್ನು ಬಿಡುಗಡೆ ಮಾಡಲು ಮತ್ತು ತನ್ನ ಸಂಕೇತಗಳನ್ನು ಪ್ರಕಟಿಸಲು ಬಳಸುತ್ತದೆ. ಇರುವೆಯ ಮೆದುಳಿನಲ್ಲಿ 5 ಲಕ್ಷಕ್ಕಿಂತಲೂ ಅಧಿಕ ನರಗಳನ್ನೊಳಗೊಂಡ ನರವ್ಯೂಹವಿದೆ, ಕಣ್ಣುಗಳು ಸಂಯುಕ್ತವಾಗಿವೆ, ಆಂಟೆನಾಗಳು ಮೂಗಿನಂತೆ ಹಾಗೂ ಬೆರಳಂಚಿನಂತೆ ಕಾರ್ಯ ನಿರ್ವಹಿಸುತ್ತವೆ. ರಕ್ಷಣೆಗಾಗಿ ಹಾಗೂ ರುಚಿಯನ್ನು ತಿಳಿಯಲು ಬಾಯಿಯ ಕೆಳ ಭಾಗವು ಕಾರ್ಯ ನಿರ್ವಹಿಸುತ್ತದೆ, ಕೂದಲುಗಳು ಸ್ಪರ್ಶ ಜ್ಞಾನಕ್ಕನುಗುಣವಾಗಿ ಕಾರ್ಯ ನಿರ್ವಹಿಸುತ್ತವೆ.”

ನಾವು ಇವುಗಳ ಕುರಿತು ತಿಳಿದಿಲ್ಲದಿದ್ದರೂ ಇರುವೆಗಳು ಹಲವಾರು ಸಂವೇದನಾ ವಿಧಾನಗಳನ್ಜು ಬಳಸುತ್ತವೆ. ಅವುಗಳಲ್ಲಿರುವ ಸಂವೇದನಾಶೀಲ ಅಂಗಗಳಿಂದಲೇ ಸಂಭಾಷಿಸಲು ಸಾಧ್ಯವೆಂಬುದನ್ನು ತಿಳಿಯಬಹುದು. ಈ ಅಂಗಗಳನ್ನು ಇರುವೆಗಳು ನಿರಂತರ ಉಪಯೋಗಿಸುತ್ತವೆ. ಸಾಲಾಗಿ ಹೋಗುವುದರಿಂದ ಹಿಡಿದು ಪ್ರತಿಯೊಬ್ಬರನ್ನು ಹಿಂಬಾಲಿಸುವಾಗಲೂ, ತಮ್ಮ ಮೇಲೆ ದಾಳಿಯಾಗದಂತಿರಲು ಗೂಡನ್ನು ನಿರ್ಮಿಸಲು ಸದಾ ಉಪಯೋಗಿಸುತ್ತವೆ. 5 ಲಕ್ಷಕ್ಕಿಂತಲೂ ಅಧಿಕ ನರಗಳನ್ನೊಳಗೊಂಡ ನರವ್ಯೂಹವನ್ನು ಇರುವೆಗಳ 2-3 ಮಿಲಿ ಮೀಟರ್ ದೇಹದಲ್ಲಿ ಇರಿಸಲಾಗಿರುವುದು ಹಾಗೂ ಅವುಗಳ ಸಂವೇದನಾಶೀಲ ಪ್ರಕ್ರಿಯೆಗಳು ಮನುಷ್ಯರನ್ನು ವಿಸ್ಮಯಗೊಳಿಸುತ್ತದೆ.

ಎಚ್ಚರಿಕೆ, ನೇಮಕಾತಿ, ತರಬೇತಿ, ಮೌಖಿಕ ಮತ್ತು ಗುದ ದ್ರವದ ವಿನಿಮಯ ಪ್ರಕ್ರಿಯೆ, ಪರಿಣಾಮಕಾರಿ ಗುಂಪು, ಗುರುತಿಸುವಿಕೆ, ಜಾತಿ ನಿರ್ಣಯ ಎಂಬುದಾಗಿ ಇರುವೆಗಳ ವಿವಿಧ ಪ್ರತಿಕ್ರಿಯೆಗಳನ್ನು ಹಲವು ಭಾಗಗಳಾಗಿ ವಿಂಗಡಿಸಲಾಗಿದೆ. ಇರುವೆಗಳು ಈ ಎಲ್ಲ ಸಂವೇದನಾ ವಿಧಾನಗಳಿಂದ ಒಂದು ಸುವ್ಯವಸ್ಥಿತ ಸಾಮಾಜಿಕ ವ್ಯವಸ್ಥೆಯನ್ನು ಕಾಯ್ದುಕೊಳ್ಳುತ್ತವೆ. ತಮ್ಮ ನಡುವೆ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ (ವಿನಿಮಯ) ಜೀವನದ ಸಾಮಾನ್ಯ ವಿಷಯಗಳನ್ನು ತಿಳಿಯುತ್ತವೆ. ಇಂತಹ ವ್ಯವಸ್ಥೆಯನ್ನು ಮನುಷ್ಯರಲ್ಲಿ ಕೇವಲ ಸಂವಹನದ ಮೂಲಕ ತರಲು ಸಾಧ್ಯವಿಲ್ಲವಾದರೇ ಇರುವೆಗಳು ತಮ್ಮ ಸ್ವಯಂ ರಕ್ಷಣೆಗೆ, ಒಗ್ಗಟ್ಟಿಗೆ, ಹಂಚಿಕೊಳ್ಳುವಿಕೆಗೆ, ಸ್ವಚ್ಛತೆಗೆ ಸಂವೇದನಾಶೀಲ ಪ್ರಕ್ರಿಯೆಗಳ ಮೂಲಕ ಸರಳವಾಗಿ ಕಾರ್ಯ ನಿರ್ವಹಿಸುತ್ತವೆ.

ಇರುವೆಗಳು ರಸಾಯನಿಕ ಪ್ರಕ್ರಿಯೆಗಳ ಮೂಲಕವೇ ಹೆಚ್ಚಿನ ಸಂವೇದನೆಗಳನ್ನು ನಡೆಸುತ್ತವೆ. ಈ ಅರೆ ರಾಸಾಯನಿಕಗಳನ್ನು ಫೆರಾಮೋನ್ಸ್ ಎಂಬುದಾಗಿ ಕರೆಯುತ್ತಾರೆ. ಈ ಫೆರಾಮೋನ್ಸ್ ಗಳು ಆಂತರಿಕ ಗ್ರಂಥಿಗಳಲ್ಲಿ ಅಡಗಿಸಿದ ಹಾಗೂ ಅವುಗಳಿಂದ ಹೊರಡುವ ವಾಸನೆಗಳ ಮೂಲಕ ಉತ್ಪತ್ತಿಯಾಗುತ್ತವೆ. ಇವುಗಳು ಇರುವೆಗಳ ಸಮುದಾಯವನ್ನು ವ್ಯವಸ್ಥಿತವಾಗಿ ನಿರ್ಮಿಸಲು ಸಹಾಯಕವಾಗುತ್ತವೆ. ಒಂದು ಇರುವೆಯು ಫೆರಾಮೋನ್‍ಗಳನ್ನು ಉತ್ಪತ್ತಿಸಿದಲ್ಲಿ ಇತರ ಇರುವೆಗಳು ಅದರ ವಾಸನೆ ಹಾಗೂ ಸಂದೇಶಗಳನ್ನು ಅರಿಯುವ ಮೂಲಕ ಅತ್ತ ಕಡೆಗೆ ಧಾವಿಸುತ್ತವೆ. ಹೀಗೆ ಇತರ ಇರುವೆಗಳೂ ಕೂಡ ಅದರತ್ತ ಧಾವಿಸಿ ಬರಿತ್ತವೆ. ಒಂದು ಪ್ರದೇಶದ ಬೇಡಿಕೆಗೆ ತಕ್ಕಂತೆ ಇರುವೆಗಳು ತಮ್ಮ ಫೆರಾಮೋನ್‍ಗಳನ್ನು ಉತ್ಪತ್ತಿಸುತ್ತವೆ ಎಂಬುದನ್ನು ಸಂಶೋಧನೆಗಳು ಕಂಡು ಹಿಡಿದಿವೆ. ಪ್ರತಿಯೊಂದ ಸಂದರ್ಭ ಹಾಗೂ ಅಗತ್ಯತೆಗ ಳಿಗೆ ತಕ್ಕಂತೆ ಫೆರಾಮೋನ್ಸ್ ಗಳನ್ನು ಉತ್ಪತ್ತಿಸುವ ವ್ಯವಸ್ಥೆಯು ಬದಲಾಗುತ್ತಲೇ ಇರುತ್ತದೆ.
ಇರುವೆಗಳು ತಾವು ಏನು ಮಾಡುತ್ತಿದೆ ಎಂಬುದರ ಕುರಿತು ತಿಳಿಯಲು ರಸಾಯನಿಕ ಪ್ರಕ್ರಿಯೆಗಳ ಜ್ಞಾನ ಇರಬೇಕಾದುದು ಅಗತ್ಯವೆಂಬುದನ್ನು ನಾವು ಕಂಡುಕೊಳ್ಳುತ್ತೇವೆ.

ಆದರೆ ಕುರ್‍ಆನ್ 1400 ವರ್ಷಗಳ ಹಿಂದೆಯೇ ಇರುವೆಗಳ ಸಂವಹನ ವ್ಯವಸ್ಥೆಯ ಕುರಿತು ಈ ಜಗತ್ತಿಗೆ ತಿಳಿಸಿಕೊಟ್ಟಿದೆ. ಆ ಸಮಯದಲ್ಲಿ ಇರುವೆಗಳ ಕುರಿತು ಯಾವುದೇ ರೀತಿಯ ಜ್ಞಾನವಿರಲಿಲ್ಲ ಆದರೆ ಕುರ್‍ಆನ್ ತಿಳಿಸುವ ಈ ಮಾಹಿತಿಯು ಕುರ್‍ಆನಿನ ವೈಜ್ಞಾನಿಕ ನಿರ್ದಶನಗಳತ್ತ ಬೆಳಕು ಚೆಲ್ಲುತ್ತದೆ.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *