Breaking News
Home / ವಾರ್ತೆಗಳು / ಇಂಡೊನೇಶಿಯದಲ್ಲಿ ಅನೈತಿಕ ಸಂಬಂಧಕ್ಕೆ ಛಡಿಯೇಟು ಶಿಕ್ಷೆ

ಇಂಡೊನೇಶಿಯದಲ್ಲಿ ಅನೈತಿಕ ಸಂಬಂಧಕ್ಕೆ ಛಡಿಯೇಟು ಶಿಕ್ಷೆ

ಇಂಡೊನೇಶಿಯ, ನ.6: ಅಕ್ರಮ ಸಂಬಂಧ ಇರಿಸಿದವರಿಗೆ ಇಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತಿದೆ. ಸಾರ್ವಜನಿಕವಾಗಿ ಛಡಿಯೇಟು ಶಿಕ್ಷೆ ವಿಧಿಸಲಾಗುತ್ತದೆ. ಮದುವೆಯಾದ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಛಡಿಯೇಟು ಶಿಕ್ಷೆ ನೀಡಿ ತೀರ್ಪು ಹೊರಬಂದಿದೆ. ತಪ್ಪಿತಸ್ಥ ವ್ಯಕ್ತಿ ಉಲೇಮಾ ಕೌನ್ಸಿಲ್‌ನ ಸದಸ್ಯ ಕೂಡ ಆಗಿದ್ದ ಎನ್ನಲಾಗಿದೆ.

ಮುಖ್ಲಿಸ್ ಬಿನ್ ಮುಹಮ್ಮದ್ ಎಂಬ ವ್ಯಕ್ತಿ ಮತ್ತು ಆತನ ಜೊತೆ ಕಾರಿನಲ್ಲಿದ್ದ ಮಹಿಳೆಗೆ ಸಾರ್ವಜನಿಕವಾಗಿ ಛಡಿಯೇಟು ಶಿಕ್ಷೆ ವಿಧಿಸಿ ಶರಿಯ ನ್ಯಾಯಾಲಯ ತೀರ್ಪು ನೀಡಿತ್ತು. ಅವರಿಬ್ಬರ ವಿರುದ್ಧ ಕಾರಿನೊಳಗೆ ಅನೈತಿಕ ಚಟುವಟಿಕೆ ನಡೆಸಿದ ಆರೋಪ ಇತ್ತು.

ಇಂಡೊನೇಶಿಯದಲ್ಲಿ ವ್ಯಭಿಚಾರಕ್ಕೆ ಕ್ಷಮಿಸುವ ಅವಕಾಶ ಇಲ್ಲ. ಯಾರೇ ಆಗಿದ್ದರೂ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ಎಶೋಹ್ ಬೆಸಾರ್ ಜಿಲ್ಲೆಯ ಉಪಮೇಯರ್ ಸುಸೈನಿ ವಹಾಬ್ ಹೇಳಿದ್ದಾರೆ. ಇಲ್ಲಿ ದೇವ ಕಾನೂನಿನಂತೆ ಆಡಳಿತ ಇದೆ ಎಂದು ಅವರು ಹೇಳಿದರು. ಉಲೆಮಾ ಕೌನ್ಸಿಲ್ ಸದಸ್ಯನಿಗೂ ಕೊರಡೆಯೇಟು ನೀಡಲಾಗುವುದು ಎಂದು ಹೇಳಿದರು.

About editor

Check Also

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು …

Leave a Reply

Your email address will not be published. Required fields are marked *