ಇಶ್ರತ್ ಜಹಾನ್ ನಕಲಿ ಎನ್‍ಕೌಂಟರ್: ಮೂವರು ಪೊಲೀಸಧಿಕಾರಿಗಳ ವಿಚಾರಣೆ – ಕೋರ್ಟು

ಅಹ್ಮದಾಬಾದ್, ಆ.8: ಇಶ್ರತ್ ಜಹಾನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ತಮ್ಮನ್ನು ವಿಚಾರಣೆಯಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಮಾಜಿ ಪೊಲೀಸಧಿಕಾರಿಗಳಾದ ಡಿಜಿ ವಂಜಾರ, ಎನ್ ಕೆ ಅಮೀನ್ ಸಲ್ಲಿಸಿದ ಅರ್ಜಿಯನ್ನು ಅಹ್ಮದಾಬಾದ್‍ನ ವಿಶೇಷ ಸಿಬಿಐ ನ್ಯಾಯಾಲಯ ತಿರಸ್ಕರಿಸಿದೆ.

ಆರೋಪಿಗಳು ವಿಚಾರಣೆ ಎದುರಿಸಬೇಕು. ಇಶ್ರತ್ ಮತ್ತು ಮೂರು ಮಂದಿಯನ್ನು ನಕಲಿ ಎನ್‍ಕೌಂಟರ್ ಮೂಲಕ ಕೊಲೆ ಮಾಡಿದ ಪ್ರಕರಣದಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಆರೋಪ ಪಟ್ಟಿಯಿಂದ ತಮ್ಮನ್ನು ಕೈ ಬಿಡಬೇಕೆಂದು ವಂಜಾರರ ಅರ್ಜಿಯನ್ನು ಪ್ರಶ್ನಿಸಿ ಸಿಬಿಐ ಮತ್ತು ಇಶ್ರತ್ ಜಹಾನ್ ರ ತಾಯಿ ಶಮೀಂ ಕೌಸರ್ ಕೋರ್ಟಿನ ಮೊರೆ ಹೋಗಿದ್ದರು.

ವಿಶೇಷ ನ್ಯಾಯಾಧೀಶ ಜೆ.ಕೆ, ಪಾಂಡ್ಯ ಅರ್ಜಿಯಲ್ಲಿ ವಿವರವಾದ ವಾದವನ್ನು ಆಲಿಸಿದರು. ವಂಜಾರ ಮತ್ತು ಅಮೀನ್‍ರ ಬೇಡಿಕೆಯನ್ನು ತಳ್ಳಿ ಹಾಕಿದರು. ವಂಜಾರ ಗುಜರಾತ್‍ನ ಮಾಜಿ ಡಿಐಜಿಯಾಗಿದ್ದಾರೆ. ಪ್ರಕರಣದ ಆರೋಪಿ ಮಾಜಿ ಡಿಜಿಪಿ ಪಿ.ಪಾಂಡೆಯನ್ನು ಕೋರ್ಟು ಕಳೆದ ಫೆಬ್ರುವರಿಯಲ್ಲಿ ಆರೋಪಿ ಸ್ಥಾನದಿಂದ ತೆರವುಗೊಳಿಸಿತ್ತು. ಇದನ್ನು ಬೆಟ್ಟು ಮಾಡಿ ವಂಜಾರ ಅರ್ಜಿ ಸಲ್ಲಿಸಿದ್ದರು.

Check Also

ಮಗನ ಕೊಲೆಗಾರನಿಗೆ ನ್ಯಾಯಾಲಯದಲ್ಲಿ ಜೀವದಾನ ನೀಡಿದ ತಾಯಿ -ತಾಯಿಯ ಮಾತು ಕೇಳಿ-ವಿಡಿಯೋ

Image : USA Today ಮಗನ ಕೊಲೆಗಾರನಿಗೆ ಗರಿಷ್ಟ ಶಿಕ್ಷೆ ಆಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಇಲ್ಲೊಬ್ಬರು ತಾಯಿ ತನ್ನ …

Leave a Reply

Your email address will not be published. Required fields are marked *