Breaking News
Home / Uncategorized / ಮಅದನಿ ಮಾನವ ಹಕ್ಕು ಉಲ್ಲಂಘನೆಗೆ ಉತ್ತಮ ಉದಾಹರಣೆ: ಸಚ್ಚಿದಾನಂದನ್

ಮಅದನಿ ಮಾನವ ಹಕ್ಕು ಉಲ್ಲಂಘನೆಗೆ ಉತ್ತಮ ಉದಾಹರಣೆ: ಸಚ್ಚಿದಾನಂದನ್

ತಿರುವನಂತಪುರಂ, ನ.1: ಮಾನವ ಹಕ್ಕು ಉಲ್ಲಂಘನೆಗೆ ಉತ್ತಮ ಉದಾಹರಣೆಯಾಗಿ ಅಬ್ದುನ್ನಾಸರ್ ಮಅದನಿಯ ಸೆರೆವಾಸವನ್ನು ಮಲೆಯಾಳಂ ಕವಿ ಸಚ್ಚಿದಾನಂದನ್ ಹೋಲಿಸಿದ್ದಾರೆ. ಇಷ್ಟು ಸಮಯ ವಿಚಾರಣಾಧೀನ ಕೈದಿಯಾಗಿರಿಸಲಾಗುತ್ತದೆ ಎನ್ನುವುದು ನ್ಯಾಯ ನಿರಾಕರಣೆಯಾಗಿದೆ ಎಂದು ಅವರು ವಿಶ್ಲೇಷಿಸಿದರು. ಕೇರಳ ಸಿಟಿಝನ್ ಫಾರ್ ಮಅದನಿ ಸಂಘಟನೆ ಕೇರಳದ ವಿಧಾನ ಸಭೆಯ ಮುಂದೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.

ಕೃತಕವಾಗಿ ಹುಟ್ಟು ಹಾಕಲಾದ ದೇಶದ್ರೋಹ ಪ್ರಕರಣಗಳ ಮೂಲಕ ನಿರಂತರ ಮಾನವ ಹಕ್ಕು ಉಲ್ಲಂಘನೆ ನಡೆಯುತ್ತಿದೆ. ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಮಅದನಿ ವಿಚಾರಣೆಯಿಲ್ಲದೆ ಇದ್ದಾರೆ. ಕರ್ನಾಟಕ ಸರಕಾರ, ಪೊಲೀಸರಿಂದ ಅವರಿಗೆ ನ್ಯಾಯ ಸಿಗದು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಪರಿತಪಿಸುವಂತಿದೆ. ಕ್ರೂರ ಮತ್ತು ನಿರ್ದಯವಾಗಿ ವ್ಯವಸ್ಥೆಯು ಅವರೊಡನೆ ವರ್ತಿಸುತ್ತಿದೆ ಎಂದು ಸಚ್ಚಿದಾನಂದನ್ ಹೇಳಿದರು.

ಮಅದನಿಯವರೊಡನೆ ನಡೆಯುವ ಮಾನವ ಹಕ್ಕು ಉಲ್ಲಂಘನೆ ಕೊನೆಗೊಳ್ಳಬೇಕಿದೆ ಎಂದು ಶಾಸಕ ತಿರುವಂಚೂರ್ ರಾಧಾಕೃಷ್ಣನ್ ಹೇಳಿದರು.

ಶಾಸಕರಾದ ವಿಜಯನ್ ಪಿಳ್ಳೇ, ಕರಾಟ್ ರಸಾಕ್, ಕೋವೂರ್ ಕುಂಞ ಮೋನು, ಸಿಕೆ ಶಶೀಂದ್ರನ್, ವಿ. ಅಬ್ದುರ್ರಹ್ಮಾನ್, ಸಿಕೆ ನಾನು, ಪ್ರೊ. ಕೆಪಿ ಅಬ್ದುಲ್ ವಹ್ಹಾಬ್, ಡಾ. ನೀಲಲೋಹಿತ ದಾಸ್, ಜಮೀಲಾ ಪ್ರಕಾಶಂ, ಸುರೇಂದ್ರನ್ ಪಿಳ್ಳೆ, ತೊಡಿಯೂರ್ ಮುಹಮ್ಮದ ಕುಂಞ ಮೌಲವಿ, ಅಡ್ವೊಕೇಟ್ ಕೆಪಿ ಮುಹಮ್ಮದ್, ಡಾ. ಅಲೀಫ್ ಶೂಕೂರ್, ಪುಂದು ಸಿರಾಜ್, ಶ್ರೀಜಾ ನೆಯ್ಯಾಟ್ಟಿಕರ ಮೊದಲಾದವರು ಮಾತಾಡಿದರು. ಶಾಸಕ ಪಿಟಿಎ ರಹೀಂ ಅಧ್ಯಕ್ಷತೆ ವಹಿಸಿದರು.

About editor

Check Also

ಪ್ರವಾದಿಗಳು

ಇಸ್ಲಾಮಿನ ಮೂಲಭೂತ ವಿಶ್ವಾಸಗಳಲ್ಲಿ ಪ್ರವಾದಿಗಳ ಮೇಲಿನ ವಿಶ್ವಾಸವು ಅತಿ ಪ್ರಧಾನವಾಗಿದೆ. ಪ್ರವಾದಿಗಳು ಎಂದರೆ, ಗ್ರಂಥವನ್ನು ಪಡೆಯಲು ಆ ಗ್ರಂಥದಂತೆ ಮಾನವರಿಗೆ …

Leave a Reply

Your email address will not be published. Required fields are marked *