Breaking News
Home / ಲೇಖನಗಳು / ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್

ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ ಪ್ರವಾದಿ ಇರುತ್ತಾರೆ. ವಿಶ್ವಾಸಿಯ ಜೀವನ ಪ್ರವಾದಿ ಮುಹಮ್ಮದ್(ಸ) ಸೇರಿ ನಿಂತಂತೆ ಒಬ್ಬರು ಇನ್ನೊಬ್ಬರಿಗೆ ಸೇರಿ ನಿಲ್ಲುವುದಿಲ್ಲ. ವಿಶ್ವಾಸಿಯ ಬದುಕಿನ ಗತಿ, ದಾರಿಯನ್ನು ನಿರ್ಣಯಿಸುವವರು ಪ್ರವಾದಿ ಆಗಿದ್ದಾರೆ. ತಾನು ಮಾಡುವ ಹೋಗುವ ವಿಷಯಗಳೆಲ್ಲ ಅಲ್ಲಾಹನು ಪ್ರವಾದಿ ಏನು ಹೇಳುತ್ತಾರೆ ಎಂದು ನೋಡಿಕೊಳ್ಳುವುದು ವಿಶ್ವಾಸಿಯ ಕರ್ತವ್ಯವಾಗಿದೆ. ಹೀಗೆ ವಿಶ್ವಾಸಿಯ ಅಭಿಪ್ರಾಯ ರೂಪುಗೊಳ್ಳಬೇಕಾಗಿದ್ದು ಪ್ರವಾದಿ ಮತ್ತು ಅಲ್ಲಾಹನಿಂದಾಗಿದೆ.

ಪ್ರವಾದಿ(ಸ) ಯಾವತ್ತೂ ಸ್ಮರಿಸುತ್ತಿರಬೇಕಾದವರು. ಒಂದು ದಿನ, ತಿಂಗಳಿಗೂ ಇದು ಮುಗಿಯುವಂತಿಲ್ಲ. ಪ್ರವಾದಿ ಪ್ರೇಮದ ಮಾರ್ಗದಲ್ಲಿ ನಮಗೆ ಅದನ್ನೆ ಪ್ರವಾದಿವರ್ಯರು(ಸ) ಕಲಿಸಿರುವರು. ಸ್ವಂತಕ್ಕಿಂತ ಹೆಚ್ಚು ಪ್ರವಾದಿಯನ್ನು(ಸ) ಪ್ರೀತಿಸಬೇಕೆಂದು ಹೇಳಿದುದರ ಅರ್ಥ ಅದುವೇ. ಪ್ರವಾದಿ ಕುರಿತು ಹೇಳುವುದಕ್ಕಿಂತ ಮೊದಲು ಬರುವ ಪದ ದಾಸ ಎಂಬ ಚಿಹ್ನೆ. ಅಂದರೆ ಮುಹಮ್ಮದರು(ಸ) ಅಲ್ಲಾಹನ ಸಂದೇಶವಾಹಕರು ಎನ್ನುವ ಮೊದಲು ದಾಸ ಎಂಬ ಪದ ಇದೆ. ಅಲ್ಲಾಹನ ದಾಸನಾಗುವುದು ಒಬ್ಬ ವಿಶ್ವಾಸಿಗೆ ಭೂಮಿಯಲ್ಲಿ ತಲುಪಬಹುದಾದ ದೊಡ್ಡ ಸ್ಥಾನಮಾನವಾಗಿದೆ. ಪ್ರವಾದಿಗಳಿಗೆ ಆ ಸ್ಥಾನಮಾನ ಸಿಕ್ಕಿದೆ. ತನ್ನ ಒಡೆಯನನ್ನು ಸಂಪೂರ್ಣವಾಗಿ ಅನುಸರಿಸುವ ಅವಸ್ಥೆಗೆ ತಲುಪಿ ಬಿಡುವುದು ವಿಶ್ವಾಸ ಪೂರ್ಣವಾಗುವುದರ ಸಂಕೇತವಾಗಿದೆ.

ಅನುಸರಣೆ ವಿಶ್ವಾಸದ ಆಧಾರ ಘಟಕವಾಗಿದೆ. ಜೀವನವನ್ನು ಪ್ರವಾದಿಯವರ(ಸ) ಮಾದರಿಯಲ್ಲಿ ತರುವುದು ಪ್ರವಾದಿ ಅನುಸರಣೆಯ, ಪ್ರೇಮದ ಮೂಲವಾಗಿದೆ. ಜೀವನದಲ್ಲಿ ಸಹಾಬಿಗಳು ಇಂತಹ ಪ್ರೇಮ, ಅನುಸರಣೆಯಿಂದ ಪ್ರವಾದಿವರ್ಯರಲ್ಲಿ(ಸ) ಪ್ರೀತಿ ವ್ಯಕ್ತಪಡಿಸಿದರು. ಪ್ರವಾದಿವರ್ಯರ(ಸ) ನಿಧನಾನಂತರ ಅಬೂಬಕರ್(ರ), ಉಮರ್(ರ) ಉಮ್ಮು ಐಮನ್‍ರನ್ನು ಕಾಣಲು ಹೋಗಿದ್ದನ್ನು ಹೀಗೆ ವಿವರಿಸುತ್ತಾರೆ. ಇಬ್ಬರನ್ನು ನೋಡಿ ಉಮ್ಮು ಐಮನ್ ಅತ್ತರು. ” ಅಲ್ಲಾಹನ ಬಳಿ ಪ್ರವಾದಿಗೆ ಅತಿ ಉತ್ತಮದ್ದಾಗುತ್ತದೆ ಎಂದು ತಿಳಿದೂ ನೀವೇಕೆ ಮತ್ತೆ ಅಳುವಿರಿ” ಎಂದು ಕೇಳಿದಾಗ ಉಮ್ಮು ಐಮನ್ ಹೀಗೆ ಉತ್ತರಿಸಿದರು” ಅದು ನನಗೆ ಗೊತ್ತು. ಬಾನಲೋಕದಿಂದ ವಹ್ಯ್ ನಿಂತು ಹೋಯಿತಲ್ಲ ಎಂದು ನೆನೆದು ಅಳುತ್ತಿದ್ದೇನೆ” ಎಂದು ಹೇಳಿದ್ದರು. ತಮ್ಮ ಜೀವನದ ಮೇಲೆ ಸದಾ ನಿಗಾವಿರಿಸುತ್ತಿದ್ದ ಒಂದು ಸ್ಥಿತಿ(ವಹ್ಯ್ ಅವತೀರ್ಣ) ಇಲ್ಲದಾಯಿತು ಎಂದು ಸಹಾಬಿ ಮಹಿಳೆ ಬೇಸರಿಸಿದರು. ಅಲ್ಲಾಹನ ಪ್ರವಾದಿ(ಸ) ತೋರಿಸಿಕೊಟ್ಟ ದಾರಿಯಲ್ಲಿ ನಡೆಯುವಾಗ ಇದ್ದ ಸುರಕ್ಷಿತತೆ ಪ್ರವಾದಿವರ್ಯರ(ಸ) ವಿಯೋಗದಿಂದ ಕಳೆದು ಹೋಗುವ ಹೆದರಿಕೆ ಅವರಲ್ಲಿತ್ತು.

ಅಲ್ಲಾಹನನ್ನುಪ್ರವಾದಿಯವರನ್ನು ಅನುಸರಿಸುವುದರಲ್ಲಿ ವಿಶ್ವಾಸಿಗಳು ಕೆಲವೊಮ್ಮೆ ಹಿಂದೆ ಬೀಳುತ್ತಾರೆ. ಆರಾಧನೆಯ ವಿಷಯದಲ್ಲಿ ಈ ಅನುಸರಣೆ ಕಟ್ಟು ನಿಟ್ಟಿನಿಂದ ಮಾಡುವವರು ಕೂಡ ಜೀವನದ ಇತರ ವಿಭಾಗಗಳಲ್ಲಿ ಪ್ರವಾದಿವರ್ಯರನ್ನು(ಸ) ಅನುಸರಿಸುವುದಿಲ್ಲ.. ಆದ್ದರಿಂದ ಸ್ವಂತ ಇಚ್ಛೆಗಳನ್ನು ಅಲ್ಲಾಹನು ಮತ್ತು ಅವನ ಪ್ರವಾದಿಗೆ ಸಮರ್ಪಿಸುವುದೇ ನನ್ನ ಪ್ರೀತಿಸುವುದು(ಪ್ರವಾದಿ ಪ್ರೇಮ) ಆಗಿದೆ ಎಂದು ನಮಗೆ ಪ್ರವಾದಿವರ್ಯರು(ಸ) ಕಲಿಸಿದರು. ಮನುಷ್ಯರನ್ನು ಕೆಲವೊಮ್ಮೆ ಮುನ್ನಡೆಸುವುದು ಮನಸ್ಸಿನಲ್ಲಿ ಮೊಳಕೆಯೊಡೆದ ಇಚ್ಛೆಗಳಾಗಿವೆ. ನನ್ನದು ಎನ್ನುವುದು ಇಲ್ಲ. ಹೀಗಾದ್ದರಿಂದ ಸಹಾಬಿಗಳು ಯಶಸ್ಸು ಗಳಿಸಿದರು. ಇದು ಸಾಧ್ಯವಾಗದ್ದು ಹಲವರು ವಿಫರಾಗುವುದಕ್ಕೆ ಕಾರಣವಾಗಿದೆ. ಇಲ್ಲಿ ಅಲ್ಲಾಹನ ದಾಸ ಎನ್ನುವುದಕ್ಕೆ ಆದ್ಯತೆ ಎದ್ದು ಕಾಣುತ್ತದೆ.

ಅಲ್ಲಾಹನು, ಪ್ರವಾದಿಯವರನ್ನು(ಸ) ಅನುಸರಿಸಿದವರಿಗೆ ಅಲ್ಲಾಹನು ಸ್ವರ್ಗದ ವಾಗ್ದಾನ ನೀಡುತ್ತಾನೆ. ಮನಸ್ಸಿನ ಕಪಟತನ ಇಲ್ಲದಾಗಿಸಲು ಬೇರೆ ಮಾರ್ಗವಿಲ್ಲ. ಪ್ರೀತಿಯಿಂದ ಭಯದಿಂದ ಅನುಸರಣೆಯು ಹುಟ್ಟಿಕೊಳ್ಳುತ್ತದೆ. ಪ್ರವಾದಿ ಪ್ರೇಮದಿಂದ ಅನುಸರಣೆ ಮೊಳೆಕೆಯೊಡೆಯುತ್ತದೆ. ಎಷ್ಟು ಹೃದಯಸ್ಪರ್ಶಿಯಾಗಿ ಅನುಯಾಯಿಗಳು ಅಲ್ಲಾಹನ ಪ್ರವಾದಿಯವರನ್ನು(ಸ) ಪ್ರೀತಿಸುತ್ತಾರೆ. ಆದರೆ ಅಂದು ಮನಸ್ಸಿನ ಕಪಟತನ ಇದ್ದವರೆಲ್ಲ ಸಮಾಜದಲ್ಲಿ ನಾವು ಒಂಟಿಯಾದೆವಾ ಎಂಬ ಭಯದಿಂದ ಪ್ರವಾದಿಯವರನ್ನು(ಸ) ಪ್ರೀತಿಸಿದ್ದು. ಆದ್ದರಿಂದ ಪ್ರವಾದಿಯವರ(ಸ) ವಿಯೋಗದಲ್ಲಿ ಅಂತಹವರ ನಿಲುವುಗಳ ಥಟ್ಟನೆ ಬಹಿರಂಗವೂ ಆಗಿತ್ತು. ನಾವು ಪ್ರವಾದಿಯವರನ್ನು(ಸ) ನೋಡದೆ ಪ್ರೀತಿಸುತ್ತೇವೆ. ಇವರನ್ನೆ ನನ್ನ ಸಹೋದರರು ಎಂದು ಅವರು ಹೇಳಿದರು. ಪ್ರವಾದಿವರ್ಯರನ್ನು(ಸ) ಅನುಸರಿಸಿಯೆ ಆ ಪ್ರೀತಿಯನ್ನು ಅರ್ಥಾತ್ ಪ್ರವಾದಿ ಪ್ರೇಮವನ್ನು ತೋರಿಸಲು ಸಾಧ್ಯ. ಇದನ್ನು ಸಮಾಜ ತೀರ್ಮಾನಿಸುವುದಲ್ಲ. ಸ್ವಂತ ಮನಸ್ಸಾಕ್ಷಿ ತೀರ್ಮಾನಿಸಬೇಕಾಗಿದೆ.

About editor

Check Also

ಅಭಿಪ್ರಾಯ ಸ್ವಾತಂತ್ರ್ಯದಲ್ಲಿ ಪ್ರವಾದಿಯನ್ನು ಅನುಸರಿಸೋಣ – ಪ್ರೊ| ಏ.ಕೆ. ರಾಮಕೃಷ್ಣನ್

ಪ್ರವಾದಿಯವರ ಜೀವನವನ್ನು ನಾವು ಹಲವೊಮ್ಮೆ ಅದರ ಪೂರ್ಣ ಅರ್ಥದಲ್ಲಿ ವಿಶ್ಲೇಷಿಸುವುದಿಲ್ಲ. ಅವರನ್ನು ನಾವು ಬಹುವಂಶ ಪಕ್ಷಪಾತೀಯ ದೃಷ್ಟಿಯಿಂದ ನೋಡುತ್ತೇವೆ. ಪಾಶ್ಚಾತ್ಯ …

Leave a Reply

Your email address will not be published. Required fields are marked *