ಜೆರುಸಲೇಮ್‍ನಲ್ಲಿ ಮುಂದುವರಿದ ಇಸ್ರೇಲಿನ ಯಹೂದೀಕರಣ

ಜೆರುಸಲೇಂ, ಮಾ. 14: ಜೆರುಸಲೇಮ್‍ನಲ್ಲಿ ಇಸ್ರೇಲಿನ ಯಹೂದೀಕರಣ ಪ್ರಕ್ರಿಯೆ ಭರದಿಂದ ಸಾಗಿದ್ದು ಈಗ ಹೆಬ್ರೋನ್‍ನಲ್ಲಿ ಅಕ್ರಮ ವಸತಿ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಫೆಲಸ್ತೀನ್ ಲಿಬರೇಶನ್ ಆರ್ಗನೈಝೇಶನ್ ರಾಷ್ಟ್ರೀಯ ಬ್ಯೂರೊ ಹೊರ ಬಿಟ್ಟಿರುವ ವರದಿ ಇದನ್ನು ಬಹಿರಂಗಪಡಿಸಿದೆ.

ಇಸ್ರೇಲ್ ಸೈನ್ಯದ ಕಣ್ಗಾವಲಿನಲ್ಲಿ ವ್ಯಾಪಕ ಅಕ್ರಮ ವಸತಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಸ್ರೇಲ್‍ನ ಗೃಹ ಸಚಿವಾಲಯದ ಮೌನ ಸಮ್ಮತಿಯಲ್ಲಿ ಈ ಕಾರ್ಯ ನಡೆಯುತ್ತಿದೆ. ಅತಿಕ್ರಮಿಸಿದ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಕಾಯಂ ವಾಸ ಹೂಡಿಸುವುದು ಇಸ್ರೇಲಿನ ಉದ್ದೇಶವಾಗಿದೆ.

ಡೊನಾಲ್ಡ್ ಟ್ರಂಪ್ ಇಸ್ರೇಲಿನ ರಾಜಧಾನಿ ಜೆರುಸಲೇಮ್ ಘೋಷಿಸಿರುವುದು ಯಹೂದಿ ವಲಸೆಗಾರರಿಗೆ ಅನುಕೂಲಕರವಾಗಿ ಪರಿಣಮಿಸಿದೆ. ನಂತರ ಇಲ್ಲಿ ಯಹೂದಿಗಳನ್ನು ವಾಸ ಹೂಡಿಸುವ ಪ್ರಕ್ರಿಯೆ ತೊಡಗಿತು.

ವೆಸ್ಟ್ ಬ್ಯಾಂಕ್ ಮತ್ತು ಜೆರುಸಲೇಂಗಳಲ್ಲಿರುವ ಫೆಲಸ್ತೀನಿಯರನ್ನು ಗುರಿಯಾಗಿಟ್ಟು ಅಕ್ರಮ ವಸತಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಲ್ಲಿರುವ ಫೆಲಸ್ತೀನಿಯರನ್ನು ಹೊರದಬ್ಬಿ ಅಲ್ಲಿ ಯಹೂದಿಯರನ್ನು ವಾಸಿಸುವಂತೆ ಮಾಡುವ ಗುರಿ ಇಸ್ರೇಲ್ ಹೊಂದಿದೆ. ಹೊರಗಟ್ಟಲಾಗಿರುವ ಫೆಲಸ್ತೀನಿಯರ ಮನೆಯನ್ನು ಕೆಡವಲಾಗುತ್ತಿದ್ದು, ಕೆಲವೆಡೆ ಫೆಲಸ್ತೀನಿಯರಿಗೆ ಹಲ್ಲೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

Check Also

ಮಗನ ಕೊಲೆಗಾರನಿಗೆ ನ್ಯಾಯಾಲಯದಲ್ಲಿ ಜೀವದಾನ ನೀಡಿದ ತಾಯಿ -ತಾಯಿಯ ಮಾತು ಕೇಳಿ-ವಿಡಿಯೋ

Image : USA Today ಮಗನ ಕೊಲೆಗಾರನಿಗೆ ಗರಿಷ್ಟ ಶಿಕ್ಷೆ ಆಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಇಲ್ಲೊಬ್ಬರು ತಾಯಿ ತನ್ನ …

Leave a Reply

Your email address will not be published. Required fields are marked *