Breaking News
Home / ವಾರ್ತೆಗಳು / ಶವ ಕೊಳೆಸಿದ ಆಸ್ಪತ್ರೆ ನಿರ್ಲಕ್ಷ್ಯವನ್ನು ಖಂಡಿಸಿದ ಜಮಾಅತೆ ಇಸ್ಲಾಮಿ ಹಿಂದ್

ಶವ ಕೊಳೆಸಿದ ಆಸ್ಪತ್ರೆ ನಿರ್ಲಕ್ಷ್ಯವನ್ನು ಖಂಡಿಸಿದ ಜಮಾಅತೆ ಇಸ್ಲಾಮಿ ಹಿಂದ್

ಇತ್ತೀಚಿಗೆ ವಿದ್ಯುತ್ ಆಘಾತಕ್ಕೆ ಬಲಿಯಾದ ಪಿಲಾರು,ದಾರಂದಬಾಗಿಲು ನಿವಾಸಿ ವಿಲ್ಸನ್ ಫೆರ್ನಾಂಡಿಸ್(26) ಅವರ ಶವವನ್ನು ಶವಾಗಾರದಲ್ಲಿರಿಸಿ ಕೊಳೆಸಿದ ಮಂಗಳೂರಿನ, ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯ ನಿರ್ಲಕ್ಷ್ಯ ಧೋರಣೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕವು ಖಂಡಿಸಿದೆ.

ಮಂಗಳವಾರದಂದು ಮೃತ ವಿಲ್ಸನ್ ಅವರ ಮನೆಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮಿ ಹಿಂದ್ ನ ಮುಖಂಡರು ವಿಲ್ಸನ್ ತಂದೆ ಅಬ್ರಹಾಂ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ಮುಖಂಡರಾದ ಶರೀಫ್ ಅಹಮ್ಮದ್ ಅವರು ಮಾತನಾಡಿ ಒಂದು ಕಡೆ ಎಳೆಯ ಪ್ರಾಯದ ಮಗನ ಅಗಲಿಕೆಯೇ ಬರಿಸಲಾರದ ನಷ್ಟವಾದರೆ, ಅಂತ್ಯ ಸಂಸ್ಕಾರದ ವೇಳೆಯಲ್ಲೂ ಮನೆ ಮಗನ ಮುಖವನ್ನೂ ನೋಡದಂತೆ ಮಾಡಿರುವ ಆಸ್ಪತ್ರೆಯ ನಿರ್ಲಕ್ಷ್ಯತನ ವಿರುದ್ಧ ಪೊಲೀಸ್ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಲ್ಸನ್ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಲು ನಾವೆಂದಿಗೂ ಅವರ ಕುಟುಂಬದ ಜೊತೆ ಇರುವುದಾಗಿ ಹೇಳಿದ್ದಾರೆ. ಸಂಘಟನೆ ಮುಖಂಡರಾದ ಅಬ್ದುಲ್ ಜಲೀಲ್ ಮತ್ತು ಅಬ್ದುಲ್ ಕರೀಂ ಜತೆಗಿದ್ದರು.

About editor

Check Also

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು …

Leave a Reply

Your email address will not be published. Required fields are marked *