ಕೇರಳ ಜಲ ಪ್ರಳಯ; ದೇವಸ್ಥಾನದಲ್ಲಿ ಈದ್ ನಮಾಝ್ – ಮಂದಿರ ಶುಚಿಗೊಳಿಸಿದ ಮುಸ್ಲಿಮರು

ತ್ರಿಶ್ಶೂರ್: ಕೇರಳದ ನೆರೆ ಜಲ ಪ್ರಳಯದ ಮಧ್ಯೆ ಆಗಾಗ ಸೌಹಾರ್ದ ಮಾನವೀಯ ಘಟನೆಗಳು ವರದಿಯಾಗುತ್ತಿದೆ. ಇರ್ವತ್ತೂರು ಸಮೀಪದ ಪುರಪ್ಪುಲ್ಲಿಕ್ಕವು ರತ್ನೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಮುಸ್ಲಿಮರು ಈದ್ ನಮಾಝ್ ನಿರ್ವಹಿಸಿದರು.

ಕೊಚ್ಚುಕಡವು ಜುಮಾ ಮಸೀದಿಯು ಇನ್ನೂ ಜಲಾವೃತಗೊಂಡಿರುವುದರಿಂದ ಅಲ್ಲಿ ಈದ್ ನಮಾಝ್ ಮಾಡಲು ಸಾಧ್ಯವಿರಲಿಲ್ಲ. ಇದನ್ನು ಮನಗಂಡ ದೇವಸ್ಥಾನದ ಆಡಳಿತ ಮಂಡಳಿಯು ಪೂರ್ಣ ಮನಸ್ಸಿನಿಂದ ತನ್ನ ಸಭಾಂಗಣದಲ್ಲಿ ನಮಾಝ್ ಸಲ್ಲಿಸಲು ವ್ಯವಸ್ಥೆ ಕಲ್ಪಿಸಿದೆ.

ಇದು ಏಕತೆಯ ಸಂಕೇತವಾಗಿದ್ದು, ಆ ಮೂಲಕ ನಾವು ಈ ದೇಶದ ಜಾತ್ಯಾತೀತ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿದೆವು ಎಂದು ದೇವಸ್ಥಾನ ಆಡಳಿತ ಸಂಸ್ಥೆ ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ಪಿ ಕೆ ಸಾಬು ಹೇಳಿದರು.

ಈ ಸಂದರ್ಭದಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿ ದೇವಸ್ಥಾನದ ಸಭಾಂಗಣದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ದೇವಸ್ಥಾನದ ಈ ಸೌಹಾರ್ದ ಸಂಬಂಧಕ್ಕಾಗಿ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದೇ ಸಂದರ್ಭದಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ, ಭಾರೀ ಪ್ರವಾಹದಿಂದ ಸ್ಥಳಾಂತರಿಸಲ್ಪಟ್ಟ ಹಲವಾರು ಹಿಂದೂ ಕುಟುಂಬಗಳಿಗೆ ಮಲಪ್ಪುರಂ ಜುಮಾ ಮಸೀದಿ ಆಶ್ರಯ ನೀಡಿ ಆಹಾರವನ್ನು ಒದಗಿಸಿದೆ. ಪ್ರವಾಹದಿಂದ ಪ್ರಭಾವಕ್ಕೊಳಗಾಗಿದ್ದ ಎರಡು ಹಿಂದೂ ದೇವಾಲಯಗಳನ್ನು ಸ್ವಚ್ಛಗೊಳಿಸಲು ಅಲ್ಲಿನ ಮುಸ್ಲಿಂ ಪುರುಷರು ಸಹಾಯ ಮಾಡಿದರು.

ಪ್ರವಾಹದಿಂದ ಮುಳುಗಿದ ವಯನಾಡಿನ ವೆನ್ನಿಯೋಡ್ನಲ್ಲಿನ ವಿಷ್ಣು ದೇವಸ್ಥಾನ ಮತ್ತು ಮಲಪ್ಪುರಂನ ಮನ್ನಾರ್ಕಡ್ನಲ್ಲಿರುವ ಭಗವಾನ್ ಅಯ್ಯಪ್ಪ ದೇವಸ್ಥಾನವನ್ನು ಮುಸ್ಲಿಂ ಪುರುಷರು ಸ್ವಚ್ಛಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ದೇವಾಲಯಗಳನ್ನು ಸ್ವಚ್ಛಗೊಳಿಸುವ ಮುಸ್ಲಿಂ ಪುರುಷರ ಫೋಟೋಗಳನ್ನು ಹಲವಾರು ಮಂದಿ ಹಂಚಿಕೊಂಡಿದ್ದಾರೆ.

Check Also

ಮಗನ ಕೊಲೆಗಾರನಿಗೆ ನ್ಯಾಯಾಲಯದಲ್ಲಿ ಜೀವದಾನ ನೀಡಿದ ತಾಯಿ -ತಾಯಿಯ ಮಾತು ಕೇಳಿ-ವಿಡಿಯೋ

Image : USA Today ಮಗನ ಕೊಲೆಗಾರನಿಗೆ ಗರಿಷ್ಟ ಶಿಕ್ಷೆ ಆಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಇಲ್ಲೊಬ್ಬರು ತಾಯಿ ತನ್ನ …

Leave a Reply

Your email address will not be published. Required fields are marked *