ಸೌದಿ ಅರೇಬಿಯ ಸರಕಾರದಿಂದ ಪ್ರಿನ್ಸ್ ಅಬ್ದುಲ್ ಅಝೀಜ್ ಬಿನ್ ಫಹದ್‍ರ ಬಿಡುಗಡೆ

ರಿಯಾದ್, ನ.8: ಸೌದಿ ಅರೇಬಿಯ ಸರಕಾರ ಹದಿನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ ರಾಜಕುಮಾರ ಅಬ್ದುಲ್ ಅಝೀಝ್ ಬಿನ್ ಫಹದ್‍ರನ್ನು ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.

ವರದಿಯಾಗಿರುವ ಪ್ರಕಾರ ಸೌದಿ ಅರೇಬಿಯದ ಟ್ವಿಟರ್ ಬಳಕೆದಾರರು ಬಿಡುಗಡೆಗೊಂಡಿರುವ ಅಬ್ದುಲ್ ಅಝೀಜ್ ಬಿನ್ ಫಹದ್ ಮತ್ತು ಅವರ ಇಬ್ಬರು ಸಹೋದರರಾದ ಮುಹಮ್ಮದ್ ಮತ್ತು ಸುಲ್ತಾನ್ ಬಿನ್ ಫಹದ್‍ರ ಫೋಟೊ ಶೇರ್ ಮಾಡಿದ್ದಾರೆ.

ಅಬ್ದುಲ್ ಅಜೀಜ್ ಬಿನ್ ಫಹದ್‍ರನ್ನು ಅಬೂಧಾಬಿ ಯುವರಾಜ ಮುಹಮ್ಮದ್ ಬಿನ್ ಜಾಯೆದ್ ವಿದ್ರೋಹಿ ಮತ್ತು ಅಲ್ಲಾಹನೊಂದಿಗೆ ಯುದ್ಧ ಮಾಡುವವನು ಎಂದು ಆರೋಪ ಹೊರಿಸಿದ ಕಾರಣಕ್ಕಾಗಿ 2017ರಲ್ಲಿ ಬಂಧಿಸಲಾಗಿತ್ತು. ಅಬೂಧಾಬಿ ಯುವರಾಜ ಮುಸ್ಲಿಮರ ನರಹತ್ಯೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅಬ್ದುಲ್ ಅಝೀಝ್ ಬಿನ್ ಫಹದ್ ಹೇಳಿದ್ದರು.

ಸೌದಿಯ ದೊರೆಯ ಉತ್ತರಾಧಿಕಾರಿ ಮುಹಮ್ಮದ್ ಬಿನ್ ಸಲ್ಮಾನ್ ತನ್ನ ವಿರೋಧಿಗಳನ್ನು ಕೊಲ್ಲಿಸುತ್ತಿದ್ದಾರೆ ಎಂಬ ಆರೋಪ ಎದ್ದಿರುವ ಸಮಯದಲ್ಲಿ ಅಬ್ದುಲ್ ಅಝೀಝ್ ಬಿನ್ ಫಹದ್‍ರನ್ನು ಬಿಡುಗಡೆಗೊಳಿಸಲಾಗಿದೆ ಎನ್ನುವುದು ಗಮನಾರ್ಹ ವಿಚಾರವಾಗಿದೆ.

ಈಗಾಗಲೇ ಸೌದಿಯ ಹಿರಿಯ ಪತ್ರಕರ್ತ ಜಮಾಲ್ ಕಶೋಗಿಯ ಹತ್ಯೆ ನಡೆದು ವಿಶ್ವಾದ್ಯಂತ ಕೋಲಾಹಲ ನಡೆಯುತ್ತಿರುವ ವೇಳೆಯೆ ಇನ್ನೋರ್ವ ಪತ್ರಕರ್ತನನ್ನು ಸೌದಿ ಅರೇಬಿಯದ ಜೈಲಿನಲ್ಲಿ ಹತ್ಯೆ ಮಾಡಲಾಗಿದೆ. ಅಬ್ದುಲ್ ಅಝೀಝ್ ಫಹದ್‍ರನ್ನು ಬಿಡುಗಡೆಗೊಳಿಸುವ ಮೊದಲು ಸೌದಿ ರಾಜಕುಮಾರ ಖಾಲಿದ್ ಬಿನ್ ತಲಾಲ್‍ರನ್ನು ಕೂಡ ಸೌದಿ ಸರಕಾರ ಬಿಡುಗಡೆಗೊಳಿಸಿದೆ.

ಕಳೆದ ವರ್ಷ ಮುಹಮ್ಮದ್ ಬಿನ್ ಸಲ್ಮಾನ್ ದೊರೆಯ ಉತ್ತರಾಧಿಕಾರಿಯಾದ ಬಳಿಕ ಸೌದಿ ಅರೇಬಿಯದಲ್ಲಿ ತೀವ್ರ ತಾರುಮಾರು ನಡೆದಿದೆ. ದೊರೆಯ ಕುಟುಂಬದ ಹಲವಾರು ಮಂದಿಯನ್ನು ಬಂಧಿಸಿ ಇಡಲಾಗಿದೆ. ಈಗ ಸೌದಿ ಅರೇಬಿಯದ ಜೈಲಿನಲ್ಲಿ ಹಲವು ರಾಜಕುಮಾರರು ಇದ್ದಾರೆ. ಹಲವಾರು ಧಾರ್ಮಿಕ ವಿದ್ವಾಂಸರು ಮತ್ತು ನೂರಾರು ವಿಚಾರವಾದಿಗಳು ಜೈಲಿನ ಸಲಾಕೆಯೊಳಗಾಗಿದ್ದಾರೆ.

Check Also

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು, ನ.15: ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ …

Leave a Reply

Your email address will not be published. Required fields are marked *