ಉನ್ನತ ಶಿಕ್ಷಣದಲ್ಲಿ ಭಡ್ತಿಯ ನಂತರವೂ ಮುಸ್ಲಿಮರು ಶೇ. 14ರಷ್ಟು ಹಿಂದುಳಿದಿದ್ದಾರೆ: ಎಸ್‍ಐಒ ಅಧ್ಯಯನ

ದಿಲ್ಲಿ, ಅ.11: ಉನ್ನತ ಶಿಕ್ಷಣದಲ್ಲಿ ನಿರಂತರ ಭಡ್ತಿಯ ನಂತರವೂ ಮುಸ್ಲಿಮ್ ಸಮುದಾಯ ಶೇ.14ರಷ್ಟು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆ ಬಹಿರಂಗ ಪಡಿಸಿದೆ. ಉನ್ನತ ಶಿಕ್ಷಣ ಸಂಸ್ಥೆಯ ಸಮೀಕ್ಷೆಯಲ್ಲಿ ಈ ವಿವರ ಬಹಿರಂಗವಾಗಿದ್ದು, ಸಂಘಟನೆ ಈ ವಿಷಯದಲ್ಲಿ ವಿಷಾದ ವ್ಯಕ್ತಪಡಿಸಿದೆ.

ಮುಸ್ಲಿಮರ ಜಿಲ್ಲೆಗಳಲ್ಲಿ ಅಲಿಗಡ ಮುಸ್ಲಿಮ್ ಯುನಿವರ್ಸಿಟಿ ಆಫ್ ಕ್ಯಾಂಪಸ್ ತೆರೆಯಲು ಸಂಘಟನೆ ಆಗ್ರಹಿಸಿದೆ. ಮುಸ್ಲಿಂ ಸಮುದಾಯದ ಮಕ್ಕಳನ್ನು ಶಿಕ್ಷಣದೊಂದಿಗೆ ಜೋಡಿಸಲು ಇದು ಉಪಯುಕ್ತವಾಗಿದ್ದು ದಿಲ್ಲಿಯಲ್ಲಿ ಮಂಗಳವಾರ ಸ್ಟೋಡೆಂಟ್ಸ್ ಇಸ್ಲಾಮಿಕ್ ಸಂಘಟನೆ(ಎಸ್‍ಐಒ) ಮತ್ತು ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆಂಡ್ ಟ್ರೇನಿಂಗ್ 34 ದೊಡ್ಡ ವಿವಿಗಳಲ್ಲಿನ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಿದೆ. ವರದಿಯ ಪ್ರಕಾರ ವಿಶ್ವವಿದ್ಯಾನಿಲಯಗಳಲ್ಲಿನ 9,15,806ವಿದ್ಯಾರ್ಥಿಗಳಲ್ಲಿ ಮುಸ್ಲಿಮರ ಸಂಖ್ಯೆ 63,325 ಮಾತ್ರ ಆಗಿದೆ.

ಜಾಮಿಯ ಮಿಲಿಯ ಇಸ್ಲಾಮಿಯ, ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯ, ಸೆಂಟ್ರಲ್ ಯುನಿವರ್ಸಿಟಿ ಕಾಶ್ಮೀರ, ಮೌಲಾನ ಆಝಾದ್ ನ್ಯಾಶನಲ್ ಉರ್ದು ಯುನಿವರ್ಸಿಟಿ, ಬಾಬಾ ಸಾಹೆಬ್ ಭೀಮ ರಾವ್ ಅಂಬೆಡ್ಕರ್ ಯುನಿವರ್ಸಿಟಿ ಲಕ್ನೊ ಹೊರತು ಪಡಿಸಿ ಉಳಿದ ಯುನಿವರ್ಸಿಟಿಗಳಲ್ಲಿ ಮುಸ್ಲಿಮ್ ಶೇ. 10ಕ್ಕಿಂತಲೂ ಕಡಿಮೆಯಿದೆ.

ಜೆಎನ್‍ಯು ರಿಸರ್ಚ್ ಫ್ಲೋಆರ್ ಸಾದತ್ ಹುಸೈನ್‍ರ ಪ್ರಕಾರ, ಜಾಮಿಯಮಿಲಿಯದಲ್ಲಿ ಶೇ. 50ಮತ್ತು ಅಲಿಗಡಯುನಿವರ್ಸಿಟಿಯಲ್ಲಿ ಶೇ.75ಮುಸ್ಲಿಮ್ ವಿದ್ಯಾರ್ಥಿಗಳಿದ್ದಾರೆ.

ಎಸ್‍ಐಒ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲಬಿದ್ ಆಲಿಯ ಉತ್ತರ ಭಾರತದಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಶಿಕ್ಷಣದ ಪರಿಸ್ಥಿತಿ ತೀರ ನತದೃಷ್ಟಕರವಾಗಿದೆ. ಅಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಸರಕಾರ ಮುಸ್ಲಿಂ ಜಿಲ್ಲೆಗಳಲ್ಲಿ ಅಲಿಗಡ ಮುಸ್ಲಿಮ್ ಯುನಿವರ್ಸಿಟಿಯ ಕ್ಯಾಂಪಸ್ ತೆರೆಯಬೇಕೆಂದು ಆಗ್ರಹಿಸಿದ್ದಾರೆ.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *