ಚೀನದಲ್ಲಿ ಮುಸ್ಲಿಮರು ಹಲಾಲ್ ಉತ್ಪನ್ನ ಮತ್ತು ಆಹಾರ ಬಳಸದಂತೆ ನಿಷೇಧ..!

ಶಿಂಜಿಯಾಂಗ್, ಅ.11: ಉಯುಗುರ್ ಮುಸ್ಲಿಮರಿರುವ ಶಿಂಜಿಯಾಂಗ್‍ನಲ್ಲಿ ಈಗ ಧರ್ಮಬದ್ಧ ವಸ್ತುಗಳ ಬಳಕೆಗೂ ನಿಷೇಧ ಬಿದ್ದಿದೆ. ಈ ಪ್ರದೇಶದಲ್ಲಿ ಹಲಾಲ್ ಉತ್ಪನ್ನಗಳಿಗೆ ಸಂಪೂರ್ಣ ನಿಷೇಧ ಹೇರುವಂತೆ ಸರಕಾರ ಆದೇಶ ಹೊರಡಿಸಿದೆ. ಧಾರ್ಮಿಕ ಮೂಲಭೂತವಾದ ಹೆಚ್ಚದಂತೆ ನೋಡಿಕೊಳ್ಳಲು ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ.

ಶಿಂಜಿಯಾಂಗ್ ರಾಜಧಾನಿ ಉರುಮಾಕಿಯಲ್ಲಿ ಪಾರ್ಟಿಯ ವತಿಯಿಂದ ಈ ಆದೇಶವನ್ನು ಜಾರಿಗೆ ತರಲಾಗಿದೆ. ಅಧಿಕೃತ ಲೆಕ್ಕದಂತೆ ಚೀನದಲ್ಲಿ ಈಗ ಒಂದು ಕೋಟಿ ಇಪ್ಪತ್ತು ಸಾವಿರ ಮುಸ್ಲಿಮರಿದ್ದಾರೆ. ಸರಕಾರಿ ಅಧಿಕಾರಿಗಳಿಗೆ ಹಲಾಲ್ ಉತ್ಪನ್ನ ಮತ್ತು ಹಲಾಲ್ ಪ್ರಕ್ರಿಯೆಗಳಿಗೆ ಕಟ್ಟು ನಿಟ್ಟಿನ ತಡೆಯೊಡ್ಡಬೇಕೆಂದು ಆದೇಶಿಸಲಾಗಿದೆ. ಜನ ಸಮುದಾಯದಲ್ಲಿ ವೈಚಾರಿಕ ಬದ್ಧತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.

ಇಲ್ಲಿ ಮುಸ್ಲಿಮರಿಗೆ ಮಾಂಸಾಹಾರಕ್ಕೆ ಹಲಾಲ್ ಕ್ರಮವನ್ನು ಅನುಸರಿಸಲಾಗುತ್ತಿದೆ. ಹಲಾಲ್ ಆಹಾರ ಸೇವನೆ ಇಸ್ಲಾಮಿನ ಧಾರ್ಮಿಕ ಪದ್ಧತಿಯಾಗಿದ್ದು ಇದಕ್ಕೂ ಈಗ ಸರಕಾರ ಅಡ್ಡಿಪಡಿಸಲು ಹೊರಟಿದೆ. ಸರಕಾರ ಹಲಾಲ್ ಆಹಾರಗಳ ಹೆಚ್ಚು ಉತ್ಪಾದನೆಯಾಗುತ್ತಿದೆ. ಆದ್ದರಿಂದ ಧಾರ್ಮಿಕ ತೀವ್ರವಾದ ಹೆಚ್ಚುವ ಆತಂಕವಿದೆ ಎಂದು ಸರಕಾರ ತನ್ನ ಆದೇಶವನ್ನು ಸಮರ್ಥಿಸಿಕೊಂಡಿದೆ.

ಚೀನದಲ್ಲಿ ಶಿಂಜಿಯಾಂಗ್ ಮುಸ್ಲಿಮರಲ್ಲಿ ವೈಚಾರಿಕ ಬದಲಾವಣೆಗಾಗಿ ಬಲವಂತದಿಂದ ಪರಿವರ್ತನಾ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ. ಶಿಂಜಿಯಾಂಗ್ ಮುಸ್ಲಿಮರ ಮೇಲೆ ವಿಧಿಸಿದ ದಬ್ಬಾಳಿಕೆ ಹೊಸದೇನಲ್ಲ. ಮುಸ್ಲಿಮರ ಧಾರ್ಮಿಕ ವಿಶ್ವಾಸವನ್ನು ಬದಲಾಯಿಸಲು ಚೀನ ಸರಕಾರ ಅನೇಕ ರೀತಿಯ ಅಕ್ರಮಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದೆ.

Check Also

ಮಗನ ಕೊಲೆಗಾರನಿಗೆ ನ್ಯಾಯಾಲಯದಲ್ಲಿ ಜೀವದಾನ ನೀಡಿದ ತಾಯಿ -ತಾಯಿಯ ಮಾತು ಕೇಳಿ-ವಿಡಿಯೋ

Image : USA Today ಮಗನ ಕೊಲೆಗಾರನಿಗೆ ಗರಿಷ್ಟ ಶಿಕ್ಷೆ ಆಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಇಲ್ಲೊಬ್ಬರು ತಾಯಿ ತನ್ನ …

Leave a Reply

Your email address will not be published. Required fields are marked *