ಇಸ್ರೇಲ್ ವಿರುದ್ಧ ಬಲವಾದ ಧ್ವನಿಯೆತ್ತಿದ ಅರಬ್ ದೇಶಗಳು

ದಹ್ರಾನ್, ಎ.16: ಇಸ್ರೇಲಿನ ಅಮೆರಿಕದ ಭದ್ರತಾ ಸಮಿತಿಗೆ ಪ್ರವೇಶ ಯತ್ನವನ್ನು ತಡೆಯಲು ಅರಬ್ ರಾಷ್ಟ್ರಗಳ ಶೃಂಗ ತೀರ್ಮಾನಿಸಿದೆ. ವಿಶ್ವಸಂಸ್ಥೆಯ ಯಾವುದೇ ಆದ್ಯಾದೇಶವನ್ನು ಒಪ್ಪದ ಇಸ್ರೇಲ್‍ಗೆ ವಿಶ್ವಸಂಸ್ಥೆ ಪ್ರವೇಶಕ್ಕೆ ಅವಕಾಶ ನೀಡಬಾರದೆಂದು ಸಭೆ ಆಗ್ರಹಿಸಿತು. ಇದಕ್ಕಾಗಿ ಅಧಿಕೃತ ವೇದಿಕೆಗಳನ್ನು ಉಪಯೋಗಿಸಬೇಕೆಂದು ಫೆಲಸ್ತೀನ್ ಅರಬ್ ದೇಶಗಳಿಗೆ ಮನವಿ ಮಾಡಿಕೊಂಡಿದೆ.

ಫೆಲಸ್ತೀನಿಗೆ ಬೆಂಬಲ ಸೂಚಿಸಿದ ಅರಬ್ ದೇಶಗಳ ಶೃಂಗವನ್ನು ಜೆರುಸಲೇಮ್ ಶೃಂಗ ಸಭೆ ಎಂದು ಹೆಸರಿಸಲಾಗಿತ್ತು. ಇದೇ ವೇಳೆ ಸೌದಿ ಅರೇಬಿಯ ಪೆಲಸ್ತೀನ್‍ಗೆ 200 ಮಿಲಿಯನ್ ಡಾಲರ್ ಸಹಾಯ ಘೋಷಿಸಿತು. ಶೃಂಗದಲ್ಲಿ ಸೌದಿ ಸಹಾಯ ಘೋಷಣೆ ನಡೆಸಿದ್ದು ಗಮನಾರ್ಹವಾಗಿದೆ.

ಫೆಲಸ್ತೀನಿನ ಪುನರ್ ನಿರ್ಮಾಣಕ್ಕೆ 150 ಮಿಲಿಯನ್ ಡಾಲರ್ ಸಹಾಯ ನೀಡಲು ಸೌದಿ ಅರೇಬಿಯ ನಿರ್ಧರಿಸಿದೆ. ಐವತ್ತು ಮಿಲಿಯನ್ ಡಾಲರ್ ನೆರವನ್ನು ವಿಶ್ವಸಂಸ್ಥೆಯ ಫೆಲಸ್ತೀನ್ ನಿರಾಶ್ರಿತರ ನಿಧಿಗೆ ಸೌದಿ ಅರೇಬಿಯ ನೀಡಲಿದೆ.

Check Also

ಫಿಫಾ ವಿಶ್ವಕಪ್ ಪಂದ್ಯಾವಳಿ ಗಳಿಕೆಯನ್ನು ಮಸೀದಿ ನಿರ್ಮಾಣಕ್ಕೆ ದಾನ ಮಾಡಲಿರುವ ಫ್ರಾನ್ಸ್ ತಂಡದ ಉಸ್ಮಾನ್ ದೆಂಬೆಲ್

ಪ್ಯಾರಿಸ್, ಜು.20: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಗೆದ್ದ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಉಸ್ಮಾನ್ ದೆಂಬೆಲ್ ಪಂದ್ಯಾವಳಿಯ ತಮ್ಮ …

Leave a Reply

Your email address will not be published. Required fields are marked *