ಎಸ್ಕಲೇಟರ್ ಬಳಸುವಾಗ ಎಚ್ಚರ: ಮಾಲ್ ನಲ್ಲಿ ಎಸ್ಕಲೇಟರ್ ಗೆ ಬ್ಯಾಗ್ ಸಿಕ್ಕಿ 10 ವರ್ಷದ ಬಾಲಕ ಸಾವು!

ಚೆನ್ನೈ: ರೋಯೆಪ್ಪಟ್ಟಾದ ಎಕ್ಸ್ಪ್ರೆಸ್ ಅವೆನ್ಯೂ ಮಾಲ್‌ ನ ಎರಡನೇ ಮಹಡಿಯಿಂದ ಬಿದ್ದ ಹತ್ತು ವರ್ಷದ ಹುಡುಗ ಇದೀಗ ಮೂರು ದಿನಗಳ ಬಳಿಕ ಮರಣ ಹೊಂದಿದ್ದಾನೆ.

ಪೊಲೀಸರು ಸಲ್ಲಿಸಿದ ಎಫ್ಐಆರ್ ವರದಿ ಪ್ರಕಾರ, ನವೀನ್ ಅವರ ಬ್ಯಾಗ್ ಎಸ್ಕಲೇಟರ್ನಲ್ಲಿ ಸಿಕ್ಕಿಬಿದ್ದ ಪರಿಣಾಮವಾಗಿ ಅವರು ರಭಸವಾಗಿ ಎರಡನೇ ಮಹಡಿಯಿಂದ ಕೆಳಕ್ಕೆ ಎಸೆಯಲ್ಪಟರು. ಮಾಲ್ನ ಸುರಕ್ಷತಾ ನಿರ್ಲಕ್ಷ್ಯದ ಕಾರಣ ತಮ್ಮ ಮಗ ಜೀವ ಕಳಕೊಂಡಿದ್ದಾನೆ ಎಂದು ಹೆತ್ತವರು ದೂಷಿಸಿದ್ದಾರೆ‌. ನವೀನ್ ತನ್ನ ಹೆತ್ತವರೊಂದಿಗೆ ಶಾಪಿಂಗ್ ಮತ್ತು ಗೇಮ್ಸ್ ಆಡಲು ಹೋಗಿದ್ದನು.

ಏಪ್ರಿಲ್ 10 ರಂದು ಈ ಘಟನೆ ನಡೆದಿದ್ದು, ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ. ಬಾಲಕ ನೆಲಕ್ಕೆ ಅಪ್ಪಳಿಸುವುದನ್ನು ಸಿಸಿಟಿವಿ ತುಣುಕು
ತೋರಿಸುತ್ತದೆ. ಕೆಳಕ್ಕೆ ಬಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *