ಮಾನವ ಮೆದುಳಿನ ಅದ್ಭುತ ಶಕ್ತಿ

ಅಲ್ಲಾಹನ ನಿದರ್ಶನಗಳು:

ಮಾನವನ ಮೆದುಳು ಸರಿ ಸುಮಾರು 80% ನೀರು, 10% ಕೊಬ್ಬಿನಾಂಶ, 8% ಸಾರಜನಕ (ಪ್ರೋಟಿನ್‍ಗಳು) ಮತ್ತು ಅತೀ ಸಣ್ಣ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್, ಉಪ್ಪು ಮತ್ತು ಖನಿಜಾಂಶಗಳನ್ನೊಳಗೊಂಡಿದೆ. ಮೆದುಳಿನ ಪ್ರತಿಯೊಂದು ನರವೂ ವಿದ್ಯುದ್ರಸಾಯನಿಕಗಳ (Electrochemical) ಸಂದೇಶಗಳ ಮೇರೆಗೆ ಕಾರ್ಯ ನಿರ್ವಹಿಸುತ್ತವೆ.

ನರ ಮಂಡಲ ಜಾಲಗಳು ತಮ್ಮ ಸಂಪರ್ಕಗಳನ್ನು ದುರ್ಬಲಗೊಳಿಸುವ ಅಥವಾ ಪ್ರಬಲ ಪಡಿಸುವ ಮೂಲಕ ವಿಷಯಗಳನ್ನು ಸಂಗ್ರಹಿಸುತ್ತವೆ ಮತ್ತು ಇದರ ಫಲಿತಾಂಶವಾಗಿ `ಜ್ಞಾಪಕ ಶಕ್ತಿ’ಯು ರೂಪುಗೊಳ್ಳುತ್ತದೆ.

ಉದಾಹರಣೆಗೆ: ಮೊದಲ ಬಾರಿಗೆ ವ್ಯಕ್ತಿಯು ಒಂದು ವಿಸ್ಮಿತ ಘಟನೆ ಅಥವಾ ಭಾವ ಚಿತ್ರವನ್ನು ನೋಡುವಾಗ ಮೆದುಳಿನಲ್ಲಿರುವ ಕೋಶಗಳು ತಮ್ಮಲ್ಲಿಯೇ ಒಂದು ಹೊಸ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತವೆ. ಆ ಸಂದರ್ಭಕ್ಕೆ ತಕ್ಕಂತೆ ನರಗಳು ತಮ್ಮ ಸಂಪರ್ಕ ಜಾಲವನ್ನು ಬಲಗೊಳಿಸುವ ಮೂಲಕ ಆ ಸನ್ನಿವೇಶವನ್ನು ಅರ್ಥೈಸುತ್ತವೆ. ಆ ಮಾಹಿತಿಯು ದಾಖಲಿಸಲ್ಪಡುವ ಮೂಲಕ ಮತ್ತೊಮ್ಮೆ ಆ ಚಿತ್ರವನ್ನು ವೀಕ್ಷಿಸುವಾಗ ಆ ಸನ್ನಿವೇಶವು ಪರಿಚಿತವೆಂಬಂತೆ ಭಾಸವಾಗುತ್ತದೆ. ಈ ಮೂಲಕ ಮೆದುಳು ಈ ಹೊಸ ಸನ್ನಿವೇಶವನ್ನು ಸಂಗ್ರಹಿಸುತ್ತಿದೆ ಮತ್ತು ಜೀವನದಾದ್ಯಂತ ಇಂತಹ ಸನ್ನಿವೇಶವು ಮರು ಕಳಿಸಿದಾಗ ಅದನ್ನು ಸಾಮಾನ್ಯ ಚಿತ್ರಣವಾಗಿ ಮಾರ್ಪಡಿಸುತ್ತದೆ.

ಪ್ರತಿಯೊಂದು ದಾಖಲಾದ ಕ್ಷಣಗಳೂ ಕೂಡಾ ಮೆದುಳಿನ 100 ಬಿಲಿಯನ್ (100 ಶತಕೋಟಿ) ನರಗಳ ಸಂಪರ್ಕ ಜಾಲದಲ್ಲಿ 400 ಕಿ.ಮೀ. ವೇಗದಲ್ಲಿ 1,000ದಿಂದ 5,00,000 ಸಂಪರ್ಕ ನರಗಳಿಗೆ ಬಂದು ತಲುಪುತ್ತದೆ. ಇಂತಹ ಅತ್ಯದ್ಭುತ ಸಂಪರ್ಕ ಜಾಲವನ್ನು ಹೊಂದಿರುವ ಮೆದುಳು ಮನುಷ್ಯನ ದೇಹದ 1/5 ಭಾಗದಷ್ಟು ಭಾರವನ್ನು ಹೊಂದಿದ್ದರೂ ನಮ್ಮ ದೇಹವು ಪಡೆದುಕೊಳ್ಳುವ ಆಮ್ಲಜನಕ ಮತ್ತು ಗ್ಲೂಕೋಸ್‍ನ ಪ್ರಮಾಣದಲ್ಲಿ 1/5 ಪ್ರಮಾಣವನ್ನು ಮೆದುಳು ಉಪಯೋಗಿಸುತ್ತದೆ.

ಹೃದಯದಿಂದ ಪಂಪು ಮಾಡಲ್ಪಟ್ಟ ಕೂಡಲೇ ರಕ್ತವನ್ನು ಮೊತ್ತ ಮೊದಲು ಮೆದುಳು ಸ್ವೀಕರಿಸುತ್ತದೆ. ಕೆಲವೇ ರಕ್ತದ ಕಣಗಳು ಮೆದುಳನ್ನು ಜೀವಂತವಾಗಿಸಲು ಸಾಕಾಗುವುದು. ಹೃದಯ, ರಕ್ತನಾಳಗಳು ಮತ್ತು ದೇಹದ ಇತರ ಭಾಗಗಳಿಗೂ ಈ ಅಂಶವು ತಿಳಿದಿದೆ.

ಮೆದುಳಿಗೆ ಸಣ್ಣ ಪ್ರಮಾಣದ ಹಾನಿ ಅಥವಾ ಪೆಟ್ಟು ಬಿದ್ದರೂ ವ್ಯಕ್ತಿಯು ಜೀವನಾಂತ್ಯದ ವರೆಗೆ ಸಂಪೂರ್ಣ ವಿಕಲ ಚೇತನನಾಗುವ ಅಥವಾ ಕೆಲವೊಮ್ಮೆ ಮರಣ ಹೊಂದುವ ಸಾಧ್ಯತೆಗಳಿವೆ. ಒಂದು ವೇಳೆ ಮೆದುಳಿನ ವಿದ್ಯುತ್ ಸಂದೇಶ ವಾಹಕಗಳು ಒಂದೇ ಒಂದು ಕೋಶಕ್ಕೆ ತಲುಪುವಲ್ಲಿ ವಿಫಲವಾದರೆ ಹೊರ ಜಗತ್ತಿನಲ್ಲಿ ಅನುಭವಿಸುವ (Senses) ಇಂದ್ರೀಯಗಳಿಗೂ ಹಾನಿಯಾಗಬಹುದು. ಇದು ಒಂದು ಪವಾಡವಲ್ಲ, ಬದಲಾಗಿ ಅದು ಒಂದು ನಿರ್ದಿಷ್ಟ ಕಾರ್ಯ ವಿಧಾನಗಳನ್ನು ನಿರಂತರವಾಗಿ ನಿರ್ವಹಿಸುವಂತೆ ಸೃಷ್ಟಿಸಲಾದ ಅದ್ಭುತ ವ್ಯವಸ್ಥೆಯಾಗಿದೆ.

ಇದು ಒಂದು ಅಪೂರ್ವ ಅನುಗ್ರಹವಾಗಿದೆ. ಅಲ್ಲಾಹನು ನಿಪುಣ ಕಲಾಕಾರನಾಗಿದ್ದಾನೆ. ಆತನ ದಾಸರನ್ನು ಸಂಪೂರ್ಣರನ್ನಾಗಿ ಮಾಡುವವನು, ಮಾನವರಿಗೆಲ್ಲರಿಗೂ ಒಂದೇ ರೀತಿಯ ರೂಪ ಕೊಡುವವನು ಆಗಿದ್ದಾನೆ. ಅಲ್ಲಾಹನ ಔದಾರ್ಯವನ್ನು ಎಷ್ಟೇ ಕೊಂಡಾಡಿದರೂ ಸಾಕಾಗದು. ಆತನು ಸರ್ವಜ್ಞನೂ ಯುಕ್ತಿ ಪೂರ್ಣನೂ ಆಗಿದ್ದಾನೆ.

“ಅವನೇ ನಿಮಗೆ ತನ್ನ ನಿದರ್ಶನಗಳನ್ನು ತೋರಿಸುತ್ತಾನೆ ಮತ್ತು ಆಕಾಶದಿಂದ ನಿಮಗಾಗಿ ಆಹಾರವನ್ನು ಇಳಿಸುತ್ತಾನೆ. ಆದರೆ ಅಲ್ಲಾಹನ ಕಡೆಗೆ ಮರುಳುವವನು ಮಾತ್ರ (ಈ ನಿದರ್ಶನಗಳನ್ನು ಕಂಡು) ಪಾಠ ಕಲಿಯುತ್ತಾನೆ.” (ಪವಿತ್ರ ಕುರ್‍ಆನ್: 40: 13)

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *