ಅನಧಿಕೃತವಾಗಿ ಹಜ್‍ಗೆ ಬರುವವರನ್ನು ತಡೆಯಲು ಕಟ್ಟು ನಿಟ್ಟಿನ ಪರಿಶೀಲನೆ

ಸೌದಿ ಅರೇಬಿಯ, ಆ.9: ಅನುಮತಿಯಿಲ್ಲದೆ ಯಾರಿಗೂ ಮಕ್ಕ ಪ್ರವೇಶಿಸಲು ಸಾಧ್ಯವಾಗದಂತೆ ಸುರಕ್ಷಾ ತಪಾಸಣೆ ಆರಂಭಗೊಂಡಿದೆ. ಅನಧಿಕೃತವಾಗಿ ವಾಹನ ಬಂದರೆ ಅದನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಗಡಿಪಾರು ಶಿಕ್ಷೆ ನೀಡಲಾಗುತ್ತದೆ.

ಹಜ್‍ಗೆ ಬರುವ ಹಾಜಿಗಳ ಸಂಖ್ಯೆ ಹೆಚ್ಚಿರುವುದರಿಂದ ತಪಾಸಣೆಯಲ್ಲಿಯೂ ತುಂಬ ಕಟ್ಟುನಿಟ್ಟು ಆರಂಭಗೊಂಡಿದೆ. ಈ ನಡುವೆ ಮಕ್ಕಕ್ಕೆ ಬರಲು ನಕಲಿ ದಾಖಲೆ ಸೃಷ್ಟಿಸಿದ ವಿದೇಶಿಯರನ್ನು ಬಂಧಿಸಲಾಯಿತು.

ಸ್ವದೇಶಿಗಳು ಮತ್ತು ವಿದೇಶಿಗಳಿಗೆ ಹಜ್ ಅನುಮತಿ ಪತ್ರ ಅಥವಾ ತಸ್ರೀಹ್ ಇರಬೇಕು. ನಂತರವೇ ಮಕ್ಕಕ್ಕೆ ಪ್ರವೇಶ ದೊರಕುತ್ತದೆ. ಇದಕ್ಕೆ ಬೇಕಾದ ತಪಾಸಣೆ ಬಹಳ ದಿನಗಳ ಹಿಂದೆಯೇ ಆರಂಭವಾಗಿತ್ತು. ಆದರೆ ಯಾತ್ರಿಕರ ಪ್ರವಾಹ ಹರಿದು ಬರಲು ಆರಂಭಗೊಂಡದ್ದರಿಂದ ಚೆಕ್‍ಪೊಯಿಂಟುಗಳನ್ನು ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿದೆ.

ನಿನ್ನೆ ಬೆಳಗಿನಿಂದ ಹಲವಾರು ವಾಹನಗಳನ್ನು ತಡೆದು ನಿಲ್ಲಿಸಿ ಚೆಕ್ ಮಾಡಲಾಗುತ್ತಿದೆ. ಅನಧಿಕೃತವಾಗಿ ಬಂದವರನ್ನು ತಡೆದು ನಿಲ್ಲಿಸಿ ಗಡಿಪಾರುಗೊಳಿಸಲು ಸಂಬಂಧ ಪಟ್ಟ ಇಲಾಖೆಗೆ ಒಪ್ಪಿಸಲಾಗಿದೆ.

ಇದೇ ವೇಳೇ ಮಕ್ಕಕ್ಕೆ ಬರಲು ನಕಲಿ ದಾಖಲೆ ಸೃಷ್ಟಿಸಿದ ನಾಲ್ವರು ವಿದೇಶಿಗಳನ್ನು ಬಂಧಿಸಲಾಯಿತು. ಅನಧಿಕೃತ ದಾರಿಯಲ್ಲಿ ಮಕ್ಕಕ್ಕೆ ಬರುವ ಯತ್ನವನ್ನು ಸಂಪೂರ್ಣ ತಡೆಯುವುದು ಉದ್ದೇಶವಾಗಿದೆ. ಅನಧಿಕೃತವಾಗಿ ಮಕ್ಕಕ್ಕೆ ತಲುಪಿಸಲು ಯತ್ನಿಸುವವರ ವಾಹನಗಳನ್ನು ಕಸ್ಟಡಿಗೆ ಪಡೆಯಲಾಗುವುದು.

ಕಾನೂನು ಉಲ್ಲಂಘಿಸುವವರನ್ನು ಕೂಡಲೇ ಗಡಿಪಾರು ಮಾಡಿ ಊರಿಗೆ ಕಳುಹಿಸಲಾಗುವುದು. ಮತ್ತೆ ಅವರಿಗೆ ಸೌದಿ ಅರೇಬಿಯಕ್ಕೆ ಮುಂದಿನ ಹತ್ತು ವರ್ಷ ಕಾಲ ಪ್ರವೇಶಿಸಲು ಸಾಧ್ಯವಿಲ್ಲ.

ಜವಾಸತ್, ಜೈಲು ಇಲಾಖೆಯಲ್ಲದೆ ವಿವಿಧ ಇಲಾಖೆಗಳು ಜಂಟಿಯಾಗಿ ತಪಾಸಣೆ ನಿರತವಾಗಿದೆ. ಉದ್ಯೋಗ ಅನುಮತಿ, ಮಕ್ಕದಲ್ಲಿ ವಾಸಿಸುವವರಿಗೆ ಪ್ರವೇಶವನ್ನು ತಡೆಯಲಾಗಿಲ್ಲ.

Check Also

ಮಕ್ಕದಲ್ಲಿ ನಡೆಯಲು ಕಷ್ಟಪಡುತ್ತಿದ್ದ ಮಹಿಳೆಗೆ ತನ್ನ ಶೂ ನೀಡಿದ ಪೊಲೀಸ್- ವೀಡಿಯೊ ವೈರಲ್

ಸೌದಿ ಅರೇಬಿಯ, ಆ.14: ಮಕ್ಕದಲ್ಲಿ ಭಾರೀ ಉಷ್ಟತೆಯಿದೆ. ಆದ್ದರಿಂದ ರಸ್ತೆಯಲ್ಲಿ ನಡೆಯಲು ಆಗದೆ ಕಷ್ಟ ಅನುಭವಿಸಿದ ಮಹಿಳಾ ಹಾಜಿಯೊಬ್ಬರಿಗೆ ಸೌದಿ …

Leave a Reply

Your email address will not be published. Required fields are marked *