ಅಪೂರ್ವ ಯಕೃತ್ತು ಕೋಶಗಳು

ಅಲ್ಲಾಹನ ನಿದರ್ಶನಗಳು:

ಸರಿ ಸುಮಾರು 500 ರೀತಿಯ ವಿವಿಧ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಯಕೃತ್ತಿನ ಪ್ರತಿಕೋಶಗಳು ತೊಡಗಿಸಿಕೊಂಡಿವೆ. ಮಾತ್ರವಲ್ಲ, ಇವುಗಳಿಗೆ ದೇಹದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳ ಅರಿವೂ ಇದೆ. ಆದ್ದರಿಂದ ಯಕೃತ್ ಕೋಶಗಳು ನಿರಂತರ ಕ್ರಿಯೆಯಲ್ಲಿ ತೊಡಗಿರುತ್ತವೆ.

ಒಂದು ವೇಳೆ ಯಕೃತ್ತಿನ ಯಾವುದಾದರೂ ಭಾಗವು ಹಾನಿಗೊಳಗಾಗಿ ಕಾರ್ಯ ಸ್ಥಗಿತಗೊಳಿಸಿದರೆ ಇತರ ಕೋಶಗಳು ತಕ್ಷಣವೇ ಹೊಸ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಅವುಗಳ ಪ್ರಕ್ರಿಯೆಯ ವೇಗವು ಇಮ್ಮಡಿಗೊಳ್ಳುತ್ತಾ ಹೋಗುತ್ತದೆ. ಮಾತ್ರವಲ್ಲ, ಪ್ರಕ್ರಿಯೆಗಳೊಂದಿಗೆ ತನ್ನ ಹಾನಿಗೊಳಗಾದ ಭಾಗಗಳ ದುರಸ್ತಿಯ ಕಾರ್ಯವನ್ನು ಕೋಶಗಳು ನಿರ್ವಹಿಸುತ್ತವೆ. ತತ್ಪರಿಣಾಮವಾಗಿ ದೇಹದಲ್ಲಿ ತನ್ನನ್ನು ತಾನೇ ಸರಿಪಡಿಸಿಕೊಳ್ಳುವ ಏಕೈಕ ಭಾಗವು ‘ಯಕೃತ್ತು’ ಆಗಿದೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಯಾವಾಗ ಸ್ಥಗಿತಗೊಂಡ ಕೋಶಗಳು ಪುನರ್ ಕಾರ್ಯ ನಿರತವಾಗುವವೋ ಆಗ ಕೋಶಗಳು ಆ ಕಾರ್ಯವನ್ನು ಸ್ಥಗಿತಗೊಳಿಸಿ ತಮ್ಮ ಕಾರ್ಯ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುತ್ತವೆ.

ಕೈ ಬೆರಳುಗಳಲ್ಲಿರುವ ಕೋಶಗಳಿಗೂ ಯಕೃತ್ ಕೋಶಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಕೋಶಗಳು ಒಂದೇ ಮಾಹಿತಿಯನ್ನು ಸಾಗಿಸುತ್ತವೆ. ಇಲ್ಲಿ ಈ ಕೋಶಗಳು ಯಾವ ಭಾಗದಲ್ಲಿ ಕಾರ್ಯನಿರತವಾಗುತ್ತವೆಂಬುದು ಗಮನಾರ್ಹ ವಿಷಯವಾಗಿದೆ. ಪ್ರತಿಯೊಂದು ಜೀವಕೋಶಗಳು ಅಗೋಚರವಾಗಿದ್ದರೂ ತಮಗೆ ಯಾವ ಕೆಲಸವನ್ನು ಪ್ರಾರಂಬಿಸಬೇಕಿದೆ, ಯಾವ ಪ್ರಕ್ರಿಯೆನ್ನು ನಕಲು ಮಾಡಿಕೊಳ್ಳಬೇಕಿದೆಂಬುದನ್ನು ಚೆನ್ನಾಗಿ ತಿಳಿದಿರುತ್ತವೆ. ಯಾವಾಗ ಅವುಗಳಿಗೆ ಪುನರುತ್ಪಾದನೆ ಸಂಪೂರ್ಣಗೊಂಡಿದೆಂಬುದು ತಿಳಿಯುವುದೋ ಆಗ ಪ್ರತಿಯೊಂದು ಕೋಶಗಳು ಕಾರ್ಯ ಸ್ಥಗಿತಗೊಳಿಸುತ್ತವೆ. ಪುನರುತ್ಪಾದನೆ ಅಥವಾ ಪುನರ್ ಸಂರಚನೆ ನಡೆಯುವ ಸಮಯದಲ್ಲಿ ಯಾವುದೇ ಕೋಶಗಳು ತಮ್ಮ ಕಾರ್ಯವನ್ನು ಮುಂದೂಡುವುದಿಲ್ಲ ಮತ್ತು ಹೊಸತಾಗಿ ರಚನೆಗೊಂಡ ಕೋಶಗಳಿಗೆ ಇಂತಹದ್ದೇ ಕಾರ್ಯವನ್ನು ನಿರ್ವಹಿಸಬೇಕೆಂದು ಯಾರೂ ತಿಳಿಸದಿದ್ದರೂ ಅವುಗಳು ಯಾವುದೇ ಅಳುಕಿಲ್ಲದೇ ಕಾರ್ಯನಿರತವಾಗುತ್ತವೆ. ಈ ಎಲ್ಲಾ ಕಾರ್ಯಗಳು ಯಕೃತಿನ ಒಳಗಡೆ ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತದೆ.

