ಹಝ್ರತ್ ಇಮಾಂ ಹುಸೈನ್ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದರು: ಪ್ರಧಾನಿ ಮೋದಿ

ಇಂದೋರ್ ,ಸೆ. 14: ಹಝ್ರತ್ ಇಮಾಂ  ಹುಸೈನ್  ಅವರು ಅನ್ಯಾಯ, ಅಹಂಕಾರದ ವಿರುದ್ಧ ಧ್ವನಿಯೆತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು .

ಇಂದೋರ್ ನಲ್ಲಿ ಸೈಫಿ ಮಸೀದಿಯಲ್ಲಿ ನಡೆದ  ಹಝ್ರತ್ ಇಮಾಂ  ಹುಸೈನ್(ರ) ಅವರ  ಸ್ಮರಣ ದಿನ ‘ಅಶಾರ ಮುಬಾರಕ್ ’  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು “ ನಾವು ಇಮಾಮ್ ಹುಸೈನರ ಪವಿತ್ರ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

“ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಬೊಹ್ರಾ  ಸಮುದಾಯ ಹೆಗಲು ಕೊಟ್ಟಿದೆ. ಗುಜರಾತ್ ನಲ್ಲಿ ಪಾಕೃತಿಕ ವಿಕೋಪದ ವೇಳೆ  ಬೋರಾ ಸಮುದಾಯ ನನಗೆ ಅಗತ್ಯದ ಸಹಕಾರ ನೀಡಿದೆ ವಿಶ್ವವೇ  ಕುಟುಂಬ ಎನ್ನುವ  ಬೊಹ್ರಾ  ಸಮುದಾಯ ಎಲ್ಲರನ್ನು ಒಗ್ಗಟ್ಟಿನಿಂದ ಕರೆದೊಯ್ಯುತ್ತಿದೆ “ಎಂದು ಅಭಿಪ್ರಾಯಪಟ್ಟರು.

ದಾವೂದಿ ಬೊಹ್ರಾ  ಸಮುದಾಯದ ಧಾರ್ಮಿಕ ಗುರು  ಸೈಯದ್ನಾ ಮುಫದ್ದಲ್ ಸೈಫುದ್ದೀನ್ ರನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಭೇಟಿಯಾದರು.

ಕೃಪೆ: ವಾರ್ತಾ ಭಾರತಿ

Check Also

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು, ನ.15: ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ …

Leave a Reply

Your email address will not be published. Required fields are marked *