ಅಧ್ಯಕ್ಷ ಚುನಾವಣೆಯಲ್ಲಿ ಮತದಾನ ಮಾಡಿದರೆ ಉಚಿತ ಉಮ್ರ

ಕೈರೊ, ಮಾ. 14: ಚುನಾವಣೆಯಲ್ಲಿ ಮತದಾನ ಮಾಡಲು ವಿವಿಧ ರೀತಿಯ ಭರವಸೆಗಳನ್ನು ನೀಡುವುದನ್ನು ನಾವು ಕಂಡಿದ್ದೇವೆ. ಆದರೆ ಈಜಿಪ್ಟ್ ಅಧ್ಯಕ್ಷೀಯ
ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಅಧಿಕಾರಿಗಳು ಉಚಿತ ಉಮ್ರ ಯಾತ್ರೆಯ ಭರವಸೆ ನೀಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡುವ 500 ಮಂದಿಗೆ ಈಜಿಪ್ಟ್‍ನ ಮತ್‍ರೂಹ್ ಗವರ್ನರೇಟ್ ಉಚಿತ ಉಮ್ರ ಯಾತ್ರೆ ಕೊಡುಗೆ ನೀಡಿದೆ. ಈಜಿಪ್ಟ್‍ನ ಅಲ್ ಮಿಸ್ರಿಯೂನ್ ವರದಿಯು ಅಧಿಕಾರಿಗಳು ಆಮಿಷ ನೀಡಿರುವುದನ್ನು ಬಹಿರಂಗಗೊಳಿಸಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವ ಎಲ್ಲರಿಗೂ ಇದು ಅನ್ವಯ. ನಂತರ ಇವರಲ್ಲಿ 500 ಮಂದಿಯನ್ನು ಆಯ್ಕೆ ಮಾಡಲಾಗುವುದು. ಉದ್ಯಮಿಗಳು ಇದಕ್ಕಾಗಿಫಂಡ್ ಭರಿಸಲಿದ್ದಾರೆ ಎಂದು ಅಲ್ ಮಿಸ್ರಿಯೂನ್ ವರದಿ ಮಾಡಿದೆ.

ಈ ತಿಂಗಳು 26ರಿಂದ 28ರವರೆಗೆ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದರಲ್ಲಿ ಈಗಿನ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್‍ಸಿಸಿ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ನಾಮಪತ್ರ ಸಲ್ಲಿಸಿದವರನ್ನು ಬೆದರಿಕೆ ಹಾಕಿ ಹಿಂಪಡೆಯುವಂತೆ ಮಾಡಲಾಗಿದೆ. ಆದ್ದರಿಂದ ಅಲ್ಲಿ ನಾಮ ಮಾತ್ರಕ್ಕೆ ಚುನಾವಣೆ ನಡೆಯುತ್ತಿದೆ.

ಸಿಸಿ ಮತ್ತು ಸರಕಾರವನ್ನು ವಿರೋಧಿಸುತ್ತಿರುವ ಪಾರ್ಟಿ ನಾಯಕರ ವಿರುದ್ಧ ವಿವಿಧ ಆರೋಪ ಹೊರಿಸಿ ಜೈಲಿಗೆ ತಳ್ಳಲಾಗಿದೆ. ಆದ್ದರಿಂದ ಪ್ರತಿ ಪಕ್ಷಗಳು ಚುನಾವಣೆ ಬಹಿಷ್ಕರಿಸಿವೆ. ಆದ್ದರಿಂದ ಜನರು ಮತದಾನದಲ್ಲಿ ಭಾಗವಹಿಸಲು ಅಧಿಕಾರಿಗಳು ವಿವಿಧ ಕೊಡುಗೆಗಳನ್ನು ಪ್ರಕಟಿಸುತ್ತಿದ್ದಾರೆ.

ದೇಶದ ಸರ್ವಾಧಿಕಾರಿ ಹುಸ್ನಿ ಮುಬಾರಕ್‍ರನ್ನು ಅರಬ್ ಕ್ರಾಂತಿ ಕೆಳಗಿಸಿದ ಬಳಿಕ ಮೊತ್ತ ಮೊದಲ ಭಾರೀ ಪ್ರಜಾ ಪ್ರಭುತ್ವ ರೀತಿಯಲ್ಲಿ ಮುಹಮ್ಮದ್ ಮುರ್ಸಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಅವರನ್ನು ಸೈನಿಕ ಬುಡಮೇಲು ಕೃತ್ಯದ ಮೂಲಕ ಸ್ಥಾನಭ್ರಷ್ಠ ಗೊಳಿಸಲಾಗಿತ್ತು.

Check Also

ಹರ್ಯಾಣ: ಮುಸ್ಲಿಮರು ಗಡ್ಡ ಬೆಳೆಸಬಾರದು, ನಮಾಝ್ ಮಾಡಬಾರದು- ಪಂಚಾಯತ್ ಆದೇಶ

ರೋಹಟಕ್, ಸೆ. 20: ಬಕ್ರೀನಂದು ಇಲ್ಲಿನ ಟಿಟೌಲಿ ಗ್ರಾಮದಲ್ಲಿ ಗೋ ಹತ್ಯೆಯಾಗಿದೆ ಎಂದು ಮುನಿಸಿಕೊಂಡಿರುವ ಪಂಚಾಯತ್ ಆದೇಶ ಜಾರಿ ಮಾಡಿದ್ದು …

Leave a Reply

Your email address will not be published. Required fields are marked *