ಈ ವಿಶಾಲ ಮತ್ತು ಸದೃಢ ವ್ಯವಸ್ಥೆಯು ಮನುಷ್ಯರದ್ದೋ ವಿಕಾಸ ಶಾಸ್ತ್ರಜ್ಞರದ್ದೋ ಅಲ್ಲ. ಒಂದು ಯಕೃತ್ತು ತನ್ನ ಅಪಾರ ಕ್ರಿಯೆ-ಪ್ರಕ್ರಿಯೆಗಳ ಮೂಲಕ ಪ್ರತಿಯೊಂದು ಕೋಶಗಳು ಕಾರ್ಯನಿರತವಾಗಿರುವಂತೆ ತೊಡಗಿಸಿಕೊಳ್ಳಬೇಕಾದರೆ ಅದು ತನ್ನಿಂತಾನೇ ಆಗಲು ಸಾಧ್ಯವಿಲ್ಲ. ಸೃಷ್ಟಿಕರ್ತನಾದ ಏಕೈಕನಿಂದ ಮಾತ್ರವೇ ಇಂತಹ ವಿಸ್ಮಿತ ಅಂಗವನ್ನು ಸೃಷ್ಟಿಸಲು ಸಾಧ್ಯ. ಅಲ್ಲಾಹನು ಪ್ರತಿಯೊಂದು ಕ್ಷಣದ ಮೇಲೆಯೂ ಸ್ವಾಮ್ಯತೆ ಹೊಂದಿದವನಾಗಿದ್ದಾನೆ. ಆತನು ಏಕೈಕನು, ಆತನ ನಿಯಮಗಳನ್ನು ಯಾರಿಂದ ಬದಲಾಯಿಸಲಾಗದು.

“ಜನರೇ, ನಿಮಗೆ ಮರಣಾ ನಂತರದ ಜೀವನದ ಬಗೆಗೇನಾದರೂ ಸಂಶಯವಿದ್ದರೆ, ನಾವು ನಿಮ್ಮನ್ನು ಮಣ್ಣಿನಿಂದಲೂ ಅನಂತರ ವೀರ್ಯದಿಂದಲೂ ಆ ಮೇಲೆ ರಕ್ತ ಪಿಂಡದಿಂದಲೂ ಆ ಬಳಿಕ ರೂಪವಿರುವ ಮತ್ತು ರೂಪವಿಲ್ಲದ ಮಾಂಸದ ತುಣುಕಿನಿಂದಲೂ ಸೃಷ್ಟಿಸಿದೆವು ಎಂಬುದು ನಿಮಗೆ ತಿಳಿದಿರಲಿ. ನಿಮಗೆ ವಸ್ತುಸ್ಥಿತಿ ವಿವರಿಸಲಿಕ್ಕಾಗಿ (ನಾವು ಇದನ್ನು ತಿಳಿಸುತ್ತಿದ್ದೇವೆ). ನಾವು ನಮಗಿಷ್ಟವಿರುವುದನ್ನು (ವೀರ್ಯವನ್ನು) ಒಂದು ನಿರ್ದಿಷ್ಟ ಅವಧಿಯ ತನಕ ಗರ್ಭಾಶಯದೊಳಗೆ ತಡೆದಿರಿಸುತ್ತೇವೆ. ಅನಂತರ ನಿಮ್ಮನ್ನು ಒಂದು ಶಿಶುವಿನ ರೂಪದಲ್ಲಿ ಹೊರ ತರುತ್ತೇವೆ. (ತರುವಾಯ) ನೀವು ತಾರುಣ್ಯಕ್ಕೆ ತಲುಪುವಂತಾಗಲು (ನಿಮ್ಮನ್ನು ಪೋಷಿಸುತ್ತೇವೆ) ಮತ್ತು ನಿಮ್ಮಲ್ಲಿ ಕೆಲವರನ್ನು ಮೊದಲೇ ಹಿಂದಕ್ಕೆ ಕರೆಸಿ ಕೊಳ್ಳಲಾಗುತ್ತದೆ ಮತ್ತು ಕೆಲವರನ್ನು ಎಲ್ಲವನ್ನೂ ತಿಳಿದುಕೊಂಡ ಬಳಿಕ ಏನೂ ತಿಳಿಯದಂತಾಗಲು ಅತಿ ವೃದ್ಧಾಪ್ಯದೆಡೆಗೆ ತಿರುಗಿಸಿ ಬಿಡಲಾಗುತ್ತದೆ. ನೆಲವು ಒಣಗಿರುವುದನ್ನು ನೀವು ನೋಡುತ್ತೀರಿ. ಅನಂತರ ನಾವು ಅದರ ಮೇಲೆ ಮಳೆಗೆರೆದಾಗ ಅದು ಒಮ್ಮೆಲೇ ಮೊಳೆಯಿತು, ಉಬ್ಬಿತು ಮತ್ತು ಎಲ್ಲ ಬಗೆಯ ನಯನ ಮನೋಹರ ಸಸ್ಯಗಳನ್ನು ಹೊರಗೆಡಹ ತೊಡಗಿಬಿಟ್ಟಿತು.” (22:5)

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *