ಲಂಡನ್, ಬರ್ಲಿನ್‍ಗಳಲ್ಲಿ ಅಂತಾರಾಷ್ಟ್ರ ಕುದ್ಸ್ ದಿನಾಚರಣೆ

ಲಂಡನ್, ಜೂ.12: ಲಂಡನ್ ಮತ್ತು ಬರ್ಲಿನ್‍ಗಳಲ್ಲಿ ಯುರೋಪಿಯನ್ ದೇಶಗಳ ಸಹಿತ ಅಂತಾರಾಷ್ಟ್ರೀಯ ಕುದ್ಸ್ ದಿನಾಚರಣೆ ನಡೆಸಿದೆ. ನೂರಾರು ಮಂದಿ ಇಲ್ಲಿ ಫೆಲಸ್ತೀನನ್ನು ಬೆಂಬಲಿಸಿ ಬೀದಿಗಿಳಿದರು.

ಇಸ್ರೇಲಿನ ದಶಾಬ್ದಗಳಿಂದ ನಡೆಯುತ್ತಿರುವ ಅತಿಕ್ರಮಣ ಮತ್ತು ದಾಳಿಯಿಂದ ಫೆಲಸ್ತೀನ್ ಜನರನ್ನು ಮುಕ್ತಗೊಳಿಸಬೇಕೆಂದು ಜನರು ಆಗ್ರಹಿಸಿದರು. ಇಸ್ರೇಲಿನ ದಾಳಿ ವಿರುದ್ಧ ಹೋರಾಡುತ್ತಿರುವ ಫೆಲಸ್ತೀನಿಯರಿಗೆ ತಮ್ಮ ಬೆಂಬಲವನ್ನು ಸೂಚಿಸಿದರು.

ರವಿವಾರ ಲಂಡನ್‍ನ ಸೌದಿ ರಾಯಲ್ ಅಸೆಂಬ್ಲಿ ಮುಂಭಾಗದಲ್ಲಿ ಪ್ರತಿಭಟನಕಾರರು ಒಗ್ಗೂಡಿ ಫೆಲಸ್ತೀನಿಗೆ ತಮ್ಮ ಬೆಂಬಲವನ್ನು ಸಾರಿದರು. ಇಸ್ರೇಲ್ ನಾಶವಾಗಲಿ ಎಂದು ಘೋಷಣೆ ಕೂಗಿದರು. ಲೆಬನಾನಿನ ಹಿಝ್ಬುಲ್ಲ ಧ್ವಜವನ್ನು ಹಿಡಿದು ಕೆಲವರು ಬಂದಿದ್ದರು. ಇಸ್ರೇಲಿನ ದಾಳಿಯನ್ನು ಪ್ರತಿರೋಧಿಸುತ್ತಿರುವ ಲೆಬನಾನಿನ ಸೈನ್ಯಕ್ಕೂ ರಾಲಿಯಲ್ಲಿ ನೆರೆದ ಜನರು ಬೆಂಬಲ ಸೂಚಿಸಿದರು.

ಲಂಡನ್‍ನಲ್ಲಿ ರಾಲಿ ನಡೆದ ಅದೇ ದಿವಸ ಜರ್ಮನಿಯ ಬರ್ಲಿನ್‍ನಲ್ಲಿ ಕುದ್ಸ್ ಬೆಂಬಲಿಸಿ ರಾಲಿ ನಡೆಯಿತು. 1600ಕ್ಕೂ ಹೆಚ್ಚು ಜನರು ರಾಲಿಗೆ ಬಂದರು. ಪೊಲೀಸರ ಕಟ್ಟುನಿಟ್ಟಿನ ನಿಯಂತ್ರಣ ಇರುವಂತೆ ಬರ್ಲಿನ್ ಜನರು ರಾಲಿ ಮಾಡಿದ್ದಾರೆ. ಪ್ರತಿಭಟನಕಾರರ ಕೈಯಲ್ಲಿ ಫೆಲಸ್ತೀನ್, ಲೆಬನಾನಿನ ಪತಾಕೆ ಇದ್ದವು.

ಇಸ್ರೇಲಿನ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಕೂಗು ಹಾಕಿದ ಅವರು ಯಹೂದಿಗಳು ಎಲ್ಲೆಲ್ಲ ಇದ್ದಾರೊ ಅಲ್ಲಿ ನಿಮಗೆ ನಷ್ಟವಾಗಲಿದೆ. ಝಿಯೋನಿಸ್ಟರು ಕ್ರೂರಿಗಳು ಎಂದು ರಾಲಿಯಲ್ಲಿ ಘೋಷಣೆ ಕೇಳಿ ಬಂದವು.

Check Also

ಮಗಳಿಗೆ ಕೃತಕ ಕಾಲುಗಳನ್ನು ತಯಾರಿಸಿದ ಅಪ್ಪ: ಹೀಗೊಂದು ಸಿರಿಯದ ಅಪ್ಪ ಮಗಳ ಮನ ಮಿಡಿಯುವ ಕಥೆ

ದೊಡ್ಡವರ ಜಗಳದಲ್ಲಿ ಸಿಲುಕಿ ನರಳುತ್ತಿರುವ ಸಿರಿಯದ ನಿಷ್ಪಾಪಿ ಮಕ್ಕಳ ಬಗ್ಗೆ ಮೊದಲ ಬಾರಿ ಜಗತ್ತಿನ ಗಮನ ಸೆಳೆದವನು ಆಯ್ಲಾನ್ ಕುರ್ದಿ …

Leave a Reply

Your email address will not be published. Required fields are marked *