ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶ: ಹಿಂದೂ ಮಹಾಸಭಾದ ಅರ್ಜಿ ಹೈಕೋರ್ಟಿನಲ್ಲಿ ತಿರಸ್ಕ್ರತ

ಕೊಚ್ಚಿ: ಮುಸ್ಲಿಮ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಕೇರಳ ಹೈಕೋರ್ಟಿಗೆ ಸಲ್ಲಿಸಿದ ಅರ್ಜಿಯು ತಿರಸ್ಕ್ರತಗೊಂಡಿದೆ.

ಶಬರಿಮಲೆಯ ವಿಷಯವನ್ನು ಇದಕ್ಕೆ ಸಮೀಕರಿಸಲು ಸಾಧ್ಯವಿಲ್ಲ ಎಂದು ಕೋರ್ಟು ಹೇಳಿದೆ. ಮಸೀದಿಗೆ ಹೋಗಲು ಅನುಮತಿಸಬೇಕೆಂದು ಯಾವ ಮಹಿಳೆಯೂ ದೂರು ನೀಡಿಲ್ಲ ಎಂದು ಕೋರ್ಟು ತಿಳಿಸಿತು.

ಚೀಫ್ ಜಸ್ಟಿಸ್ ರಿಷಿಕೇಷ್ ರಾಯ್, ಎಕೆಜೆ ನಂಬಿಯಾರ್‍ರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ತಿರಸ್ಕರಿಸಿದೆ. ಶಬರಿಮಲೆ ತೀರ್ಪಿನ ಹಿನ್ನೆಲೆಯಲ್ಲಿ ಅರ್ಜಿಯನ್ನು ಹಿಂದೂ ಮಹಾಸಭಾ ಸಲ್ಲಿಸಿತ್ತು.

ಮುಸ್ಲಿಂ ಮಹಿಳೆಯರನ್ನು ಮಸೀದಿಗೆ ಹೋಗಗೊಡದಿರುವುದು ಭಾರತದ ಸಂವಿಧಾನದ 14,21 ಕಲಂನ ಉಲ್ಲಂಘನೆಯಾಗಿದೆ. ಮಕ್ಕದಲ್ಲಿ ಮಹಿಳೆಯರಿಗೆ ಮಸೀದಿ ಪ್ರವೇಶ ನೀಡಲಾಗುತ್ತಿದೆ. ಇದನ್ನು ಪರಿಗಣಿಸಿ ಈ ವಿಷಯವನ್ನು ಪರಿಶೀಲಿಸಬೇಕೆಂದು ಹೈಕೋರ್ಟನ್ನು ಹಿಂದೂ ಮಹಾಸಭಾ ಆಗ್ರಹಿಸಿತ್ತು.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *