Breaking News
Home / ವಾರ್ತೆಗಳು / ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಲು ಸೌದಿ ಅರೇಬಿಯ ಭೇಟಿಗೂ ಸಿದ್ಧ: ಇರಾನ್ ವಿದೇಶ ಸಚಿವ

ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಲು ಸೌದಿ ಅರೇಬಿಯ ಭೇಟಿಗೂ ಸಿದ್ಧ: ಇರಾನ್ ವಿದೇಶ ಸಚಿವ

ಟೆಹ್ರಾನ್, ಆ. 23: ಸೌದಿ ಅರೇಬಿಯ ಮತ್ತು ಇರಾನ್ ಪರಸ್ಪರ ಭಿನ್ನಮತವನ್ನು ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಮುಂದಿಡುವ ಲಕ್ಷಣಗಳು ಗೋಚರಿಸಿವೆ. ಈ ವಿಷಯದಲ್ಲಿ ತಾನು ಸೌದಿ ಅರೇಬಿಯ ಸಂದರ್ಶಿಸಲು ಸಿದ್ಧ ಎಂದು ಇರಾನಿನ ವಿದೇಶ ಸಚಿವ ಸಾರಿಫ್ ಹೇಳಿದರು.

ಕಳೆದ ದಿವಸ ಟೆಹ್ರಾನ್‍ನಲ್ಲಿ ಅಂತಾರಾಷ್ಟ್ರೀಯ ಕಾನೂನು , ಏಕಪಕ್ಷೀಯ ನಡೆ ಎಂಬ ವಿಷಯದ ಮೇಲೆ ನಡೆದ ಸಮ್ಮೇಳನದಲ್ಲಿ ಅವರು ಮಾತಾಡುತ್ತಾ ಭಿನ್ನಾಭಿಪ್ರಾಯ ಬಗೆಹರಿಸಲು ಸೌದಿಯೊಂದಿಗೆ ಚರ್ಚಿಸಲು ಸಿದ್ಧ ಎಂದು ತಿಳಿಸಿದರು.

ಗಲ್ಫ್ ವಲಯದ ಘರ್ಷಣಾ ಸ್ಥಿತಿ ಕೊನೆಗೊಳಿಸಲು, ಸರಳೀಕರಿಸಲು ಇತರ ದೇಶಗಳೊಂದಿಗೆ ಸಹಕರಿಸಲು ಅಗತ್ಯವಿರುವ ಎಲ್ಲ ಪರಿಶ್ರಮಗಳನ್ನು ಇರಾನ್ ಸ್ವಾಗತಿಸುತ್ತದೆ.

ಯೆಮನ್ ಜನರನ್ನು ಬೆಂಬಲಿಸುವ ಇಸ್ಲಾಮಿಕ್ ರಿಪಬ್ಲಿಕ್ ಇರಾನ್‍ನ ನೀತಿಯನ್ನು ಅವರು ಇದೇ ವೇಳೆ ಅವರು ಪುನರುಚ್ಚರಿಸಿದ್ದಾರೆ.

About editor

Check Also

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು …

Leave a Reply

Your email address will not be published. Required fields are marked *