ಲೆಬನಾನ್‍ನ ನಿರಾಶ್ರಿತರಿಗೆ ಹೆಚ್ಚಿನ ಸಹಾಯ ಅಗತ್ಯವಿದೆ: ವಿಶ್ವ ಸಂಸ್ಥೆ

ಬೈರೂತ್, ಫೆ. 24: ಲೆಬನಾನಿನಲ್ಲಿರುವ ಸಿರಿಯದ ನಿರಾಶ್ರಿತರಿಗೆ ಹೆಚ್ಚು ಸಹಾಯದ ಅಗತ್ಯವಿದ್ದು, ಹೆಚ್ಚಿನ ನೆರವನ್ನು ಒದಗಿಸಬೇಕೆಂದು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ 1.68 ಬಿಲಿಯನ್ ಡಾಲರ್ ವಿಶ್ವಸಂಸ್ಥೆ ಏಜೆನ್ಸಿಗಳು ಮತ್ತು ಇತರ ಏಜೆನ್ಸಿಗಳು ಸೇರಿ ಸಿರಿಯದ ನಿರಾಶ್ರಿತರಿಗೆ ಸಹಾಯ ಧನ ನೀಡಿವೆ ಎಂದು ವಿಶ್ವ ಸಂಸ್ಥೆ ವಕ್ತಾರ ಫಿಲಿಪ್ ಲಸ್ಸಾರಿನಿ ಹೇಳಿದರು.

ಇದುವರೆಗೆ ವಿತರಣೆ ಮಾಡಿದ್ದರಲ್ಲಿ ಶೇ.435ರಷ್ಟು ನಿರಾಶ್ರಿತರಿಗೆ ಮಾತ್ರವೇ ಸಹಾಯ ತಲುಪಿಸಲು ಆಗಿದೆ. 2017ರಲ್ಲಿ 1.3 ಮಿಲಿಯನ್ ನಿರಾಶ್ರಿತರಿಗೆ ಕುಡಿಯುವ ನೀರನ್ನು ತಲುಪಿಸಲಾಗಿದೆ. ಒಂಬತ್ತು ಲಕ್ಷದಷ್ಟು ನಿರಾಶ್ರಿತರಿಗೆ ಆಹಾರ ಸಹಾಯವನ್ನು ಎನ್‍ಜಿಒಗಳು ಸೇರಿ ಒದಗಿಸಿವೆ ಎಂದು ಅವರು ಹೇಳಿದರು.

ಲೆಬನಾನ್‍ನಲ್ಲಿರುವ ಸಿರಿಯದ ನಿರಾಶ್ರಿತರಿಗೆ ಸಹಾಯಗಳನ್ನು ಒದಗಿಸಲು ಅಂತಾರಾಷ್ಟ್ರೀಯ ಸಮುದಾಯ ಮುಂದೆ ಬರಬೇಕೆಂದು ಲೆಬನೀಸ್ ಪ್ರಧಾನಿ ಸಅದ್ ಹರೀರಿ ಕರೆ ನೀಡಿದ್ದರು. ಈಗ ಹತ್ತು ಲಕ್ಷಕ್ಕೂ ಅಧಿಕ ಸಿರಿಯನ್ನರು ನಿರಾಶ್ರಿತರಾಗಿ ಲೆಬನಾನ್‍ನಲ್ಲಿ ವಾಸವಿದ್ದಾರೆ.

Check Also

ಮಕ್ಕದಲ್ಲಿ ನಡೆಯಲು ಕಷ್ಟಪಡುತ್ತಿದ್ದ ಮಹಿಳೆಗೆ ತನ್ನ ಶೂ ನೀಡಿದ ಪೊಲೀಸ್- ವೀಡಿಯೊ ವೈರಲ್

ಸೌದಿ ಅರೇಬಿಯ, ಆ.14: ಮಕ್ಕದಲ್ಲಿ ಭಾರೀ ಉಷ್ಟತೆಯಿದೆ. ಆದ್ದರಿಂದ ರಸ್ತೆಯಲ್ಲಿ ನಡೆಯಲು ಆಗದೆ ಕಷ್ಟ ಅನುಭವಿಸಿದ ಮಹಿಳಾ ಹಾಜಿಯೊಬ್ಬರಿಗೆ ಸೌದಿ …

Leave a Reply

Your email address will not be published. Required fields are marked *