Breaking News
Home / ವಾರ್ತೆಗಳು / ಮುತ್ತಲಾಕ್ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಮುಸ್ಲಿಂ ಪರ್ಸನಲ್ ಲಾ ದಿಂದ ಸುಪ್ರೀಂಕೋರ್ಟಿನಲ್ಲಿ ಅರ್ಜಿ

ಮುತ್ತಲಾಕ್ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಮುಸ್ಲಿಂ ಪರ್ಸನಲ್ ಲಾ ದಿಂದ ಸುಪ್ರೀಂಕೋರ್ಟಿನಲ್ಲಿ ಅರ್ಜಿ

ಹೊಸದಿಲ್ಲಿ, ಅ. 22: ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಹಿಳಾ (ವಿವಾಹ ಸಂರಕ್ಷಣೆ ಅಧಿನಿಯಮ) ಆಧಿನಿಯಮ 2019ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ. ತಲಾಕ್ ಬಿದ್‍ಅತ್ ಅನ್ನು ಅಪರಾಧ ಎನ್ನುವುದು ಅಸಂವಿಧಾನಾತ್ಮಕ ಎಂದು ಪರ್ಸನಲ್ ಲಾ ಬೋರ್ಡು ವಾದಿಸಿದೆ.

ಎನ್‍ಐಎ ಸೋಮವಾರ ಮುತ್ತಲಾಕ್ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವುದನ್ನು ವರದಿ ಮಾಡಿದೆ. ಕಳೆದ ಜುಲೈ ಮೂವತ್ತೊಂದರಂದು ಕೇಂದ್ರ ಸರಕಾರ ಮುತ್ತಲಾಕ್ ಕಾನೂನು ಜಾರಿಗೆ ತಂದಿದೆ. ಮೂರು ಬಾರಿ ತಲಾಕ್ ನೀಡು ಪ್ರಕ್ರಿಯೆ ಅಪರಾಧ ಎಂದು ನಮೂದಿಸಲಾಗಿದ್ದು ತಪ್ಪಿತಸ್ಥ ಪತಿಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಇದಕ್ಕಿಂತ ಮೊದಲು ಕೂಡ ಮುತ್ತಲಾಕ್ ಅಸಂವಿಧಾನಾತ್ಮಕವಾದ ಕಾನೂನು ಎಂದು ಹಲವು ಅರ್ಜಿಯನ್ನು ಕೋರ್ಟಿನಲ್ಲಿ ಸಲ್ಲಿಸಲಾಗಿತ್ತು.

ಮುಸ್ಲಿಂ ಮಹಿಳಾ ವಿವಾಹ ಹಕ್ಕು ಸಂರಕ್ಷಣೆ 2019 ಪ್ರಕಾರ ಮುಖತಃ, ಲಿಖಿತ, ಎಸ್ಸೆಮ್ಮೆಸ್ ಮೂಲಕ ಹಾಗೂ ಇತರ ಇಲಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಮೂರು ಬಾರಿ ತಲಾಕ್ ಹೇಳುವುದು ಕಾನೂನು ವಿರುದ್ಧವಾಗಿದೆ. ಮತ್ತು ದಂಡನೀಯ ಅಪರಾಧವಾಗಿದೆ. ಅಪರಾಧ ಸಾಬೀತಾದರೆ ಪತಿಗೆ ಮುರು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು.

About editor

Check Also

ಕುರ್‍ಆನ್ ಪ್ರವಚನಕಾರ ಮುಹಮ್ಮದ್ ಕುಂಞಯವರಿಗೆ ಶ್ರೀ ರುದ್ರಾಕ್ಷಿ ಮಠದಿಂದ ‘ಸೇವಾರತ್ನ’ ಪ್ರಶಸ್ತಿ

ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠ ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ ‘ಸೇವಾರತ್ನ’ ಪ್ರಶಸ್ತಿಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ …

Leave a Reply

Your email address will not be published. Required fields are marked *