ರೋಹಿಂಗ್ಯನ್ ಶಿಬಿರಗಳ ವಿದೇಶಿ ಸ್ವಯಂ ಸೇವಾ ಕಾರ್ಯಕರ್ತರಿಗೆ ವಿಶೇಷ ವೀಸಾ ಸೌಲಭ್ಯ

ಢಾಕ,ಜೂ. 13: ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ರೋಹಿಂಗ್ಯನ್ ನಿರಾಶ್ರಿತ ಶಿಬಿರಗಳಲ್ಲಿ ಚಟುವಟಿಕೆ ನಡೆಸುವ ವಿದೇಶದಿಂದ ಬರುವ ಸ್ವಯಂ ಸೇವಾ ಕಾರ್ಯಕರ್ತರಿಗೆ ವಿಶೇಷ ವೀಸಾ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಅವರು ಮ್ಯಾನ್‍ಮಾರಿನ ವಿಶೇಷ ಪ್ರತಿನಿಧಿಯನ್ನು ಭೇಟಿಯಾದ ಬಳಿಕ ಪತ್ರಕರ್ತರೊಂದಿಗೆ ಮಾತಾಡುತ್ತಿದ್ದರು. ವಿಶೇಷ ರಾಜತಾಂತ್ರಿಕ ಪ್ರತಿನಿಧಿ ಬೋಬ್‍ರೆಯವರನ್ನು ಅವರು ನಿನ್ನೆ ಢಾಕದಲ್ಲಿ ಭೇಟಿಯಾಗಿದ್ದಾರೆ.

ವಿದೇಶದ ಬರುವ ಸ್ವಯಂ ಸೇವಾ ಕಾರ್ಯಕರ್ತರು ಬಾಂಗ್ಲಾ ದೇಶಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದು ಸೇವಾ ಚಟುವಟಿಕೆ ಮಾಡುತ್ತಿದ್ದಾರೆ. ಸ್ವಯಂ ಸೇವಕರ ನಡುವೆ ಕೆಲವು ವಿದೇಶಿ ಪ್ರಜೆಗಳು ಬಾಂಗ್ಲಾ ದೇಶಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ ಎನ್ನುವ ವರದಿ ಸರಕಾರದ ಬಳಿ ಇದೆ ಎಂದು ಹೇಳಿದ ಹಸೀನಾ ಮಹಿಳೆಯರು ಮಕ್ಕಳ ಸಾಗಾಟಕ್ಕೆ ಮತ್ತು ಲೈಂಗಿಕ ಅಕ್ರಮಗಳಿಗೂ ಇದು ಕಾರಣವಾಗಬಹುದು. ಆದ್ದರಿಂದ ಸ್ವಯಂ ಸೇವಕರಿಗೆ ವಿಶೇಷ ಕೆಟಗರಿಯ ವೀಸಾ ಒದಗಿಸುವುದಾಗಿ ಅವರು ಹೇಳಿದರು.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *