ಭಯೋತ್ಪಾದನೆ ಹರಡುವುದು ನನ್ನ ಕೆಲಸವಲ್ಲ: ಝಾಕಿರ್ ನಾಯ್ಕ್

ಮುಂಬೈ, ಜು. 12: ತಾನು ಯಾವತ್ತು ಭಯೋತ್ಪಾದನೆಯನ್ನು ಪ್ರಚಾರ ಪಡಿಸಿಲ್ಲ ಎಂದು ವಿವಾದಿತ ಇಸ್ಲಾಮೀ ಉಪನ್ಯಾಸಕ ಝಾಕಿರ್ ನಾಯ್ಕ್ ಹೇಳಿದರು. ಸಮುದಾಯದ ನಡುವೆ ಸೌಹಾರ್ದ, ಶಾಂತಿಗಾಗಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ನಕಲಿ ವೀಡಿಯೊ ಕ್ಲಿಪ್‍ಗಳನ್ನು ತಯಾರಿಸಿ ತನ್ನ ವಿರುದ್ಧ ಪ್ರಯೋಗಿಸಲಾಗುತ್ತಿದೆ. ವಾಸ್ತವಿಕತೆಗೆ ದೂರವಾದ ರೀತಿಯಲ್ಲಿ ಭಯೋತ್ಪಾದನೆಯನ್ನು ಆರೋಪಿಸಲಾಗುತ್ತಿದೆ ಎಂದು ತನ್ನ ವಕ್ತಾರ ಮೂಲಕ ಅವರು ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ದ್ವೇಷದ ಹೇಳಿಕೆ ಕಪ್ಪು ಹಣ ಬಿಳುಪು ಮಾಡುವ ಹೆಸರಿನಲ್ಲಿ ಭಾರತದಲ್ಲಿ ಝಾಕಿರ್ ನಾಯ್ಕ್ ವಿರುದ್ಧ ಕೇಸು ದಾಖಲಾಗಿದ್ದು. ಅವರ ವಿರುದ್ಧ ಬಂಧನ ಆದೇಶ ಜಾರಿಗೊಳಿಸಲಾಗಿದೆ. ಈಗ ಅವರು ಮಲೇಶ್ಯದಲ್ಲಿ ಆಶ್ರಯ ಪಡೆದಿದ್ದಾರೆ.

ಇತ್ತೀಚೆಗೆ ಮಲೇಶ್ಯನ್ ಪ್ರಧಾನಿ ಮಹಾತೀರ್ ಮುಹಮ್ಮದ್‍ರನ್ನು ನಾಯ್ಕ್ ಭೇಟಿಯಾಗಿದ್ದರು. ನಾಯ್ಕ್‍ರನ್ನು ಹಸ್ತಾಂತರಿಸುವ ಭಾರತದ ಬೇಡಿಕೆಯನ್ನು ಮಹಾತೀರ್ ತಳ್ಳಿ ಹಾಕಿದ್ದಾರೆ. ನಾಯ್ಕ್‍ರ ಪೀಸ್ ಟಿವಿ ಚ್ಯಾನೆಲ್ ಭಾರತದಲ್ಲಿ ನಿಷೇಧಿಸಲಾಗಿದೆ.

Check Also

ಫಿಫಾ ವಿಶ್ವಕಪ್ ಪಂದ್ಯಾವಳಿ ಗಳಿಕೆಯನ್ನು ಮಸೀದಿ ನಿರ್ಮಾಣಕ್ಕೆ ದಾನ ಮಾಡಲಿರುವ ಫ್ರಾನ್ಸ್ ತಂಡದ ಉಸ್ಮಾನ್ ದೆಂಬೆಲ್

ಪ್ಯಾರಿಸ್, ಜು.20: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಗೆದ್ದ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಉಸ್ಮಾನ್ ದೆಂಬೆಲ್ ಪಂದ್ಯಾವಳಿಯ ತಮ್ಮ …

Leave a Reply

Your email address will not be published. Required fields are marked *