ಭಾರತ ‘ಹಿಂದೂ ಪಾಕಿಸ್ತಾನ ಆಗಲಿದೆ’ – ಶಶಿ ತರೂರ್

ತಿರುವನಂತಪುರಂ, ಜು.12: ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತು ಅದಕ್ಕೆ ರಾಜ್ಯ ಸಭೆಯಲ್ಲಿ ಬಹುಮತ ಲಭಿಸಿದರೆ ಭಾರತದಲ್ಲಿ ಈಗಿರುವ ಸಂವಿಧಾನ ಹೋಗಿ ಹೊಸ ಸಂವಿಧಾನವು ಅಸ್ತಿತ್ವಕ್ಕೆ ಬರಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ತಿರುವನಂತಪುರಂನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದ ವೇಳೆ ತರೂರ್ ‘ಭಾರತವನ್ನು ಹಿಂದೂ ಪಾಕಿಸ್ತಾನವನ್ನಾಗಿಸುವುದು’ ಬಿಜೆಪಿಯ ಗುರಿಯೆಂದು ಹೇಳಿದರು.

ನಮ್ಮ ಈಗಿನ ಸಂವಿಧಾನ ಎಲ್ಲರಿಗೂ ಸಮಾನತೆಯನ್ನು ಒದಗಿಸಿದೆ. ಇದನ್ನೆ ಆರೆಸ್ಸೆಸ್ ವಿರೋಧಿಸುತ್ತಿದೆ. ದೇಶದಲ್ಲಿ ದನಗಳು ಮುಸ್ಲಿಮರಿಗಿಂತ ಹೆಚ್ಚು ಸುರಕ್ಷಿತವಾಗಿವೆ. ದೇಶಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿ ಮುಂದುವರಿಯುತ್ತಿದೆ ಎಂದು ಶಶಿ ತರೂರ್ ಹೇಳಿದರು. ತಿರುವನಂತಪುರಂನಲ್ಲಿ ಅವರು ಜವಾಹರ್ ಲಾಲ್ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಭಾಷಣ ನೀಡುತ್ತಿದ್ದರು.

Check Also

ಪ್ರವಾದಿ ಮುಹಮ್ಮದ್ ರನ್ನು ಎಲ್ಲರೂ ಓದಬೇಕು: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ನ.18: ಶಾಂತಿಯ ಸಂದೇಶ ಸಾರಿದ ಮುಹಮ್ಮದ್ ಪೈಗಂಬರ್‌ರನ್ನು ಎಲ್ಲ ಭಾಷೆ ಹಾಗೂ ಧರ್ಮದ ಜನರು ಓದಬೇಕು. ಪೈಗಂಬರ್‌ರನ್ನು ಓದದೆ …

Leave a Reply

Your email address will not be published. Required fields are marked *