ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರನನ್ನು “ಒಸಾಮಾ” ಎಂದು ನಿಂದನೆ ; ಮೊಯಿನ್ ಅಲಿ ಆತ್ಮ ಕಥನದಲ್ಲಿ ಬಹಿರಂಗ

ಲಂಡನ್: ಆಸ್ಟ್ರೇಲಿಯಾದ ಆಟಗಾರನೊಬ್ಬ ನನ್ನನ್ನು ಜನಾಂಗೀಯವಾಗಿ ನಿಂದಿಸಿದ್ದನೆಂದು ಇಂಗ್ಲೆಂಡ್ ನ ಖ್ಯಾತ ಆಲ್ ರೌಂಡರ್ ಮೊಯಿನ್ ಅಲಿ ಹೇಳಿದ್ದಾರೆ.

2015 ರಲ್ಲಿ ಆಶಸ್ ಸರಣಿಯ ಮೊದಲ ಟೆಸ್ಟ್ ವೇಳೆ ಒಸಾಮ ಎಂದು ಕರೆದಿರುವುದಾಗಿ ಟೈಂಸ್ ನಲ್ಲಿ ಬರೆದಿರುವ ತನ್ನ ಆತ್ಮ ಕಥನದಲ್ಲಿ ತಿಳಿಸಿದ್ದಾರೆ.

ಆದರೆ ಆಸ್ಟ್ರೇಲಿಯನ್ ಆಟಗಾರನ ಹೆಸರು ಹೇಳಲಿಲ್ಲ. ಅದು ವೈಯಕ್ತಿಕವಾಗಿ ಉತ್ತಮ ಸಾಧನೆ ತೋರಿದ ಪಂದ್ಯವಾಗಿದ್ದರೂ ಆ ಘಟನೆ ನನಗೆ ತೀವ್ರ ಕಳವಳವುಂಟು ಮಾಡಿದೆ.

ನಾನು ಅಂಗಣಕ್ಕೆ ಇಳಿಯುತ್ತಿರುವಾಗ ನನ್ನನ್ನು ನೋಡಿದ ಆಸ್ಟ್ರೇಲಿಯನ್ ಆಟಗಾರನೊಬ್ಬ ಒಸಾಮನನ್ನು ಹೊರ ಕಳುಹಿಸೆಂದು ಆಕ್ಷೇಪಿಸಿದ್ದ. ಆ ಆಟಗಾರ ಅಷ್ಟು ಹೇಳಿದಾಗ ನಾನು ತುಂಬಾ ನಿರಾಶನಾಗಿದ್ದೆ ಎಂದಿದ್ದಾರೆ.

ನನ್ನನ್ನು ಜನಾಂಗೀಯವಾಗಿ ನಿಂದಿಸಿದ್ದರಿಂದ ತೀವ್ರ ನೊಂದು ತುಂಬಾ ಕೋಪಗೊಂಡಿದ್ದೆ. ಈ ವಿಚಾರ ಈರ್ವರು ಆಟಗಾರರೊಂದಿಗೆ ಹಂಚಿಕೊಂಡಿದ್ದೆ. ಆ ಪಂದ್ಯ ನಾವು ಗೆದ್ದಾಗ ಹೆಚ್ಚು ಸಂಭ್ರಮಿಸಿದ್ದೆ ಎಂದು ಹೇಳಿದರು.

Check Also

ಹರ್ಯಾಣ: ಮುಸ್ಲಿಮರು ಗಡ್ಡ ಬೆಳೆಸಬಾರದು, ನಮಾಝ್ ಮಾಡಬಾರದು- ಪಂಚಾಯತ್ ಆದೇಶ

ರೋಹಟಕ್, ಸೆ. 20: ಬಕ್ರೀನಂದು ಇಲ್ಲಿನ ಟಿಟೌಲಿ ಗ್ರಾಮದಲ್ಲಿ ಗೋ ಹತ್ಯೆಯಾಗಿದೆ ಎಂದು ಮುನಿಸಿಕೊಂಡಿರುವ ಪಂಚಾಯತ್ ಆದೇಶ ಜಾರಿ ಮಾಡಿದ್ದು …

Leave a Reply

Your email address will not be published. Required fields are marked *