Breaking News
Home / ವಾರ್ತೆಗಳು / ಭಾರತದ ಮುಸ್ಲಿಮರಿಗೆ ಮಸೀದಿ ಬೇಡ, ಶಾಲೆ ಬೇಕು – ಸಲೀಂ ಖಾನ್

ಭಾರತದ ಮುಸ್ಲಿಮರಿಗೆ ಮಸೀದಿ ಬೇಡ, ಶಾಲೆ ಬೇಕು – ಸಲೀಂ ಖಾನ್

ಮುಂಬೈ, ನ.11: ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿಗೆ ಪ್ರತಿಕ್ರಿಯಿಸಿದ ಬಾಲಿವುಡ್ ಸಾಹಿತಿ ಸಲೀಂ ಖಾನ್ ಮುಸ್ಲಿಮರಿಗೆ ಮಸೀದಿಗಿಂತಲೂ ಶಾಲೆಗಳ ಅಗತ್ಯವಿದೆ ಎಂದು ವಿಶ್ಲೇಷಿಸಿದ್ದಾರೆ.

ಪ್ರವಾದಿ ಇಸ್ಲಾಮಿನ ಎರಡು ಸೌಂದಯರ್ವನ್ನು ತಿಳಿಸಿದರು. ಪ್ರೀತಿ, ಕ್ಷಮೆ ಸೇರಿದೆ. ಈ ಕತೆ ಅಯೋಧ್ಯೆಯಲ್ಲಿಗೆ ಮುಗಿಯಲಿ, ಮುಸ್ಲಿಮರು ತಮ್ಮ ಈ ಎರಡು ವಿಶೇಷತೆಗಳೊಂದಿಗೆ ಮುಂದೆ ಸಾಗಬೇಕು ಎಂದು ಹೇಳಿದರು. ಪ್ರೀತಿ ವ್ಯಕ್ತಪಡಿಸಿರಿ ಕ್ಷಮಿಸಿರಿ ಇನ್ನುಮುಂದೆ ಈ ವಿಷಯವನ್ನು ಕೆದಕಬೇಡಿ. ಮುಂದೆ ಸಾಗಿರಿ ಎಂದು ಮುಸ್ಲಿಂ ಸಮುದಾಯಕ್ಕೆ ಅವರು ಕರೆ ನೀಡಿದರು.

ಭಾರತೀಯ ಸಮಾಜ ಪರಿಪಕ್ವವಾಗಿದೆ. ತೀರ್ಪು ಬಂದ ನಂತರ ಯಾವ ರೀತಿ ಶಾಂತಿ ಸೌಹಾರ್ದವನ್ನು ಉಳಿಸಿಕೊಂಡಿತು ಇದು ಶ್ಲಾಘನಾರ್ಹ ಎಂದು ಐಎಎನ್‍ಎಸ್‍ನೊಂದಿಗೆ ಮಾತಾಡುತ್ತಾ ಅವರು ಹೇಳಿದರು. ನೀವು ಒಪ್ಪಿಕೊಳ್ಳಿರಿ ಒಂದು ಹಳೆಯ ವಿವಾದ ಮುಗಿಯಿತು.

ತಾನು ಆತ್ಮಾರ್ಥವಾಗಿ ಈ ತೀರ್ಪನ್ನು ಸ್ವಾಗತಿಸುತ್ತೇನೆ. ಮುಸ್ಲಿಮರು ಈ ವಿಷಯದಲ್ಲಿ ಇನ್ನು ಚರ್ಚಿಸಬಾರದು. ನಾವು ಶಾಲೆ, ಆಸ್ಪತ್ರೆಯ ಕುರಿತು ಚರ್ಚಿಸೋಣ. ಇದು ನಮಗೆ ಅಗತ್ಯವಿದೆ. ಅಯೋಧ್ಯೆಯಲ್ಲಿ ಕೊಡ ಮಾಡುವ ಐದು ಎಕರೆ ಭೂಮಿಯಲ್ಲಿ ಕಾಲೇಜು ತೆರೆದರೆ ಉತ್ತಮ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮಗೆ ಮಸೀದಿಯ ಅಗತ್ಯವಿಲ್ಲ. ನಾವು ನಮಾಝ್‍ನ್ನು ಎಲ್ಲಿಯೂ ನಿರ್ವಹಿಸೋಣ, ರೈಲಿನಲ್ಲಿ, ವಿಮಾನದಲ್ಲಿ, ಭೂಮಿಯಲ್ಲಿ ಎಲ್ಲಿಯೂ ನಿರ್ವಹಿಸಿ ಬಿಡಬಹುದು. ಅದಕ್ಕಿಂತ ಶಾಲೆಯ ಅತ್ಯಗತ್ಯವಾಗಿದೆ. 22 ಕೋಟಿ ಮುಸ್ಲಿಮರಿಗೆ ಉತ್ತಮ ಶಿಕ್ಷಣ ಸಿಕ್ಕಿದರೆ ಈ ದೇಶದ ಬಹಳಷ್ಟು ಸಮಸ್ಯೆ ಕಡಿಮೆಯಾಗಲಿದೆ.

About editor

Check Also

ಕುರ್‍ಆನ್ ಪ್ರವಚನಕಾರ ಮುಹಮ್ಮದ್ ಕುಂಞಯವರಿಗೆ ಶ್ರೀ ರುದ್ರಾಕ್ಷಿ ಮಠದಿಂದ ‘ಸೇವಾರತ್ನ’ ಪ್ರಶಸ್ತಿ

ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠ ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ ‘ಸೇವಾರತ್ನ’ ಪ್ರಶಸ್ತಿಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ …

Leave a Reply

Your email address will not be published. Required fields are marked *