ಅಧಿಕಾರವಿರಲಿ, ಇಲ್ಲದಿರಲಿ, ಕೋಮು ಸೌಹಾರ್ದ ಕದಡುವವರೊಡನೆ ರಾಜಿಯ ಪ್ರಶ್ನೆಯೇ ಇಲ್ಲ: ನಿತೀಶ್ ಕುಮಾರ್

ಬಿಹಾರ, ಎ.16: ಮುಖ್ಯಮಂತ್ರಿ ನಿತೀಶ್ ಕುಮಾರ್ ತನ್ನ ಸಿದ್ಧಾಂತದಲ್ಲಿ ಯಾವುದೇ ರಾಜಿಯಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಅಪರಾದ ಮತ್ತು ಕೋಮು ಸೌಹಾರ್ದವನ್ನು ಕದಡುವವರೊಡನೆ ರಾಜಿ ಮಾಡಿಕೊಳ್ಳುವುದಿಲ್ಲ.

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರಿಗೆ ಮುಖ್ಯಮಂತ್ರಿ ಭರವಸೆ ನೀಡಿದ್ದು, ಸಂವಿಧಾನದಲ್ಲಿ ನೀಡಲಾದ ಯಾವುದೇ ಮೀಸಲಾತಿಯನ್ನು ನಿಮ್ಮಿಂದ ಕಿತ್ತು ಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದಕ್ಕಾಗಿ ಕೊನೆಯುಸಿರಿನವರೆಗೆ ಹೋರಾಡುವೆ. ಮೀಸಲಾತಿ ವಿರೋಧಿಗಳು ಯಾರೇ ಇರಲಿ, ಮೀಸಲಾತಿ ಕುರಿತು ಅವರ ಅಭಿಪ್ರಾಯ ಏನೇ ಇರಲಿ ಅದಕ್ಕೂ ತನಗೂ ಸಂಬಂಧವಿಲ್ಲ ಎಂದು ನಿತೀಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಅವರು ಡಾ.ಅಂಬೇಡ್ಕರ್‍ರ 127ನೇ ಜಯಂತಿ ಸಂದರ್ಭದಲ್ಲಿ ಮಾತಾಡುತ್ತಿದ್ದರು.

ಬಿಹಾರದಲ್ಲಿ ದಲಿತರು ಮತ್ತು ಮಹಾ ದಲಿತ ಸಮುದಾಯಕ್ಕೆ ಮಾಡಿದ ಕೆಲಸಗಳನ್ನು ವಿವರಿಸಿದ ಅವರು ಇದಕ್ಕಾಗಿ ತನಗೆ ಯಾರಿಂದಲೂ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದರು.

ಕೆಲವರು ಸಮಾಜವನ್ನು ಒಡೆಯಲು ನೋಡುತ್ತಿದ್ದಾರೆ. ಆದರೆ ಸಮಾಜದಲ್ಲಿ ಘರ್ಷಣೆ ಮತ್ತು ಉದ್ವಿಗ್ನ ಸ್ಥಿತಿಯನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *